More

    ಗಜೇಂದ್ರಗಡದಿಂದ ದ್ಯಾಮುಣಸಿ ಗ್ರಾಮಕ್ಕೆ ಬಸ್ ಸೌಲಭ್ಯ

    ಗಜೇಂದ್ರಗಡ: ಗ್ರಾಮೀಣ ಭಾಗದ ಜನರಿಗೆ ಎಲ್ಲ ಸೌಕರ್ಯ ಒದಗಿಸುವುದರ ಜತೆಗೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.


    ಬಸ್ ಸೌಲಭ್ಯದಿಂದ ವಂಚಿತವಾಗಿದ್ದ ತಾಲೂಕಿನ ದ್ಯಾಮುಣಸಿ ಗ್ರಾಮಕ್ಕೆ ಮಂಗಳವಾರ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.


    ಕಳೆದ ಹಲವು ದಶಕಗಳಿಂದ ದ್ಯಾಮುಣಸಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಹಲವಾರು ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಅದರಲ್ಲೂ ದ್ಯಾಮುಣಿಸಿ ಗ್ರಾಮದ ಸುತ್ತಲೂ ಕೆರೆ, ಹಳ್ಳ ಹಾಗೂ ಗುಡ್ಡ ಆವರಿಸಿದ್ದರಿಂದ ಗ್ರಾಮಕ್ಕೆ ಬಸ್ ಸಂಚಾರ ಸಾಧ್ಯವಾಗಿರಲಿಲ್ಲ.

    ಪರಿಣಾಮ ನಿತ್ಯ ಗ್ರಾಮದಿಂದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಗ್ರಾಮಸ್ಥರು ಬೇರೆ ಗ್ರಾಮಗಳಿಗೆ ತೆರಳಲು ಪರದಾಡುವಂತಾಗಿತ್ತು. ಅವರ ಪರದಾಟ ತಪ್ಪಿಸಲು ಈಗ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.


    ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ ಮುಖಂಡರಾದ ಎಚ್.ಎಸ್. ಸೋಂಪುರ, ಶ್ರೀಧರ ಬಿದರಳ್ಳಿ, ವಿ.ಬಿ. ಸೋಮನಕಟ್ಟಿಮಠ, ಯಲ್ಲಪ್ಪ ಬಂಕದ, ಎ.ಡಿ. ಕೋಲಕಾರ, ಮುತ್ತಣ್ಣ ಮ್ಯಾಗೇರಿ, ಅರ್ಜುನ ರಾಠೋಡ, ಖಾಸಿಂ ತೋಟದ, ಅರಿಹಂತ ಬಾಗಮಾರ, ಬಸವರಾಜ ಚನ್ನಿ, ಮಲ್ಲಿಕಾರ್ಜುನ ಗಾರಗಿ, ನೀಲಮ್ಮ ಬಳೂಟಗಿ, ನಂದಾ ಮನ್ನೇರಾಳ, ಶ್ರೀಕಾಂತ ತಾಳಿಕೋಟಿ, ಸಿದ್ದು ಗೊಂಗಡಶೆಟ್ಟಿಮಠ, ಘಟಕದ ವ್ಯವಸ್ಥಾಪಕ ಚಂದಶೇಖರ ಲೋಖಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts