More

    VIDEO| ಉಚಿತ ಶಾಪಿಂಗ್​ ಮಾಡಲು ಬಾಲಕನಿಗೆ ಐದೇ ಸೆಕೆಂಡ್​: ಆತನ ಆಯ್ಕೆಗೆ ಶಹಭಾಷ್​ ಎಂದ ನೆಟ್ಟಿಗರು!

    ನವದೆಹಲಿ: ಶಾಪಿಂಗ್​ ಎನ್ನುವುದು ಒಂದು ಆಹ್ಲಾದಿಸಬಹುದಾದ ಅನುಭವ. ಅದರಲ್ಲೂ ಆಹಾರ ಸಾಮಾಗ್ರಿ ಖರೀದಿಸುವುದೆಂದರೆ ಖುಷಿಯ ವಿಚಾರವೇ. ವಿಧವಿಧವಾದ ತಿನಿಸುಗಳನ್ನು ನೋಡಿ ಬಾಯಲ್ಲಿ ನೀರೂರಿರುವುದು ಕೂಡ ಸಾಮಾನ್ಯವೇ. ಶಾಪಿಂಗ್​ಗೆ ಹೋದಾಗ ಮೊದಲು ಮಾಡುವ ಕೆಲಸವೇ ಬೇಕಾದುದ್ದನ್ನು ಆಯ್ದುಕೊಳ್ಳುವುದು. ಹೀಗಾಗಿಯೇ ಶಾಪಿಂಗ್​ಗಾಗಿ ಕನಿಷ್ಠ ಒಂದು ಗಂಟೆಯಾದ್ರು ಸಮಯಬೇಕು.

    ಹೀಗಿರುವಾಗ ಶಾಪಿಂಗ್​ ಮಾಡಲು ಕೇವಲ 5 ಸೆಕೆಂಡ್​ ಕೊಟ್ರೆ ನೀವು ಸ್ಟೋರ್​ನಲ್ಲಿ ಏನನ್ನು ಕೊಳ್ಳುವಿರಾ? ಏಕೆಂದರೆ ಇಂಥದ್ದೆ ಒಂದು ಸನ್ನಿವೇಶ ಇಲ್ಲೊಬ್ಬ ಬಾಲಕನಿಗೆ ಎದುರಾಗಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದೆ.

    ಇದನ್ನೂ ಓದಿ: ಎದುರಾಳಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಗೆಲುವು ನನ್ನದೇ

    ಕ್ಯಾಷಿಯರ್ ಅಥವಾ ಸ್ಟೋರ್​ ಕೌಂಟರ್​ನಲ್ಲಿರುವ ವ್ಯಕ್ತಿಯೊಬ್ಬ ವಿಡಿಯೋ ರೆಕಾರ್ಡಿಂಗ್​ ಮಾಡಿಕೊಳ್ಳುತ್ತಿರುತ್ತಾರೆ. ಸರಳ ಗಣಿತ ಪ್ರಶ್ನೆಗೆ ಉತ್ತರಿಸಿದರೆ 5 ಸೆಕೆಂಡ್​ ಉಚಿತ ಶಾಪಿಂಗ್​ ಮಾಡಲು ಅವಕಾಶ ಕೊಡುತ್ತೇನೆಂದು ರೆಕಾರ್ಡ್​ ಮಾಡುವವರು ಹೇಳುತ್ತಾರೆ. ಬಾಲಕ ಸರಿಯಾದ ಉತ್ತರವನ್ನೂ ಕೊಡುತ್ತಾನೆ. ಬಳಿಕ ಕ್ಯಾಷಿಯರ್​ ನಿಧಾನವಾಗಿ ಐದು ಸೆಕೆಂಡ್​ ಎಣಿಸುವಾಗ ಬಾಲಕ ಮೊದಲು ಬಾಳೆಹಣ್ಣು, ಅವಕಾಡೊ, ಈರುಳ್ಳಿ ತೆಗೆದುಕೊಳ್ಳುವುದನ್ನು ನೋಡಿ ನೆಟ್ಟಿಗರಿಗೆ ಅಚ್ಚರಿಯಾಗುತ್ತದೆ. ಬಳಿಕ ಬಾಲಕ ಆಹಾರ ಪೊಟ್ಟಣಗಳನ್ನು ತೆಗೆದುಕೊಳ್ಳುತ್ತಾನೆ. ನಂತರ ಒಂದು ಬಾಕ್ಸ್​ ಆ್ಯಪಲ್​ ಏರ್​ಪಾಡ್ಸ್​ ತೆಗೆದುಕೊಳ್ಳುತ್ತಾನೆ.

    ಈ ವಿಡಿಯೋವನ್ನು @_itsmedyy ಎಂಬ ಇನ್​ಸ್ಟಾಗ್ರಾಂ ಬಳಕೆದಾರ ಪೋಸ್ಟ್​ ಮಾಡಿದ್ದು, ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ಅನೇಕ ಮಂದಿ ವಿಡಿಯೋಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬಾಲಕ ನಿಮ್ಮ ಸ್ಟೋರ್​ನ ಕಪಾಟುಗಳನ್ನು ಖಾಲಿ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಅವನ ಕುಟುಂಬಕ್ಕೆ ಅಗತ್ಯವಿರುವ ಸ್ವಾದಿಷ್ಟಕರ ಆಗಾರವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದಾನೆಂದು ನೆಟ್ಟಿಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವನು ಯಾವ ರೀತಿ ಚೆನ್ನಾಗಿ ಬೆಳೆದಿದ್ದಾನೆ ಎಂಬುದ ನಿಮಗೆಲಲ್ಲ ಈಗ ತಿಳಿದಿದೆ ಎಂದು ಮತ್ತೊರ್ವ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ನಾಯಕತ್ವ ಭದ್ರಕ್ಕೆ ಯಡಿಯೂರಪ್ಪ ತಂತ್ರ, ಆರ್​ಆರ್ ನಗರ ಜತೆಗೆ ಶಿರಾ ಗೆಲ್ಲಲು ಕಾರ್ಯತಂತ್ರ

     

    View this post on Instagram

     

    I will definitely be getting more produce 😋😍 Does he deserve more rounds? -LIKE AND SHARE IF YOU CARE ❤️

    A post shared by Ahmed Alwan (@_itsmedyy_) on

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts