More

    ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಾ?; ತೈಲ ಕಂಪನಿಗಳಿಗೆ ಬಂಪರ್ ಲಾಭದ ನಂತರ ಮೋದಿ ಸರ್ಕಾರದಿಂದ ದೊಡ್ಡ ಸಿದ್ಧತೆ: ವರದಿ

    ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಜನಸಾಮಾನ್ಯರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆಯಿದೆ. ಏಕೆಂದರೆ ಮುಂಬರುವ ಲೋಕಸಭೆ ಚುನಾವಣೆ 2024 ರ ಮೊದಲು ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ಸಾಮಾನ್ಯ ಜನರಿಗೆ ಕೊಡಲು ಕೇಂದ್ರ ಸರ್ಕಾರವು ಚರ್ಚಿಸುತ್ತಿದೆ. ಹಾಗೆ ನೋಡಿದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

    ಕಡಿಮೆಯಾಗಿದೆ ತೈಲ ಕಂಪನಿಗಳ ನಷ್ಟ
    ಕಚ್ಚಾ ತೈಲ ದುಬಾರಿಯಾದ ನಂತರ, 2022 ರಲ್ಲಿ, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 17 ರೂ. ಮತ್ತು ಡೀಸೆಲ್ ಮೇಲೆ 35 ರೂ. ವರೆಗೆ ನಷ್ಟವನ್ನು ಅನುಭವಿಸುತ್ತಿದ್ದವು. ಆದರೆ ಕಚ್ಚಾ ತೈಲದ ಬೆಲೆ ಕುಸಿತದ ನಂತರ ಪರಿಸ್ಥಿತಿ ಬದಲಾಗಿದೆ.

    ಬಂಪರ್ ಲಾಭ ಗಳಿಸಿವೆ ತೈಲ ಕಂಪನಿಗಳು
    ಕಳೆದ ಮೂರು ತ್ರೈಮಾಸಿಕಗಳಲ್ಲಿ ತೈಲ ಕಂಪನಿಗಳು ಬಂಪರ್ ಲಾಭವನ್ನು ದಾಖಲಿಸುತ್ತಿವೆ. ಕಳೆದ ತ್ರೈಮಾಸಿಕದಲ್ಲಿ ಮೂರು ಸರ್ಕಾರಿ ಕಂಪನಿಗಳಾದ IOC, HPCL ಮತ್ತು BPCL ಒಟ್ಟಾಗಿ 28,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಲಾಭವನ್ನು ದಾಖಲಿಸಿವೆ ಎಂಬ ಅಂಶದಿಂದ ನೀವು ಇದನ್ನು ಅಂದಾಜು ಮಾಡಬಹುದು. ಹೆಚ್ಚಿದ ಕಚ್ಚಾ ತೈಲ ಬೆಲೆಯಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಲಾಗಿದೆ ಮತ್ತು ಈಗ ಅಗ್ಗದ ಕಚ್ಚಾ ತೈಲದ ಲಾಭವನ್ನು ಸಾಮಾನ್ಯ ಜನರಿಗೆ ನೀಡಬೇಕು ಎಂದು ಸರ್ಕಾರ ಹೇಳಿದೆಯೆಂದು ವರದಿ ಹೇಳಿದೆ.   

    ಕಚ್ಚಾ ತೈಲ ಬೆಲೆಯಲ್ಲಿ ಕುಸಿತ
    ಕಚ್ಚಾ ತೈಲದ ಬೆಲೆ 52 ವಾರ ಕನಿಷ್ಠ ಮಟ್ಟದಲ್ಲಿದೆ. ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ಪ್ರತಿ ಬ್ಯಾರೆಲ್​​​​ಗೆ ಸುಮಾರು $ 76 ಮತ್ತು WTI ಕಚ್ಚಾ ಪ್ರತಿ ಬ್ಯಾರೆಲ್​​​ಗೆ ಸುಮಾರು $ 71 ಆಗಿದೆ. ಜಾಗತಿಕವಾಗಿ ಬೇಡಿಕೆ ಕಡಿಮೆಯಾಗಿರುವುದೇ ಈ ವಾರ ಕಚ್ಚಾ ತೈಲದ ಕುಸಿತಕ್ಕೆ ಪ್ರಮುಖ ಕಾರಣ. ತೈಲ ಉತ್ಪಾದಕ ದೇಶಗಳು ಬೆಲೆಗಳನ್ನು ಹೆಚ್ಚಿಸಲು ಮಾಡುತ್ತಿರುವ ನಿರಂತರ ಕಡಿತವು ಕಚ್ಚಾ ತೈಲದ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಕಚ್ಚಾ ತೈಲದ ಬೆಲೆ ಭವಿಷ್ಯದಲ್ಲಿಯೂ ಕಡಿಮೆಯಾಗಬಹುದು ಎಂದು ನಂಬಲಾಗಿದೆ.

    ವಿಶ್ವದ ಅತ್ಯಂತ ಶ್ರೀಮಂತ ಕುಟುಂಬಗಳು; ಈ ಪಟ್ಟಿಯಲ್ಲಿದೆ ಅಂಬಾನಿ ಫ್ಯಾಮಿಲಿ

     

     

     

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts