More

    ಬರ್ನಿಂಗ್ ಮಷಿನ್ ಪ್ರಯೋಗ ಯಶಸ್ವಿ

    ಸುಳ್ಯ: ಸುಳ್ಯ ನಗರದಲ್ಲಿ ಸಂಗ್ರಹಿಸಲಾಗುವ ಕಸವನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿಲೇವಾರಿ ಮಾಡಲು ಕಲ್ಚರ್ಪೆಯಲ್ಲಿ ಪ್ರಾಯೋಗಿಕವಾಗಿ ಬರ್ನಿಂಗ್ ಮಷಿನ್ ಅಳವಡಿಸಲಾಗಿದ್ದು, ಈ ಪ್ರಯೋಗ ಈಗ ಯಶಸ್ವಿಯಾಗಿದೆ.

    ನಗರ ಪಂಚಾಯಿತಿಯ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣುವ ನಿರೀಕ್ಷೆ ಇದೆ. ಗ್ಯಾಸಿಫಿಕೇಶನ್ ಯಂತ್ರದ ಮೂಲಕ ಕಸವನ್ನು ಉರಿಸಲಾಗುತ್ತದೆ. ಪರಿಸರಸ್ನೇಹಿಯಾದ ಈ ಯಂತ್ರದಲ್ಲಿ ಕಸವನ್ನು ವಿಲೇವಾರಿ ಮಾಡಿದಾಗ ಗ್ಯಾಸ್ ಮತ್ತು ಬೂದಿ ಸಿಗುತ್ತಿದ್ದು, ಇದನ್ನು ಮರುಬಳಕೆ ಮಾಡಬಹುದು.

    ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಬರ್ನಿಂಗ್ ಯಂತ್ರದಲ್ಲಿ ಒಂದು ಗಂಟೆಯಲ್ಲಿ 150 ಕೆ.ಜಿ. ತ್ಯಾಜ್ಯವನ್ನು ಉರಿಸಬಹುದು. ದಿನನಿತ್ಯ ಸುಳ್ಯ ನಗರದಲ್ಲಿ ಒಂದು ಟನ್‌ಗಿಂತಲೂ ಹೆಚ್ಚು ಕಸ ಸಂಗ್ರಹ ಆಗುತ್ತದೆ. ಸುಮಾರು ಎಂಟು ಗಂಟೆಗಳಲ್ಲಿ ಇಷ್ಟು ಕಸ ಉರಿಸಲು ಸಾಧ್ಯ. ಉರಿದಾಗ ನೀರು ಮಿಶ್ರಿತ ಬೂದಿ ಮತ್ತು ಗ್ಯಾಸ್ ದೊರೆಯುತ್ತದೆ. 150 ಕೆಜಿ ಕಸದಿಂದ 8 ರಿಂದ 10 ಕೆಜಿ ಬೂದಿ ಉತ್ಪತ್ತಿ ಆಗುತ್ತದೆ. ಇಲ್ಲಿ ಉತ್ಪತ್ತಿಯಾಗುವ ಗ್ಯಾಸನ್ನು ಸಂಗ್ರಹಿಸಿ ಬಳಕೆ ಮಾಡಬಹುದು. ಅದೇ ರೀತಿ ಬೂದಿಯನ್ನು ಬೇರ್ಪಡಿಸಿ ಇಟ್ಟಿಗೆ ನಿರ್ಮಾಣ ಮತ್ತಿತರ ಅಗತ್ಯಗಳಿಗೆ ಬಳಸಬಹುದು.

    ನಗರದ ತ್ಯಾಜ್ಯ ಸಮಸ್ಯೆಯ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಈಗ ಅಂತಿಮ ಹಂತಕ್ಕೆ ತಲುಪಿದೆ. ಬರ್ನಿಂಗ್ ಮಷಿನ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲು ಆರಂಭಿಸಿದರೆ ಸುಳ್ಯದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪರಿಸರಸ್ನೇಹಿ ಯೋಜನೆಯಿಂದ ಪರಿಸರಕ್ಕೆ ಮತ್ತು ಕಲ್ಚರ್ಪೆ ಪ್ರದೇಶದ ಜನರಿಗೆ ಆಗುತ್ತಿದ್ದ ತೊಂದರೆಗೂ ಮುಕ್ತಿ ಸಿಗಲಿದೆ. ಮುಂದಿನ ಹತ್ತು ದಿನದಲ್ಲಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಲಿದೆ.
    -ವಿನಯಕುಮಾರ್ ಕಂದಡ್ಕ, ನಗರ ಪಂಚಾಯಿತಿ ಸುಳ್ಯ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts