More

    ರಾವಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ ಗಡಿ ರಸ್ತೆಗಳ ಸಂಸ್ಥೆ, ಪಂಜಾಬ್​ನಲ್ಲಿರುವ ಈ ಸೇತುವೆ ನಿರ್ಮಾಣ ವೆಚ್ಚ ಎಷ್ಟು ಗೊತ್ತಾ?

    ನವದೆಹಲಿ: ಪಂಜಾಬ್​ನ ಕಾಸೋವಾಲ್​ ವಿಭಾಗದಲ್ಲಿ ಹರಿಯುವ ರಾವಿ ನದಿಗೆ ಅಡ್ಡಲಾಗಿ ಗಡಿ ರಸ್ತೆಗಳ ಸಂಸ್ಥೆ (ಬಾರ್ಡರ್​ ರೋಡ್ಸ್​ ಆರ್ಗನೈಜೇಷನ್​-ಬಿಆರ್​ಒ) ಬೃಹತ್​ ಸೇತುವೆಯನ್ನು ನಿರ್ಮಿಸಿದೆ. ಒಟ್ಟು 484 ಮೀಟರ್​ ಉದ್ದದ ಈ ಸೇತುವೆಯನ್ನು 49 ಗಡಿ ರಸ್ತೆಗಳ ಕಾರ್ಯಪಡೆಯ (ಬಿಆರ್​ಟಿಎಫ್​) 141 ಡ್ರೇನ್​ ಮೇಂಟೆನೆನ್ಸ್​ ಕಂಪನಿಯ ಯೋಧರು ನಿರ್ಮಿಸಿದ್ದಾರೆ.

    ಒಟ್ಟು 1,681.02 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯು 30.25 ಮೀಟರ್​ ಅಗಲವಾಗಿರುವ 16 ಕಮಾನುಗಳನ್ನು ಹೊಂದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ಬೈಸಾಕಿ ಹಬ್ಬದ ವೇಳೆಗೆ ಈ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿ, ರೈತರು ತಾವು ಬೆಳೆದಿರುವ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಡಬೇಕು ಎಂಬುದು ಬಿಆರ್​ಒ ನಿರ್ಧಾರವಾಗಿತ್ತು. ಆದರೆ, ಹಬ್ಬ ಮುಗಿದು ಒಂದು ವಾರದ ಬಳಿಕ ಅದನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ಕರೊನಾ ಮಹಾಮಾರಿ ಮನುಷ್ಯನ ದೇಹವನ್ನು ಹೇಗೆಲ್ಲ ಕಾಡುತ್ತಿದೆ ನೋಡಿ… ಯುವ ಸೋಂಕಿತರಿಗೂ ಪ್ರಾರ್ಶ್ವವಾಯು ಸಮಸ್ಯೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts