More

    ಅಂತರ್ಜಲಮಟ್ಟ ಅರಿಯಲು ‘ಎಐ’ ತಂತ್ರಜ್ಞಾನ

    ಬೆಂಗಳೂರು: ನಗರದ ಅಂತರ್ಜಲಮಟ್ಟದ ಮೇಲೆ ನಿರಂತರಾಗಿ ನಿಗಾ ಇಡಲು ಐಐಎಸ್​ಸಿ ವಿಜ್ಞಾನಿನಿಗಳು, ಸಿಜಿಡಬ್ಲ್ಯೂಬಿ ಜತೆಗೂಡಿ ಎಐ ಆಧಾರಿತ ‘ಗ್ರೌಂಡ್​ ವಾಟರ್​ ಮಾನಿಟರಿಂಗ್​ ಸಿಸ್ಟಮ್​’ ಅಳವಡಿಸಿಕೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

    ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಐಐಎಸ್​ಸಿ ವಿಜ್ಞಾನಿಗಳು ಮತ್ತು ಸೆಂಟ್ರಲ್​ ಗ್ರೌಂಡ್​ ವಾಟರ್​ ಬೋರ್ಡ್​ನ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ನಗರದಲ್ಲಿ ನೀರಿನ ಕೊರತೆ ಎದುರಾಗಲು ಅಂತರ್ಜಲ ಕುಸಿತವೇ ಪ್ರಮುಖ ಕಾರಣ. ಅಂತರ್ಜಲಮಟ್ಟ ಯಾವ ಹಂತದಲ್ಲಿದೆ? ಯಾವ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಹೆಚ್ಚಿದೆ ಎಂಬುದರ ಸರಿಯಾದ ಮಾಹಿತಿ ಲಭ್ಯವಾಗದೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಂತ್ರಾನ ಆಧಾರಿತ ವ್ಯವಸ್ಥೆಯನ್ನು ಅಳವಡಿಸಬೇಕಿದೆ. ಹೀಗಾಗಿ ಐಐಎಸ್​ಸಿ ವಿಾನಿಗಳು, ಸಿಡಬ್ಲುಜಿಬಿ ಮತ್ತು ಅಂತರ್ಜಲ ಪ್ರಾಧಿಕಾರದ ಜತೆಗೂಡಿ ಎಐ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಜಲಮಂಡಳಿ ಮುಂದಾಗಿದೆ ಎಂದರು.

    ಕಾರ್ಯಪಡೆ ರಚನೆ:

    ಐಐಎಸ್​ಸಿ ವಿಜ್ಞಾನಿಗಳು, ಸಿಡಬ್ಲುಜಿಬಿ ಹಾಗೂ ಅಂತರ್ಜಲ ಪ್ರಾಧಿಕಾರದ ಸಹಯೋಗದೊಂದಿಗೆ ಜಲಮಂಡಳಿಯಲ್ಲಿ ಅಂತರ್ಜಲ ಕಾರ್ಯಪಡೆ (ಗ್ರೌಂಡ್​ ವಾಟರ್​ ಟಾಸ್ಕ್​ಫೋರ್ಸ್​) ರಚಿಸಲಾಗುವುದು. ಈ ಮೂಲಕ ನಗರದ ಅಂತರ್ಜಲಮಟ್ಟದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ನಿರಂತರವಾಗಿ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮೂಲಕ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಈ ಕಾರ್ಯಪಡೆ ಸಹಾಯ ಮಾಡಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts