More

    ಸ್ವಾತಂತ್ರ್ಯಾನಂತರ ಇಲ್ಲಿಗೆ ಮೊದಲ ಬಾರಿಗೆ ಬಸ್ ಆಗಮನ!

    ಮುದ್ದೇಬಿಹಾಳ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತೋಡಿಕೊಂಡ ಅಳಲಿಗೆ ಆಡಳಿತ ವರ್ಗದಿಂದ ಸ್ಪಂದನೆ ದೊರೆತಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮಕ್ಕೆ ಸ್ವಾತಂತ್ರ ಸಿಕ್ಕು 75 ವರ್ಷದ ನಂತರ ಮೊದಲ ಬಾರಿಗೆ ಸೋಮವಾರ ಸಾರಿಗೆ ಸಂಸ್ಥೆ ಬಸ್ ಆಗಮಿಸಿದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ತಮ್ಮೂರಿಗೆ ಆಗಮಿಸಿದ ಬಸ್ಸನ್ನು ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಿದರು.

    ಗ್ರಾಮ ಪಂಚಾಯತ್ ಸದಸ್ಯ ದ್ಯಾವಪ್ಪ ಹುಣಶ್ಯಾಳ ಮಾತನಾಡಿ, ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದ ಸಮಸ್ಯೆಗೆ ತಕ್ಷಣ ಸ್ಪಂದಿಸಿರುವ ತಾಲೂಕಾಡಳಿತಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

    ಘಟಕ ವ್ಯವಸ್ಥಾಪಕ ಬಿ.ಬಿ. ಚಿತ್ತವಾಡಗಿ ಮಾತನಾಡಿ, ಶಿರೋಳಕ್ಕೆ ಗ್ರಾಮಸ್ಥರ ಮನವಿ ಮೇರೆಗೆ ಬೆಳಗ್ಗೆ 9 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಬಸ್ ಸಂಚರಿಸುವುದಾಗಿ ತಿಳಿಸಿದರು.

    ಗ್ರಾಮಸ್ಥರಾದ ಅಬ್ದುಲ್‌ ರಜಾಕ್ ತಮದಡ್ಡಿ, ಶಿವನಗೌಡ ಪಾಟೀಲ, ರಾಮಣ್ಣ ರಾಜನಾಳ, ಹಣಮಂತ ಮಾದರ, ಕಂಠೆಪ್ಪ ಇಂಜಗನರಿ, ಶಂಕರಲಿಂಗ ಹೆಬ್ಬಾಳ, ಲಾಲಸಾಬ್ ಮುದ್ನಾಳ, ಜಟ್ಟೆಪ್ಪ ಲೇಬಗೇರಿ, ಮಲ್ಲು ಕೋರಿ, ನಿಂಗಪ್ಪ ಬಿರಾದಾರ, ಯಮನಪ್ಪ ಚಲವಾದಿ ಇತರರಿದ್ದರು.

    ಸ್ವಾತಂತ್ರ್ಯಾನಂತರ ಇಲ್ಲಿಗೆ ಮೊದಲ ಬಾರಿಗೆ ಬಸ್ ಆಗಮನ!

    ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

    ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಮುಂದುವರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts