More

    ತವರಿನ ಕರೊನಾ ಹೋರಾಟಕ್ಕೆ ಇಂಗ್ಲೆಂಡ್‌ನಿಂದಲೇ ವಿಹಾರಿ ಸಹಾಯಹಸ್ತ

    ನವದೆಹಲಿ: ಕೌಂಟಿ ಕ್ರಿಕೆಟ್ ಆಡುವ ಸಲುವಾಗಿ ಇಂಗ್ಲೆಂಡ್‌ನಲ್ಲಿರುವ ಭಾರತ ಟೆಸ್ಟ್ ತಂಡದ ಬ್ಯಾಟ್ಸ್‌ಮನ್ ಹನುಮ ವಿಹಾರಿ, ತಮ್ಮ ಸ್ನೇಹಿತರ ಮೂಲಕ ಅಲ್ಲಿಂದಲೇ ತವರೂರು ಆಂಧ್ರದಲ್ಲಿ ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ಈ ಮೂಲಕ ವಿದೇಶದಲ್ಲಿದ್ದರೂ ತಮ್ಮ ಹೃದಯ ಮಾತ್ರ ದೇಶದ ಪರವಾಗಿಯೇ ಮಿಡಿಯುತ್ತಿದೆ ಎಂದು ಸಾಬೀತುಪಡಿಸಿದ್ದಾರೆ.

    ತಮ್ಮದೇ ಗೆಳೆಯರ ಬಳಗವನ್ನು ರಚಿಸಿಕೊಂಡು ವಿಹಾರಿ ಸಂಕಷ್ಟದಲ್ಲಿರುವವರ ನೆರವಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. ಜನರ ನೆರವಿಗಾಗಿ ವಾಟ್ಸಾಪ್‌ನಲ್ಲಿ ತಾವು ರಚಿಸಿರುವ ಗುಂಪಿನಲ್ಲಿ ಸುಮಾರು 100 ಸದಸ್ಯರಿದ್ದು, ಅವರ ಮೂಲಕ ಅಗತ್ಯವಿರುವವರಿಗೆ ನೆರವು ನೀಡಲಾಗುತ್ತಿದೆ ಎಂದು ವಿಹಾರಿ ಇಂಗ್ಲೆಂಡ್‌ನಿಂದ ದೂರವಾಣಿ ಮೂಲಕ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನ ಕರೊನಾ ಸೋಂಕಿತೆಗೆ ಆರ್‌ಸಿಬಿ ಆಟಗಾರ ಚಾಹಲ್ ನೆರವು

    ಕಳೆದ ಏಪ್ರಿಲ್‌ನಲ್ಲಿ ಭಾರತದಿಂದ ತೆರಳಿದ್ದ ವಿಹಾರಿ, ವಾರ್ವಿಕ್‌ಶೈರ್ ಪರ ಆಡುತ್ತಿದ್ದಾರೆ. ಈ ನಡುವೆ ತಮ್ಮ ಟ್ವಿಟರ್‌ನಲ್ಲಿ ಸದಾ ಚಟುವಟಿಕೆಯಲ್ಲಿರುವ 27 ವರ್ಷದ ವಿಹಾರಿ, ನೆರವು ಕೇಳಿದವರಿಗೆ ತಮ್ಮ ಗೆಳೆಯರ ಬಳಗದ ಮೂಲಕ ಕೂಡಲೆ ಸ್ಪಂದಿಸುತ್ತಿದ್ದಾರೆ. ಪ್ಲಾಸ್ಮಾ, ಆಕ್ಸಿಜನ್ ಸಿಲಿಂಡರ್, ಆಸ್ಪತ್ರೆ ಬೆಡ್ ಮತ್ತು ಆಹಾರ ಸಿಗದೆ ಪರದಾಡುತ್ತಿರುವವರಿಗೆ ವಿಹಾರಿ ಗೆಳೆಯರ ಬಳಗ ನೆರವು ನೀಡುತ್ತಿದೆ.

    ‘ನಾನು ನನ್ನ ಬಗ್ಗೆ ವೈಭವೀಕರಿಸಲು ಇಷ್ಟಪಡುವುದಿಲ್ಲ. ಜನರಿಗೆ ನೆರವಾಗುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ. ಈ ಕಠಿಣ ಸಮಯದಲ್ಲಿ ನಿಜವಾಗಿಯೂ ಅಗತ್ಯ ಇರುವವರಿಗೆ ಸ್ಪಂದಿಸುತ್ತಿದ್ದೇನೆ. ಇದು ಆರಂಭ ಮಾತ್ರ’ ಎಂದು ಭಾರತ ಪರ ಇದುವರೆಗೆ 11 ಟೆಸ್ಟ್ ಆಡಿ 624 ರನ್ ಗಳಿಸಿರುವ ವಿಹಾರಿ ಹೇಳಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಅವರು, ಜೂನ್ 3ರಂದು ಅಲ್ಲಿಯೇ ನೇರವಾಗಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

    ಸನ್​ರೈಸರ್ಸ್ ತಂಡದ ನಾಯಕತ್ವ ತ್ಯಜಿಸುವಾಗ ಡೇವಿಡ್​ ವಾರ್ನರ್​ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts