More

    ‘ಶ್ರೀರಾಮನ ಅಸ್ತಿತ್ವವನ್ನೇ ನಾಶ ಮಾಡುವ ಪ್ರಯತ್ನ ನಡೆಯಿತು…’: ಸೂಕ್ಷ್ಮವಾಗಿ ಇತಿಹಾಸ ಪ್ರಸ್ತಾಪಿಸಿದ ಪ್ರಧಾನಿ

    ಅಯೋಧ್ಯೆ: ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕೆಲವು ಇತಿಹಾಸವನ್ನು ಸೂಕ್ಷ್ಮವಾಗಿ ಪ್ರಸ್ತಾಪ ಮಾಡಿದರು. ರಾಮಮಂದಿರವನ್ನು ಕೆಡವಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು ಎಂಬುದನ್ನು ತಮ್ಮದೇ ಧಾಟಿಯಲ್ಲಿ ಹೇಳಿದರು.

    ಶ್ರೀರಾಮನದು ಮಾಂತ್ರಿಕ ಶಕ್ತಿ. ಅವನಿದ್ದ ಮಂದಿರವನ್ನೇ ನಾಶ ಮಾಡಲಾಗಿತ್ತು. ಶ್ರೀರಾಮನ ಅಸ್ತಿತ್ವಕ್ಕೇ ಧಕ್ಕೆಯುಂಟು ಮಾಡುವ ಪ್ರಯತ್ನ ನಡೆಯಿತು. ಆದರೆ ಶ್ರೀರಾಮ ಪ್ರತಿಯೊಬ್ಬನ ಹೃದಯದಲ್ಲಿ ನೆಲೆಸಿದ್ದ. ನಮ್ಮ ಸಂಸ್ಕೃತಿಯ ಬುನಾದಿ ಅವನು ಎಂದು ನರೇಂದ್ರ ಮೋದಿ ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಹನುಮಗಡಿ ದೇಗುಲದವರಿಂದ ಬೆಳ್ಳಿ ಕಿರೀಟ ಉಡುಗೊರೆ..

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಆಂದೋಲನದಲ್ಲಿ ಕೋಟ್ಯಂತರ ಜನರ ಸಂಕಲ್ಪ, ಹೋರಾಟ, ತ್ಯಾಗ-ಬಲಿದಾನವಿದೆ. ಅವರೆಲ್ಲರಿಗೂ ಈ ದೇಶದ 130 ಕೋಟಿ ಜನರ ಪರವಾಗಿ ಗೌರವ ಸಲ್ಲಿಸುತ್ತೇನೆ ಎಂದು ಪ್ರಧಾನಿ ಹೇಳಿದರು.
    1980ರ ದಶಕದಲ್ಲಿ ನಡೆದ ರಾಮಮಂದಿರ ಹೋರಾಟದಲ್ಲಿ ನರೇಂದ್ರ ಮೋದಿಯವರೂ ಪಾಲ್ಗೊಂಡಿದ್ದರು. ಇದೀಗ ಪ್ರಧಾನಿಯಾಗಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. (ಏಜೆನ್ಸೀಸ್​)

    VIDEO: ಶ್ರೀರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts