ಬಸ್‌-ಬೈಕ್‌ ನಡುವೆ ಅಪಘಾತ ಇಬ್ಬರು ಸಾವು

Bike-accident
Published on

ಮುಂಡಗೋಡ: ಬೈಕ್ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರಿಬ್ಬರು ಮೃತಪಟ್ಟ ಘಟನೆ ತಾಲೂಕಿನ ಶಿಂಗ್ನಳ್ಳಿ ಸಮೀಪ ಭಾನುವಾರ ನಡೆದಿದೆ.
ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಹಾಬಲೇಶ್ವರ ಸಂಕಪಾಳೆ(38) ಎಂಬವನು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಹಾನಗಲ್ ತಾಲೂಕಿನ ಹುಡೆ ಗ್ರಾಮದ ಜಾಫರಸಾಬ ದೇವಿಹೋಸೂರ(32)ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಮುಂಡಗೋಡಿನಿಂದ ಹಾನಗಲ್‌ಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಪಾಳಾದಿಂದ ಮುಂಡಗೋಡನತ್ತ ಬರುತ್ತಿದ್ದ ಬೈಕ್ ನಡುವೆ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ತಾಲೂಕಿನ ಶಿಂಗ್ನಳ್ಳಿ ಜಲಾಶಯ ಕ್ರಾಸ್ ಸನಿಹ ಡಿಕ್ಕಿ ಸಂಭವಿಸಿತ್ತು. ಮುಂಡಗೋಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net