More

    ವಿಡಿಯೋ ಗೇಮ್​ಗೆ ಬಾಲಕ ಬಲಿ, ಸಾವಿಗೂ ಮುನ್ನಾ ದಿನ ನಡೆದಿದ್ದೇನು?

    ಕಲಬುರಗಿ: ಮಕ್ಕಳೊಂದಿಗೆ ಆಟವಾಡುತ್ತ ಓದಿಕೊಂಡಿರಬೇಕಾದ 15ರ ಬಾಲಕನಿಗೆ ಬೆಳೆದದ್ದು ವಿಡಿಯೋ ಗೇಮ್ ನಂಟು. ಅದೂ ಎಷ್ಟರ ಮಟ್ಟಿಗೆ ಅಂದ್ರೆ ಆ ವಿಡಿಯೋ ಗೇಮ್​ಗಾಗಿಯೇ ತನ್ನ ಪ್ರಾಣ ಕಳೆದುಕೊಳ್ಳುವಷ್ಟು.

    ಬ್ರಹ್ಮಪುರ ಬಡಾವಣೆಯ 9ನೇ ತರಗತಿ ವಿದ್ಯಾರ್ಥಿ ರಾಹುಲ್​ ಸೊಲ್ಲಾಪುರ ಎಂಬಾತ ಯಾವಾಗಲೂ ಮೊಬೈಲ್​ನಲ್ಲಿ ವಿಡಿಯೋ ಗೇಮ್​ ಆಡುತ್ತಿದ್ದ. ಕಳೆದ ಒಂದೆರಡು ವರ್ಷಗಳಿಂದ ವಿಡಿಯೋ ಗೇಮ್​ನಲ್ಲೇ ಮಗ್ನವಾಗಿರುತ್ತಿದ್ದ ಬಾಲಕನಿಗೆ ಪೋಷಕರು ಹಲವು ಬಾರಿ ಬುದ್ಧಿ ಹೇಳಿದ್ದರು. ಆ ವೇಳೆ ತಂದೆ-ತಾಯಿ ಜತೆ ವಾದಕ್ಕೂ ಇಳಿಯುತ್ತಿದ್ದ ರಾಹುಲ್​, ಇಂದು (ಶುಕ್ರವಾರ) ಬೆಳಗಿನ ಜಾವ ಹೆಣವಾಗಿದ್ದಾನೆ. ಸಾವಿಗೂ ಮುನ್ನಾ ದಿನ ಮನೆಯಲ್ಲಿ ನಡೆದಿದ್ದಾರೂ ಏನು ಗೊತ್ತಾ? ಇದನ್ನೂ ಓದಿರಿ ಬೆಂಗಳೂರಲ್ಲಿ ಪೊಲೀಸರಿಗೂ ಸಿಕ್ತಿಲ್ಲ ಟ್ರೀಟ್ಮೆಂಟ್! ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮುಖ್ಯಪೇದೆ ಬಲಿ

    ನಿನ್ನೆ(ಗುರುವಾರ) ಸಂಜೆಯೂ ರಾಹುಲ್​ ವಿಡಿಯೋ ಗೇಮ್​ ಆಡುತ್ತಿದ್ದ. ಇದನ್ನು ಗಮನಿಸಿದ ಪಾಲಕರು ಮಗನಿಗೆ ಬೈದು ಬುದ್ಧಿ ಹೇಳಿದ್ದರು. ಇದರಿಂದಾಗಿ ನೊಂದುಕೊಂಡ ಆತ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾನೆ. ಬೆಳಗ್ಗೆ ಪಾಲಕರು ನೋಡಿ ತೀವ್ರ ಆಘಾತಕ್ಕೆ ಒಳಗಾಗಿದ್ದು, ರೋದನ ಮುಗಿಲು ಮುಟ್ಟಿತ್ತು.

    ಸ್ಥಳಕ್ಕೆ ಭೇಟಿ ನೀಡಿದ ಎಸಿಪಿ ಕಿಶೋರಬಾಬು, ಇನ್​ಸ್ಪೆಕ್ಟರ್​ ಅರುಣಕುಮಾರ ಮುರಗೊಂಡಿ ಮತ್ತು ಸಿಬ್ಬಂದಿ, ಮರಣೋತ್ತರ ಪರೀಕ್ಷೆ ಬಳಿಕ ಪಾಲಕರಿಗೆ ಶವ ಹಸ್ತಾಂತರಿಸಿದರು. ಕರೊನಾ ಪರೀಕ್ಷೆಗಾಗಿ ಗಂಟಲ ದ್ರವ ಸಹ ಸಂಗ್ರಹಿಸಿ ಲ್ಯಾಬ್​ಗೆ ರವಾನಿಸಲಾಗಿದೆ. ರಾಘವೇಂದ್ರ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

    ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ ರಾಹುಲ್​, 9ನೇ ತರಗತಿ ಪಾಸಾಗಿ 10ನೇ ತರಗತಿಗೆ ಪ್ರವೇಶ ಪಡೆಯಬೇಕಿತ್ತು. ಅಷ್ಟರಲ್ಲಿ ಬದುಕನ್ನೇ ದುರಂತ ಅಂತ್ಯವಾಗಿಸಿಕೊಂಡಿದ್ದಾನೆ.

    ಇಡೀ ರಾಜ್ಯ ಮತ್ತೆ ಸ್ತಬ್ಧ! ವೀಕೆಂಡ್​ ಲಾಕ್​ಡೌನ್​ಗೆ ಕ್ಷಣಗಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts