More

    ಬಸ್ ಡಿಕ್ಕಿಯಾಗಿ ಮನೆ ಜಖಂ

    ಎಚ್.ಡಿ.ಕೋಟೆ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಮನೆ, ಎರಡು ಬೈಕ್ ಜಖಂಗೊಂಡು ಬೈಕ್ ಸವಾರನೊಬ್ಬ ಗಂಭೀರ ಗಾಯಗೊಂಡಿದ್ದಾನೆ.\


    ಸೋಮವಾರ ಎಚ್.ಡಿ.ಕೋಟೆ ಘಟಕದಿಂದ ಹ್ಯಾಂಡ್‌ಪೋಸ್ಟ್ ಮಾರ್ಗವಾಗಿ ಬೀರಂಬಳ್ಳಿ ಗ್ರಾಮಕ್ಕೆ ತೆರಳಿದ ಸಾರಿಗೆ ಸಂಸ್ಥೆ ಬಸ್ ವಾಪಸ್ ಅದೇ ಮಾರ್ಗವಾಗಿ ಎಚ್.ಡಿ.ಕೋಟೆಗೆ ಬರುತ್ತಿತ್ತು. ಆ ಸಂದರ್ಭದಲ್ಲಿ ಮೂರ್ ಬಂದ್ ಗ್ರಾಮದ ಬಳಿ ಬಂದಾಗ ಮನೆ ಮುಂಭಾಗ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ಅಸ್ಗರ್ ಮತ್ತು ಸೈಯದ್ ನಜೀಮ್ ಬೈಕ್‌ಗಳಿಗೆ ಬಸ್ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ಇದ್ದ ಚರಂಡಿಗೆ ನುಗ್ಗಿ ನಂತರ ಮನೆಗೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಮನೆ ಮುಂಭಾಗದ ಗೋಡೆ ಕುಸಿದು ಮನೆಯೊಳಗೆ ಇದ್ದ ಬೀರು, ಮಂಚ ಹಾಗೂ ಇತರ ವಸ್ತುಗಳು ಹಾಳಾಗಿವೆ. ಸೈಯದ್ ನಜೀಮ್ ಗಂಭೀರ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೆ, ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts