More

    ಸಂಸತ್ ಭದ್ರತಾ ಉಲ್ಲಂಘನೆಯ ಮಾಸ್ಟರ್ ಮೈಂಡ್ ಲಲಿತ್ ಝಾ! ಎಲ್ಲರನ್ನು ಒಟ್ಟುಗೂಡಿಸಿ ಮುಹೂರ್ತ ಇಟ್ಟ

    ನವದೆಹಲಿ: ಸಂಸತ್ತಿನ ಭದ್ರತೆಯ ಲೋಪ ಪ್ರಕರಣದ ತನಿಖೆ ನಿರಂತರವಾಗಿ ನಡೆಯುತ್ತಿದೆ. ಇದುವರೆಗಿನ ತನಿಖೆಯಲ್ಲಿ ಲಲಿತ್ ಝಾ ಈ ಹಗರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಸಂಸತ್ ದಾಳಿ ಪ್ರಕರಣದಲ್ಲಿ ಇದುವರೆಗೆ ಐದು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಆರನೇ ಆರೋಪಿ ಲಲಿತ್ ಝಾ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.ಲಲಿತ್ ಝಾ ಬಂಧನದ ನಂತರ ಈ ದಾಳಿಯ ಹಿಂದೆ ಬೇರೆ ಯಾವ ಕಥೆ ಇದೆ ಎಂಬುದು ಬಹಿರಂಗವಾಗಲಿದೆ.

    ಮೂಲಗಳ ಪ್ರಕಾರ ಬಂಧಿತ ನಾಲ್ವರು ಆರೋಪಿಗಳ ಏಕೈಕ ಮಾಸ್ಟರ್ ಮೈಂಡ್ ಲಲಿತ್ ಝಾ. ಗುರುಗ್ರಾಮದಲ್ಲಿ ನಡೆದ ಸಭೆಗೆ ಆರೋಪಿಗಳನ್ನೆಲ್ಲ ಕರೆದಿದ್ದ ಲಲಿತ್ ಝಾ. ಕೋಲ್ಕತ್ತಾದ ನಿವಾಸಿ ಮತ್ತು ವೃತ್ತಿಯಲ್ಲಿ ಶಿಕ್ಷಕರಾಗಿರುವ ಝಾ ಅವರು ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರಿಂದ ಪ್ರಭಾವಿತರಾಗಿದ್ದರು ಮತ್ತು ಅವರತ್ತ ದೇಶದ ಗಮನವನ್ನು ಸೆಳೆಯುವ ಏನಾದರೂ ಮಾಡಲು ಬಯಸಿದ್ದರು. ಇಲ್ಲಿಯವರೆಗೆ ಯಾವುದೇ ಗೊತ್ತಿರುವ ಭಯೋತ್ಪಾದಕ ಗುಂಪಿನೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಮೂಲಗಳು ತಿಳಿಸಿವೆ.

    ಝಾ ತನ್ನ ಸಹಚರರನ್ನು ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ (ಲೋಕಸಭೆಯ ಒಳಗೆ) ಮತ್ತು ನೀಲಮ್ ದೇವಿ ಮತ್ತು ಅಮೋಲ್ ಶಿಂಧೆ (ಸಂಸತ್ತಿನ ಹೊರಗೆ), ಮತ್ತು ವಿಕ್ಕಿ ಶರ್ಮಾ ಅವರನ್ನು ನಿನ್ನೆ ಬೆಳಿಗ್ಗೆ ಭೇಟಿಯಾಗಿದ್ದನು. ನಂತರ ಸಂಸತ್ತ ವೇಳೆ ನಿನ್ನೆ ದಾಳಿ ನಡೆದಾಗ ಲಲಿತ್ ಝಾ ತನ್ನ ಮೊಬೈಲ್‌ನಲ್ಲಿ ಕಲರ್ ಅಟ್ಯಾಕ್‌ನ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ.

    ಎಲ್ಲಾ ಆರೋಪಿಗಳು ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಸಾಮಾಜಿಕ ಮಾಧ್ಯಮ ಪೇಜ್ ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ಉಲ್ಲೇಖಿಸಿವೆ. ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ 5ನೇ ಆರೋಪಿ, ಪ್ರಸ್ತುತ ತಲೆಮರೆಸಿಕೊಂಡಿರುವ ಲಲಿತ್ ಝಾ ಜಾಡು ಕೊನೆಗೂ ಪತ್ತೆಯಾಗಿದ್ದು, ಕೊನೆಯದಾಗಿ ಆತ ರಾಜಸ್ಥಾನದ ನೀಮ್ರಾನಾದಲ್ಲಿ ಪತ್ತೆಯಾಗಿದ್ದ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. ಈತನಿಗಾಗಿ ಶೋಧಕಾರ್ಯ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts