More

    ಕೋಟಿ ರೂ. ವೆಚ್ಚದ ಬಸ್ ನಿಲ್ದಾಣ ತೆರವು, ಚಿಗರಿ ಸಂಚಾರ ಆರಂಭವಾಗಿ ಕೇವಲ ಆರು ವರ್ಷ

    ಹುಬ್ಬಳ್ಳಿ: ಇಲ್ಲಿಯ ಹಳೇ ಬಸ್ ನಿಲ್ದಾಣ ಎದುರು ನಿಮಿರ್ಸಲಾಗಿದ್ದ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್ಟಿಎಸ್) ಯೋಜನೆಯ ಚಿಗರಿ ಬಸ್ ನಿಲ್ದಾಣವನ್ನು ಫ್ಲೈಓವರ್ ಸಲುವಾಗಿ ತೆರವುಗೊಳಿಸಲಾಗುತ್ತಿದೆ.

    ಹಳೇ ಬಸ್ ನಿಲ್ದಾಣ ಎದುರು ಹಾದು ಹೋಗಲಿರುವ ಫ್ಲೈಓವರ್ ಇದೇ ಜಾಗದಲ್ಲಿ ಬರುವುದರಿಂದ ನಿಲ್ದಾಣ ತೆರವು ಮಾಡಬೇಕಾಗಿದೆ. ಇದಕ್ಕಾಗಿ ತಾತ್ಕಾಲಿಕ ಬಸ್ ನಿಲ್ದಾಣವನ್ನು ಬಸವ ವನ ಬಳಿ ನಿಮಿರ್ಸಲಾಗಿದೆ.

    2018ರ ಅಕ್ಟೋಬರ್ 2ರಿಂದ ಆರಂಭವಾದ ಚಿಗರಿ ಬಸ್ ಸಂಚಾರ ಸಾರ್ವಜನಿಕ ಸಾರಿಗೆಯ ಹೊಸ ವ್ಯವಸ್ಥೆಯಾಗಿದೆ. ಚಿಗರಿ ಬಸ್ಗಳಿಗೆ ಪ್ರತ್ಯೇಕ ಕಾರಿಡಾರ್, ಅವಳಿನಗರ ಮಧ್ಯೆ ಸುಮಾರು 32 ಬಸ್ ನಿಲ್ದಾಣಗಳನ್ನು ನಿಮಿರ್ಸಲಾಗಿದೆ.

    ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್, ಮಾಹಿತಿ ಲಕ, ಆಟೋಮೆಟಿಕ್ ಡೋರ್ಸ್, ಮುಂತಾದ ಸಕಲ ಸವಲತ್ತುಗಳನ್ನು ಕಲ್ಪಿಸಲಾಗಿದೆ.

    ಈ ಎಲ್ಲ ಸೌಲಭ್ಯಗಳಿಂದಾಗಿ ಸುಮಾರು ಒಂದು ಕೋಟಿ ರೂ. ವೆಚ್ಚದ ಬಸ್ ನಿಲ್ದಾಣಗಳು ಇವಾಗಿದ್ದವು. ಯೋಜನೆ ಜಾರಿಯಾಗಿ ಕೇವಲ ಆರೇ ವರ್ಷದಲ್ಲಿ ಒಂದು ಬಸ್ ನಿಲ್ದಾಣ ತೆರವು ಮಾಡುತ್ತಿರುವುದು ವಿಪರ್ಯಾಸ.

    ಸಾವಿರ ಕೋಟಿ ರೂ. ವೆಚ್ಚದ ಬಿಆರ್ಟಿಎಸ್ ಯೋಜನೆಯನ್ನು ವಿಶ್ವಬ್ಯಾಂಕ್ ನೆರವಿನಡಿ ಜಾರಿಗೊಳಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರವೂ ಕೋಟ್ಯಂತರ ರೂ. ಖರ್ಚು ಮಾಡಿದೆ.
    ಶಿಸ್ತು ಬದ್ಧ, ಮುಂದಾಲೋಚನೆ ಇಲ್ಲದ ಯೋಜನೆಗಳಿಂದಾಗಿ ಇದೀಗ ತೆರಿಗೆದಾರರ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts