More

    ಒಂದೇ ಗ್ರಾಮದ ಐವರು ನೀರುಪಾಲು-ಶಿರಗೇರಿ ಗ್ರಾಮದಲ್ಲಿ ಕಟ್ಟೆಯೊಡೆದ ದುಖಃ

    ಮುಂಡಗೋಡ: ತಾಲೂಕಿನ ಶಿರಗೇರಿ ಗ್ರಾಮದಲ್ಲಿ ದುಖಃ ದ ಕಟ್ಟೆ ಒಡೆದಿದೆ. ಮೌನ ಮಡುಗಟ್ಟಿದೆ.

    ಬೆಳೆದು ಮನೆಗೆ ಆಧಾರವಾಗಬೇಕಿದ್ದ ಐವರು ಮಕ್ಕಳು ಶುಕ್ರವಾರ ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದು, ಪಾಲಕರಿಗೆ ಬರಸಿಡಿಲು ಬಡಿದಂತಾಗಿದೆ.

    ಶನಿವಾರ ಗ್ರಾಮದಲ್ಲಿ ಐವರು ಬಾಲಕರ ಮೃತದೇಹವನ್ನು ಒಟ್ಟಿಗೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಘಟನೆ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಘಟಪ್ರಭಾದ ದೂಪದಾಳ ಗ್ರಾಮದ ಬಳಿಯ ಸ್ನೇಹಿತನನ್ನು ನೋಡಲು ಶಿರಗೇರಿಯ 12 ಜನ ಬಾಲಕರ ತಂಡ ಅಲ್ಲಿಗೆ ತೆರಳಿತ್ತು.

    ಘಟಪ್ರಭಾ ಐಬಿ ಪಕ್ಕದ ಉದ್ಯಾನವನದಲ್ಲಿ ಊಟ ಮಾಡಿ ಬಾಲಕರು ನದಿಗೆ ಈಜಲು ತೆರಳಿದ್ದರು.

    ಈ ಸಂದರ್ಭದಲ್ಲಿ ಒಬ್ಬ ನೀರಿನ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಆತನನ್ನೂ ಸೇರಿದಂತೆ ರಕ್ಷಿಸಲು ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

    ಸ್ಥಳೀಯರು ಇನ್ನಿಬ್ಬರನ್ನು ರಕ್ಷಿಸಿ ಆಸ್ಪತೆಗೆ ದಾಖಲಿಸಿದ್ದರು. ಅದರಲ್ಲಿ ರಾಮಚಂದ್ರ ಕೋಕರೆ ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

    ಮೃತರ ಸಂಖ್ಯೆ ಐದಕ್ಕೆ ಏರಿದೆ. ತೀವ್ರವಾಗಿ ಅಸ್ವಸ್ಥನಾಗಿದ್ದ ವಿಠ್ಠಲ ಜಾನು ಕೋಕರೆ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇದನ್ನೂ ಓದಿ: ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ
    ಮೃತಪಟ್ಟವರಲ್ಲಿ ಅಜಯ ಜೋರೆ (೧೬) , ಆನಂದ ಕೋಕರೆ (೧೬) ತಾಲೂಕಿನ ಅಂದಲಗಿ ಪ್ರೌಢ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದರು. ಕೃಷ್ಣ ಜೋರೆ, ರಾಮಚಂದ್ರ ಕೋಕರೆ, ಸಂತೋಷ ಎಡಗೆ ಹೈಸ್ಕೂಲ್ ಮುಗಿಸಿದ್ದರು. ಇದರಲ್ಲಿ ಅಜಯ ಮತ್ತು ಕೃಷ್ಣ ಒಂದೇ ಕುಟುಂಬದ ಸಹೋದರರು. ರಾಮಚಂದ್ರ ಕೋಕರೆ ಕುಟುಂಬದ ಒಬ್ಬನೇ ಮಗನಾಗಿದ್ದ. ಆತನೇ ಇಲ್ಲವಾಗಿರುವುದು ಮನೆಯವರಿಗೆ ದಿಕ್ಕೇ ತೋಚದಂತಾಗಿದೆ.
    ಹಾಲು ಮಾರಿ ಜೀವನ:
    ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಎಲ್ಲ ಕುಟುಂಬಗಳು ತೀರಾ ಬಡತನದಲ್ಲಿದ್ದು, ಕೂಲಿ ಹಾಗೂ ಹಾಲು ಮಾರಿ ಜೀವನ ಸಾಗಿಸುತ್ತಿವೆ. ಬೆಳೆದು ನಿಂತ ಮಕ್ಕಳು ನೀರು ಪಾಲಾಗಿರುವುದು. ಪಾಲಕರಿಗೆ ಅಗಿಸಿಕೊಳ್ಳಲಾಗುತ್ತಿಲ್ಲ.
    ಸಂತಾಪ: ವಿಷಯ ತಿಳಿಯುತ್ತಿದ್ದಂತೆ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

    ಶಿರಗೇರಿ ಗ್ರಾಮದ ಬಾಲಕರು ಪ್ರವಾಸಕ್ಕೆ ತೆರಳಿದ ವೇಳೆಯಲ್ಲಿ ಘಟಪ್ರಭಾ ನದಿಯಲ್ಲಿ ೫ ಬಾಲಕರು ಮೃತಪಟ್ಟಿರುವುದು ನಮ್ಮ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ. ಮೃತಪಟ್ಟ ಕುಟುಂಬದವರು ಕೂಲಿ ಕೆಲಸ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಬಾಲಕರು ಮೃತಪಟ್ಟಿದ್ದು, ಈ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡಬೇಕು.
    ಧೂಳು ದುಂಡು ಕೋಕರೆ
    ಶಿರಗೇರಿ ಗ್ರಾಪಂ ಸದಸ್ಯ

    ………..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts