More

  VIDEO| ನಟ ಅಕ್ಷಯ್​ ವಿರುದ್ಧ ನೆಟ್ಟಿಗರ ಅಸಮಾಧಾನ: #BoycottNirma ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಲು ಕಾರಣವೇನು ಗೊತ್ತಾ?

  ಮುಂಬೈ: ವಾಷಿಂಗ್​ ಪೌಡರ್​ಗೆ ನೀಡಿರುವ ಜಾಹಿರಾತಿನಲ್ಲಿ ರಾಜನ ಪಾತ್ರ ನಿರ್ವಹಿಸುವ ಮೂಲಕ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.​

  ಜಾಹಿರಾತಿನಲ್ಲಿ ಮರಾಠ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜ್​ ಹೆಸರಿಗೆ ಕಳಂಕ ತರಲಾಗಿದೆ ಎಂದು ಆರೋಪಿಸಿ ಅಕ್ಷಯ್​ ಕುಮಾರ್​ ವಿರುದ್ಧ ಪೊಲೀಸ್​ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

  ನಿರ್ಮಾ ವಾಷಿಂಗ್​ ಪೌಡರ್​ಗೆ ನೀಡಿದ ಜಾಹಿರಾತಿನಲ್ಲಿ ಅಕ್ಷಯ್,​ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿರುವಂತೆ ರಾಜ ಅಕ್ಷಯ್, ತನ್ನ ಸೇನೆಯೊಂದಿಗೆ ಅರಮನೆ ಪ್ರವೇಶಿಸುತ್ತಾರೆ. ಈ ವೇಳೆ ಅರಮನೆಯಲ್ಲಿನ ಮಹಿಳೆ ರಾಜನಿಗೆ ಆರತಿ ಮಾಡಿ ಸೈನಿಕರು ಬಟ್ಟೆಗಳಲ್ಲಿನ ಕೊಳೆಯ ಬಗ್ಗೆ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ರಾಜನಿಗೆ ಶತ್ರುಗಳನ್ನು ಹೊಡೆಯಲು ಗೊತ್ತಿರುವ ಹಾಗೆಯೇ ಅವರ ಬಟ್ಟೆಯನ್ನು ತೊಳೆಯಲು ತಿಳಿದಿದೆ ಎಂದು ಹೇಳಿ ಪ್ರಾಡಕ್ಟ್​ ಬಳಸಿ ಬಟ್ಟೆಗಳನ್ನು ತೊಳೆಯುತ್ತಾರೆ.

  ಯಾವಾಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದೇ ತಡ ನೆಟ್ಟಿಗರು, ಅಕ್ಷಯ್​ ವಿರುದ್ಧ ಹಾಗೂ ಜಾಹಿರಾತು ವಿರುದ್ಧ ಕಿಡಿಕಾರುತ್ತಿದ್ದಾರೆ. #BoycottNirma ಎಂಬ ಹ್ಯಾಶ್​ಟ್ಯಾಗ್​ ಅನ್ನು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಲಾಗಿದೆ. ಶಿವಾಜಿ ಮಹಾರಾಜರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts