More

    ಬಿಆರ್​ಟಿಎಸ್ ವಿರುದ್ಧ ಆಮ್ ಆದ್ಮಿ ಆಕ್ರೋಶ

    ಹುಬ್ಬಳ್ಳಿ: ಅವೈಜ್ಞಾನಿಕ ಮತ್ತು ಅಪಾಯಕಾರಿ ಬಿಆರ್​ಟಿಎಸ್ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಹೊಸೂರಿನ ಬಿಆರ್​ಟಿಎಸ್ ಮುಖ್ಯ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    1200 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ಸಂಚರಿಸಲು ಜನ ಜೀವ ಕೈಯಲ್ಲಿ ಹಿಡಿದು ಈ ರಸ್ತೆಗೆ ಬರಬೇಕಾಗಿದೆ. ಬಿಆರ್​ಟಿಎಸ್ ಪ್ರಯಾಣಿಕರು, ಪಾದಚಾರಿಗಳು ಹಾಗೂ ಮಿಶ್ರ ಸಂಚಾರ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಶಾಪವಾಗಿ ಮಾರ್ಪಟ್ಟಿದೆ. ಆ ಮೂಲಕ ಇದು ನರಭಕ್ಷಕ ಚಿಗರಿಯಾಗಿ ಬದಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    33 ಬಸ್ ನಿಲ್ದಾಣಗಳ ಪೈಕಿ ಕೇವಲ 7 ಕಡೆ ರಸ್ತೆ ದಾಟಲು ಮೇಲ್ಸೇತುವೆ ನಿರ್ವಿುಸಲಾಗಿದ್ದು, ಉಳಿದೆಡೆ ರಸ್ತೆ ದಾಟಲು ಹರಸಾಹಸ ಪಡಬೇಕಿದೆ. ಉಣಕಲ್, ನವನಗರ, ನವಲೂರಿನಲ್ಲಿ ಅವೈಜ್ಞಾನಿಕವಾದ ಮೇಲ್ಸೇತುವೆಗಳಿಂದ ಸ್ಥಳೀಯರು ಹೈರಾಣಾಗಿದ್ದಾರೆ. ನವಲೂರು ಮೇಲ್ಸೇತುವೆ ನಿರ್ಮಾಣ ಹಂತದಲ್ಲೇ ಕುಸಿಯುತ್ತಿದೆ. ಎಲ್ಲೆಂದರಲ್ಲಿ ಬ್ಯಾರಿಕೇಡ್ ಮುರಿದು ಬಿದ್ದಿವೆ. ಯೋಜನೆಗಾಗಿ 4850 ಮರಗಳನ್ನು ಕಡಿಯಲಾಗಿದ್ದು, ಈವರೆಗೆ ನೆಡುತೋಪು ನಿರ್ಮಾಣ ಮಾಡಲಾಗಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಬೇಕು. ಇಲ್ಲವಾದರೆ ಬಿಆರ್​ಟಿಎಸ್ ಯೋಜನೆ ರದ್ದು ಮಾಡಿ, ಎಂಟು ಲೇನ್ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಬಿಆರ್​ಟಿಎಸ್ ಡಿಜಿಎಂ ಜಿ.ಎಂ. ರಾಠೋಡಗೆ ಮನವಿ ಸಲ್ಲಿಸಿದರು. ಸಂತೋಷ ನರಗುಂದ, ಮನೋಹರ ಸುಗ್ನಾನಿ, ವಿಕಾಸ ಸೊಪ್ಪಿನ, ಅನಂತಕುಮಾರ ಭಾರತೀಯ, ಶಶಿಕುಮಾರ ಸುಳ್ಳದ, ಶಿವಕುಮಾರ ಬಾಗಲಕೋಟಿ, ಸಂತೋಷ ಮಾನೆ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts