More

    ಅರ್ಧ ದಾರಿಯಲ್ಲೇ ಸಂಚಾರ ನಿಲ್ಲಿಸಿದ ಗ್ಯಾರಂಟಿ ಬಸ್!


    -ಗಂಟೆಗೆ 20ಕಿಮಿ ಓಡುವ ಗ್ಯಾರಂಟಿ ಬಸ್
    ಬೆಳಗಾವಿ:ದೇಶದಲ್ಲೇ ಉತ್ತಮ ಸಾರಿಗೆ ವ್ಯವಸ್ಥೆ ಎಂಬ ಖ್ಯಾತಿ ಪಡೆದುಕೊಂಡಿರುವ ಕರ್ನಾಟಕ ಸಾರಿಗೆ ಬಸ್ ಗಳು ಇದೀಗ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಸ್ಥಿತಿಗೆ ಬಂದು ನಿಂತಿವೆ.
    ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದಿಂದ ಸಂಜೆ 5.40 ಗಂಟೆಗೆ ಹೊರಟ ಬಾಗಲಕೋಟ ಡಿಪೋ ಸಾರಿಗೆ ಬಸ್ ರಾತ್ರಿ 7ಗಂಟೆಯ ವೇಳೆಗೆ 19ಕಿಮೀ ದೂರ ಕ್ರಮಿಸಿ ದಾರಿ ಮಧ್ಯದಲ್ಲಿಯೇ ಸಂಚಾರ ನಿಲ್ಲಿಸಿತು. ಪರಿಣಾಮ ಬಸ್ ನಲ್ಲಿದ್ದ 40ಕ್ಕೂ ಅಧಿಕ ಮಹಿಳಾ ಪ್ರಯಾಣಿಕರು ಪರ್ಯಾಯ ವಾಹನ ಸಿಗದೆ ದಾರಿಯಲ್ಲೇ ಪರದಾಡಬೇಕಾಯಿತು. 10 ಲಕ್ಷ ಕಿಮೀ ಓಡಿರುವ ಅತ್ಯಂತ ಹಳೆಯ ಬಸ್ ಗಳ ಸಂಚಾರದಿಂದ ಪ್ರಯಾಣಿಕರು ನಿತ್ಯ ಹೈರಾಣಾಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts