More

    VIDEO: ಲೈವ್​ ರಿಪೋರ್ಟಿಂಗ್​ ಮಾಡುವಾಗಲೇ ಕುಸಿದ ಸೇತುವೆ; ಪತ್ರಕರ್ತೆ ಬಚಾವಾಗಿದ್ದೇ ರೋಚಕ

    ವಾಷಿಂಗ್ಟನ್​: ಪ್ರತಿಕೋದ್ಯಮದಲ್ಲಿ ವರದಿಗಾರಿಕೆ ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ನೈಸರ್ಗಿಕ ವಿಕೋಪಗಳದಾಂತದ ಸಂದರ್ಭದಲ್ಲಿ ವರದಿಗಾರಿಕೆ ಮಾಡುವುದಕ್ಕೆ ಹೆಚ್ಚಿನ ಧೈರ್ಯ ಇರಬೇಕಾಗುತ್ತದೆ. ಅದೇ ರೀತಿಯ ಧೈರ್ಯದಿಂದ ವರದಿಗಾರಿಕೆ ಮಾಡಲು ಹೋದ ಪತ್ರಕರ್ತೆಯೊಬ್ಬಳು, ಕೊಚ್ಚಿ ಹೋಗುತ್ತಿದ್ದ ಸೇತುವೆಯಿಂದ ಸ್ವಲ್ಪದರಲ್ಲಿ ಬಚಾವಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಇದನ್ನೂ ಓದಿ: ಕೆಟ್ಟುಹೋದ ಮೊಬೈಲ್‌ ಬದಲಿಸಿಕೊಟ್ಟಿಲ್ಲವೆಂದು ನೊಂದು ಬೆಂಕಿಹಚ್ಚಿಕೊಂಡ ವ್ಯಕ್ತಿ!
    ಅಮೆರಿಕದ ಫಾಕ್ಸ್​ 46 ವಾಹಿನಿಯ ಅಂಬಾರ ರಾಬರ್ಟ್​ ಹೆಸರಿನ ಪತ್ರಕರ್ತೆ ಸೇತುವೆಯೊಂದರ ಬಳಿಯಿಂದ ಲೈವ್​ ವರದಿಗಾರಿಕೆ ಮಾಡುತ್ತಿದ್ದರು. ಅಪಾರ ಪ್ರಮಾಣದ ಮಳೆಯಾಗಿದ್ದರಿಂದ ಸೇತುವೆಯ ಕೆಳಗೆ ಅತಿ ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಸೇತುವೆ ಕೊಚ್ಚಿ ಹೋಗುವ ರೀತಿಯಲ್ಲಿದ್ದದ್ದನ್ನು ಪತ್ರಕರ್ತೆ ಕೇವಲ 1 ಮೀಟರ್​ ದೂರದಲ್ಲಿ ನಿಂತು ವರದಿ ಮಾಡಿದ್ದಾರೆ. ಅದೇ ಸಮದಯಲ್ಲಿ ಸೇತುವೆಯ ಮಧ್ಯಭಾಗ ಕುಸಿದು ಬಿದ್ದಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಅದೃಷ್ಟವಶಾತ್​ ಪತ್ರಕರ್ತೆಗೆ ಯಾವುದೇ ಹಾನಿಯಾಗಿಲ್ಲ.

    ಇದನ್ನೂ ಓದಿ: ಲಕ್ಷ್ಮಿ ಪೂಜೆಗೆ ತೆಗೆದುಕೊಂಡು ಹೋಗ್ತಿದ್ದ 7 ಲಕ್ಷ ರೂ. ನಗದನ್ನು ಹಾಡಹಗಲೇ ಎಗರಿಸಿದ ಖದೀಮ!
    ಅಮೆರಿಕದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಅಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ಕ್ಯಾಟವ್ಬಾ ಕೌಂಟಿಯ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತಿತ್ತು ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. (ಏಜೆನ್ಸೀಸ್)

    ಇವರು ಇನ್​ಸ್ಟಾಗ್ರಾಮ್​ಗೆ ಬಂದಿದ್ದೇ ತಡ, ಭರ್ಜರಿ ಫಾಲೋವರ್ಸ್!; ನಾಲ್ಕೇ ಗಂಟೆಗಳಲ್ಲಿ ದಾಖಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts