More

    ಸಹೋದರತ್ವ ರಾಷ್ಟ್ರ ಸಾರ್ವಭೌಮತ್ವಕ್ಕಿಂತ ಮಿಗಿಲು

    ಸೋಮವಾರಪೇಟೆ: ಸೋಮವಾರಪೇಟೆ ಜೇಸಿಐ ಪುಷ್ಪಗಿರಿ ಸಂಸ್ಥೆಯ ಭರವಸೆಯ ಜೇಸಿ ಸಪ್ತಾಹ-2023ರ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳವಾರ ಸಂಜೆ ನಂಜಮ್ಮ ಸಮುದಾಯ ಭವನದಲ್ಲಿ ನಡೆಯಿತು.

    ಮುಖ್ಯ ಅತಿಥಿ ಜೇಸಿಐ ಸೆನೆಟರ್ ಕುಮಾರ್ ಮಾತನಾಡಿ, ಸಹೋದರತ್ವವು ರಾಷ್ಟ್ರ ಸಾರ್ವಭೌಮತ್ವಕ್ಕಿಂತಲೂ ಮಿಗಿಲಾದದ್ದಾಗಿದೆ. ಮಕ್ಕಳಿಂದ ವೃದ್ಧರವರೆಗಿನ ಎಲ್ಲರಿಗೂ ಜೇಸಿಐ ಸಂಸ್ಥೆ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಿದೆ. ಅರ್ಹರು ಸಂಸ್ಥೆಯ ಸದಸ್ಯತ್ವವನ್ನು ಪಡೆದು ಸಮಾಜ ಸೇವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

    ವಲಯ ಉಪಾಧ್ಯಕ್ಷ ಪ್ರಶಾಂತ್ ಮಾತನಾಡಿ, ಜೇಸಿಐ ಜನರನ್ನು ಒಂದು ಶಕ್ತಿಯನ್ನಾಗಿ ರೂಪಿಸುತ್ತಿದೆ. ಜೇಸಿಐ ಕುಟುಂಬದ ಸದಸ್ಯರಿಗೆ ಸಮಸ್ಯೆ ಎದುರಾದಾಗ ಉತ್ತಮ ಸ್ಪಂದನೆ ನೀಡುತ್ತಿದೆ. ಜನರಲ್ಲಿ ಸ್ನೇಹ ಸಂಬಂಧ ಬೆಸೆಯಲು ಉತ್ತಮ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
    ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಜೇಸಿಐ ಸಂಸ್ಥೆಯ ರಾಷ್ಟ್ರೀಯ ಸಮಿತಿ ಸದಸ್ಯ ನರೆನ್ ಕಾರ್ಯಪ್ಪ ಬಹುಮಾನ ವಿತರಿಸಿದರು.

    ಅಧ್ಯಕ್ಷತೆ ವಹಿಸಿದ್ದ ಜೇಸಿಐ ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ ಮಾತನಾಡಿದರು. ನಿಯೋಜಿತ ಅಧ್ಯಕ್ಷ ಎಸ್.ಆರ್.ವಸಂತ, ಸ್ಥಾಪಕ ಅಧ್ಯಕ್ಷ ಕೆ.ಎನ್.ತೇಜಸ್ವಿ, ವಲಯ ನಿರ್ದೇಶಕ ನಾಗೇಗೌಡ, ವಲಯ ಉಪಾಧ್ಯಕ್ಷರಾದ ನೆಲ್ಸನ್, ಪ್ರಶಾಂತ್, ಕಾರ್ಯದರ್ಶಿ ಜಗದಾಂಬಾ ಗುರುಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ಲಕ್ಷ್ಮೀಕುಮಾರ್, ಜೂನಿಯರ್ ಜೇಸಿಐ ಅಧ್ಯಕ್ಷೆ ರಿಶಾ, ಕಾರ್ಯಕ್ರಮ ಯೋಜನಾಧಿಕಾರಿ ವಿನುತಾ ಸುದೀಪ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts