More

    ವ್ಯಾಪಾರ ಅವಧಿ ಕಡಿತಕ್ಕೆ ಮನವಿ

    ಚನ್ನಮ್ಮನ ಕಿತ್ತೂರು: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಾರ-ವ್ಯವಹಾರಕ್ಕಾಗಿ ಸರ್ಕಾರ ನಿಗದಿಪಡಿಸಿರುವ ಅವಧಿಯಲ್ಲೇ ಕೆಲ ಸಮಯ ಕಡಿತಗೊಳಿಸುವ ನಿರ್ಣಯ ಕೈಗೊಂಡಿರುವ ಪಟ್ಟಣದ ವರ್ತಕರು ಈ ಕುರಿತು ತಹಸೀಲ್ದಾರ್ ಪ್ರವೀಣ ಜೈನ್ ಹಾಗೂ ಪಪಂ ಮುಖ್ಯಾಧಿಕಾರಿ ಬಿ.ಬಿ.ಗೊರೋಶಿ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರು ದಿನಸಿ ಸೇರಿ ಇನ್ನುಳಿದ ಅವಶ್ಯಕ ವಸ್ತುಗಳ ನೆಪವೊಡ್ಡಿ ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಇದರಿಂದ ಕರೊನಾ ಹರಡುವ ಸಾಧ್ಯತೆ ಇದ್ದು, ತಡೆಗಟ್ಟುವ ನಿಟ್ಟಿನಲ್ಲಿ ವರ್ತಕರು ದಿಟ್ಟ ಹೆಜ್ಜೆ ಇಡುವ ಅವಶ್ಯಕತೆ ಇದೆ. ಪಟ್ಟಣದ ಹಿತದೃಷ್ಟಿಯಿಂದ ಈ ನಿರ್ಣಯ ಕೈಗೊಂಡಿರುವ ವರ್ತಕರು ಈಗಾಗಲೇ ಸರ್ಕಾರ ನಿಗದಿಪಡಿಸಿದ್ದ ವೇಳೆಯನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಸ್ವಯಂ ಪ್ರೇರಣೆಯಿಂದ ಮಧ್ಯಾಹ್ನ 1 ಗಂಟೆಗೆ ವಹಿವಾಟು ಸ್ಥಗಿತಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮನವಿಯಲ್ಲಿ ವರ್ತಕರು ತಿಳಿಸಿದ್ದಾರೆ. ಈ ಕುರಿತು ಪಟ್ಟಣದ ಎಲ್ಲ ವರ್ತಕರಿಗೂ ಮನದಟ್ಟು ಮಾಡುತ್ತೇವೆ ಎಂದು ವರ್ತಕರು ತಿಳಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಪ್ರವೀಣ ಜೈನ್ ಮಾತನಾಡಿ, ಸಮಾಜದ ಆರೋಗ್ಯದ ಕುರಿತು ವರ್ತಕರು ಸ್ವಯಂ ಪ್ರೇರಣೆಯಿಂದ ಕೈಗೊಂಡಿರುವ ನಿರ್ಣಯ ಸ್ವಾಗತಾರ್ಹ ಎಂದರು. ಪಪಂ ಮುಖ್ಯಾಧಿಕಾರಿ ಬಿ.ಬಿ.ಗೊರೋಶಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts