More

    ನಿರ್ಮಾಣ ಹಂತದಲ್ಲೇ ಮುರಿದು ಬಿದ್ದ ಸೇತುವೆ

    ಕುಮಟಾ: ತಾಲೂಕಿನ ಹೆಗಡೆಯಲ್ಲಿ ಅಘನಾಶಿನಿ ನದಿಗೆ ನಿರ್ಮಿಸಲಾಗುತ್ತಿದ್ದ ತಾರಿಬಾಗಿಲ ಸೇತುವೆಯ ಕಾಂಕ್ರೀಟ್ ತೊಲೆ(ಬೀಮ್ಸ)ಗಳು ಬುಧವಾರ ಮುರಿದು ಬಿದ್ದು ಕಾಮಗಾರಿಯ ಸಾಚಾತನವನ್ನು ಬಯಲು ಮಾಡಿದೆ. ಸೇತುವೆಯ ಬೃಹತ್ ಗಾತ್ರದ ಕಾಂಕ್ರೀಟ್ ಬೀಮ್ಸಗಳು ಕ್ರೇನ್ ಇನ್ನಿತರ ವಾಹನಗಳ ಮೇಲೆ ಬಿದ್ದರೂ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

    ಹೆಗಡೆ ಹಾಗೂ ಮಿರ್ಜಾನ ನಡುವೆ ತಾರಿಬಾಗಿಲ ಧಕ್ಕೆಯಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯನ್ನು ಕುಂದಾಪುರದ ಸೈಂಟ್ ಅಂಟೋನಿ ಕನ್ಸ್ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದು ನಿರ್ಮಿಸುತ್ತಿದೆ. ಆರಂಭದಿಂದಲೂ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರು ಎಚ್ಚರಿಸುತ್ತಲೇ ಬಂದಿದ್ದರು. ಆದರೆ ಜನರ ಎಚ್ಚರಿಕೆಯನ್ನು ಕಡೆಗಣಿಸಿದ ಗುತ್ತಿಗೆ ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗ ಇದೀಗ ಹೆಚ್ಚಿನ ಬೆಲೆ ತೆರಬೇಕಾಗಿ ಬಂದಿದೆ. ಸೇತುವೆಯ ಕಂಬಗಳ ನಡುವೆ ಹಾಕಲಾಗಿದ್ದ ಎರಡು ಕಾಂಕ್ರೀಟ್ ಬೀಮ್ಸಗಳು ಮೇಲೆ ಸ್ಲ್ಯಾಬ್ ಹಾಕುವ ಮುನ್ನವೇ ಸ್ವಯಂ ಭಾರ ತಾಳದೇ ಮುರಿದು ಬಿದ್ದಿದೆ. ಇದರರ್ಥ ಕಾಮಗಾರಿ ತೀರಾ ಕಳಪೆಯಾಗಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ವೇಳೆ ಊರ ಜನರ ಜತೆ ಕಾಮಗಾರಿ ಗುತ್ತಿಗೆ ಕಂಪನಿ ಸಿಬ್ಬಂದಿ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಕೂಡಲೇ ಕಾಮಗಾರಿಯ ಬಗ್ಗೆ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಕಾಮಗಾರಿ ತಡೆಹಿಡಿಯುವುದಾಗಿ ಊರ ಜನರ ಪರವಾಗಿ ಪಾಂಡು ಪಟಗಾರ ಎಂಬವರು ಹೇಳಿದ್ದಾರೆ.
    ಘಟನೆಯಲ್ಲಿ ಒಂದು ಕ್ರೇನ್, ಹಿಟಾಚಿ, ಸ್ಕೂಟರ್ ಹಾನಿಗೊಳಗಾಗಿದ್ದು ಯಾವುದೇ ಕಾರ್ಮಿಕರಿಗೆ ಹಾನಿಯಾಗಿಲ್ಲ. ಕ್ರೇನ್ ಮೂಲಕ ಕಾಂಕ್ರೀಟ್ ಬೀಮ್ಸಗಳನ್ನು ಕಂಬಗಳ ಮೇಲೆ ಇರಿಸುವಾಗ ಬೇರೆ ಕಾಂಕ್ರೀಟ್ ಬೀಮ್ಸಗೆ ಬಡಿದಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟ ನೀಡಿ ಪರಿಶೀಲಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

    ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಪೋಟ-ಭಟ್ಕಳದಲ್ಲಿ ಎನ್ ಐಎ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts