More

    ಕೊನೆಗೂ ವಿಸ್ತರಣೆಯಾಯ್ತು ರಾಜ್ಯ ಸಚಿವ ಸಂಪುಟ: ಬಿಎಸ್‌ವೈ ಟೀಮ್‌ಗೆ ಏಳು ಹೊಸ ಮಂತ್ರಿಗಳು

    ಬೆಂಗಳೂರು: ರಾಜ್ಯದಲ್ಲಿ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಬುಧವಾರ ಮಧ್ಯಾಹ್ನ ರಾಜಭವನದಲ್ಲಿ ನಡೆಯಿತು. ಏಳು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟವನ್ನು ಸೇರ್ಪಡೆಯಾಗಿ ಮಂತ್ರಿ ಪಟ್ಟ ಅಲಂಕರಿಸಿದರು.

    ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಹೊಸದಾಗಿ ಮಂತ್ರಿಗಳಾದವರು.

    ಕೊನೆಗೂ ವಿಸ್ತರಣೆಯಾಯ್ತು ರಾಜ್ಯ ಸಚಿವ ಸಂಪುಟ: ಬಿಎಸ್‌ವೈ ಟೀಮ್‌ಗೆ ಏಳು ಹೊಸ ಮಂತ್ರಿಗಳುಅರವಿಂದ ಲಿಂಬಾವಳಿ, ಎಸ್. ಅಂಗಾರ, ಶಂಕರ್, ಯೋಗೇಶ್ವರ್ ಈ ನಾಲ್ವರೂ ದೇವರ ಹೆಸರಿನಲ್ಲಿ, ಎಂಟಿಬಿ ನಾಗರಾಜ್ ಸಂವಿಧಾನದ ಹೆಸರಿನಲ್ಲಿ, ಮುರುಗೇಶ ನಿರಾಣಿ ಹಾಗೂ ಉಮೇಶ್ ಕತ್ತಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

    ನಾಯಕತ್ವವೇ ಬದಲಾಗುತ್ತದೆ ಎಂಬ ಧ್ವನಿಯನ್ನು ಅಡಗಿಸಿದ ಸಿಎಂ ಬಿಎಸ್‌ವೈ, ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರನ್ನು ಒಪ್ಪಿಸುವ ಮೂಲಕ ಹಿಡಿದ ಪಟ್ಟು ಸಾಧಿಸಿದ್ದು, ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ಬಿಎಸ್‌ವೈ ಸಲ್ಲಿಸಿದ ಪಟ್ಟಿಯೇ ಹೈಕಮಾಂಡ್ ಮಟ್ಟದಲ್ಲಿ ಸ್ವಲ್ಪ ವ್ಯತ್ಯಾಸದೊಂದಿಗೆ ಅನುಮೋದನೆ ಪಡೆದಿದ್ದು ವಿಶೇಷ. ಆ ಮೂಲಕ ರಾಜ್ಯ ನಾಯಕತ್ವ ಅಚಲವೆಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ.

    3 ಸಾವಿರ ಹಣ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸದಷ್ಟು ದುರ್ಗತಿ ಬಂದಿಲ್ಲ… ಎನ್ನುತ್ತಲೇ ಸಿಡಿಮಿಡಿಗೊಂಡ ಸವದಿ

    ಮಕ್ಕಳನ್ನು ಹತ್ತಿಸಿಕೊಳ್ಳದೆ ಹೋದ ಚಾಲಕ, ಬಸ್​ ಅಡ್ಡಗಟ್ಟಿ ರಸ್ತೆಯಲ್ಲೇ ಶಿಕ್ಷಣ ಸಚಿವರಿಂದ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆ!

    ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts