More

    ಬಿಎಸ್​ಎನ್​ಎಲ್​ ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಕೇಂದ್ರ ಸಚಿವ ರವಿಶಂಕರ ಪ್ರಸಾದ್- ಏನದು?

    ನವದೆಹಲಿ: ಕರೊನಾ ಕಂಟಕ ದೇಶವನ್ನಾವರಿಸಿದ್ದು ಅದನ್ನು ತಡೆಯಲು ದೇಶದಲ್ಲಿ ಲಾಕ್​ಡೌನ್​ ಘೋಷಿಸಿದ್ದು ಏಪ್ರಿಲ್​ 14ರ ತನಕ ಮುಂದುವರಿಯಲಿದೆ. ಈ ಅವಧಿಯಲ್ಲಿ ಜನರಿಗೆ ತೊಂದರೆ ಆಗಬಾರದು ಎಂದು ಸರ್ಕಾರ ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದೇ ರೀತಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೂ ಕೆಲವು ಉಪಕ್ರಮಗಳನ್ನು ಘೋಷಿಸಿವೆ. ಅಂಥ ಉಪಕ್ರಮಗಳ ಪೈಕಿ ಭಾರತೀಯ ಸಂಚಾರ ನಿಗಮ್ ಲಿಮಿಟೆಡ್​(ಬಿಎಸ್​ಎನ್​ಎಲ್​) ಘೋಷಿಸಿರುವ ಉಪಕ್ರಮ ಗ್ರಾಹಕರ ಮುಖದಲ್ಲಿ ನಗು ಮೂಡಿಸಿದೆ.

    ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು ಸೋಮವಾರ ಈ ವಿಚಾರವನ್ನು ಪ್ರಕಟಿಸಿದ್ದು, ಏಪ್ರಿಲ್ 20ರ ತನಕ ಬಿಎಸ್​ಎನ್​ಎಲ್​ನ ಪ್ರೀಪೇಯ್ಡ್ ಗ್ರಾಹಕರ ಸಿಮ್​ನ ಸೇವೆಗಳು ಕಡಿತಗೊಳ್ಳುವುದಿಲ್ಲ. ಎಲ್ಲರ ಖಾತೆಗಳಿಗೆ 10 ರೂಪಾಯಿ ಇನ್​ಸೆಂಟಿವ್ ಲಭ್ಯವಿದ್ದು, ಅದು ತನ್ನಿಂತಾನೇ ಬಿಎಸ್​ಎನ್​ಎಲ್​ಗೆ ಪಾವತಿಯಾಗಲಿದ್ದು ಔಟ್​ ಗೋಯಿಂಗ್ ಕರೆ ಸೌಲಭ್ಯ ಮುಂದುವರಿಯಲಿದೆ. ಬಡವರಿಗೆ ಮತ್ತು ಅಗತ್ಯ ಇರುವವರಿಗೆ ಈ ಉಪಕ್ರಮ ನೆರವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇದಕ್ಕೂ ಮುನ್ನ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್​ ಎಲ್ಲ ಟೆಲಿಕಾಂ ಕಂಪನಿಗಳಿಗೂ ಅವರ ಪ್ರೀಪೇಯ್ಡ್​ ಬಳಕೆದಾರರ ಸಿಮ್​ನ ಕರೆಯ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವಂತೆ ಹೇಳಿತ್ತು. ಅಲ್ಲದೆ, 21 ದಿನಗಳ ಲಾಕ್​ ಡೌನ್ ಅವಧಿಯಲ್ಲಿ ಅಡ್ಡಿ ಇಲ್ಲದ ಸೇವೆಗಳು ಚಂದಾದಾರರಿಗೆ ಸಿಗುತ್ತಿದೆ ಎಂಬುದನ್ನು ಕಂಪನಿಗಳು ಖಾತರಿಪಡಿಸಿಕೊಳ್ಳಬೇಕು. ಅಕಸ್ಮಾತ್ ಯಾರಿಗಾದರೂ ತೊಂದರೆ ಆದಲ್ಲಿ, ಆದ್ಯತೆ ಮೇರೆಗೆ ಅದನ್ನು ಸರಿಪಡಿಸಿಕೊಳ್ಳಬೇಕು ಎಂದೂ ಹೇಳಿತ್ತು. (ಏಜೆನ್ಸೀಸ್)

    ಶಾಲಾ ಶಿಕ್ಷಕರ ರಜೆ ಏಪ್ರಿಲ್​ 11ಕ್ಕೆ ವಿಸ್ತರಿಸಿದ ರಾಜ್ಯ ಸರ್ಕಾರ: ವಿದ್ಯಾರ್ಥಿ ದಾಖಲಾತಿ ಆರಂಭಿಸಿದರೆ ಮಾನ್ಯತೆ ರದ್ದು ಅಥವಾ ಇತರೆ ಕಠಿಣ ಕ್ರಮದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts