More

    ಇಬ್ಬರ ಆಸೆಗೂ ಕೊಳ್ಳಿ ಇಟ್ಟ ದಳ್ಳುರಿ: ಮೂರ್ತಿಗೂ ಇಲ್ಲ, ರಾಜ್​ಗೂ ಇಲ್ಲ ಕಾಂಗ್ರೆಸ್ ಟಿಕೆಟ್!

    ಬೆಂಗಳೂರು: ರಾಜಧಾನಿಯ ದೇವರಜೀವನಹಳ್ಳಿ (ಡಿಜೆ ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ) ಎಂಬಲ್ಲಿ ನಡೆದಿದ್ದ ಗಲಭೆ ಪ್ರಕರಣ ರಾಜ್ಯದ ಗಮನವನ್ನೇ ಸೆಳೆದಿತ್ತು. ಅದೇ ದಳ್ಳುರಿ ಪ್ರಕರಣ ಈಗ ಇಬ್ಬರು ನಾಯಕರ ಸ್ಪರ್ಧೆಯ ಆಸೆಗೆ ಕೊಳ್ಳಿ ಇಟ್ಟಿದೆ. ಪರಿಣಾಮವಾಗಿ ಕಾಂಗ್ರೆಸ್ ಟಿಕೆಟ್ ಮೂರ್ತಿಗೂ ಇಲ್ಲ ರಾಜ್​ಗೂ ಇಲ್ಲ ಎಂಬಂತಾಗಿದೆ.

    ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯ ಗಲಭೆ ಪ್ರಕರಣದಿಂದಾಗಿ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಸಂಪತ್ ರಾಜ್ ಹೆಸರು ರಾಜ್ಯದ್ಯಾಂತ ಕೇಳಿ ಬರಲಾರಂಭಿಸಿತ್ತು. ಕೋಮುದ್ವೇಷದ ಸ್ವರೂಪದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಾಕಲಾಗಿದ್ದು, ಸಂಪತ್​ರಾಜ್​ ವಿರುದ್ಧ ಆರೋಪ ಕೇಳಿ ಬಂದಿತ್ತು. ಹೀಗಾಗಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಆಕಾಂಕ್ಷಿಯಾಗಿದ್ದ ಇಬ್ಬರಿಗೂ ಟಿಕೆಟ್ ಕೈತಪ್ಪಿದೆ.

    ಇದನ್ನೂ ಓದಿ: ಪತಿಯ ನಿಧನ, ಬಳಿಕ ಗರ್ಭಪಾತವಾಗಿ ಮಗು ಕೂಡ ಸಾವು; ಇನ್ನು ಮಕ್ಕಳಾಗಲ್ಲವೆಂದು ಮಗುವನ್ನು ಕದ್ದ ಮಹಿಳೆಯ ಬಂಧನ

    ಅಖಂಡ ಶ್ರೀನಿವಾಸಮೂರ್ತಿಗೆ ಸಿದ್ದರಾಮಯ್ಯ ಹಾಗೂ ಸಂಪತ್​ರಾಜ್​ಗೆ ಡಿ.ಕೆ.ಶಿವಕುಮಾರ್ ಬೆಂಬಲವಾಗಿದ್ದರೂ ಇಬ್ಬರೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬಂಥ ವಾತಾವರಣ ಇದ್ದಿದ್ದು, ಇಬ್ಬರ ನಡುವಿನ ಪೈಪೋಟಿಯ ಕಾವಿಗೆ ಕಾಂಗ್ರೆಸ್​ ಐದನೇ ಪಟ್ಟಿ ತಣ್ಣೀರೆರಚಿದೆ.

    ಇದನ್ನೂ ಓದಿ: ರಾಜ್ಯದಲ್ಲೂ ಉರಿತಾಪ: ಚುನಾವಣಾ ಪ್ರಚಾರಕ್ಕೆಂದು ಹೊರ ಹೋಗುವವರಿಗೆ ಇಲ್ಲಿದೆ ಕಿವಿಮಾತು!

    ಅಖಂಡಗೆ ಬಿಟ್ಟು ಸಂಪತ್​ಗೆ ಟಿಕೆಟ್ ಕೊಟ್ಟರೆ ತಪ್ಪು ಸಂದೇಶ ರವಾನೆ ಆಗುತ್ತದೆ. ಮಾತ್ರವಲ್ಲ ಬಿಜೆಪಿಯವರು ಅದನ್ನೇ ಅಸ್ತ್ರ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ ಇದಕ್ಕೆ ಹಿರಿಯ ನಾಯಕರಾದ ಜಿ.ಪರಮೇಶ್ವರ್ ಮತ್ತು ಕೆ.ಎಚ್.ಮುನಿಯಪ್ಪ ಕೂಡ ದನಿಗೂಡಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ ಕೊಟ್ಟರೆ ಇಬ್ಬರಿಗೂ ಕೊಡಿ, ಇಲ್ಲದಿದ್ದರೆ ಇಬ್ಬರಿಗೂ ಬೇಡ ಎಂಬ ನಿರ್ಣಯದೊಂದಿಗೆ ಕೊನೆಗೆ ಇಬ್ಬರಿಗೂ ಟಿಕೆಟ್ ನಿರಾಕರಿಸಲಾಗಿದೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬಂತೆ ದೇವನಹಳ್ಳಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎ.ಸಿ.ಶ್ರೀನಿವಾಸ್​ಗೆ ಪುಲಕೇಶಿನಗರದ ಟಿಕೆಟ್ ಸಿಕ್ಕಿದೆ.

    ‘ಈ ಸಲ ಯಾರಿಗೆ ಮತ ಹಾಕಲಿ?’ ಎಂದು ಕೇಳಿದರೆ ಇದು ಏನನ್ನುತ್ತೆ?: ಕೃತಕ ಬುದ್ಧಿಮತ್ತೆಯ ಬುದ್ಧಿಮಾತು!

    ಜೆಡಿಎಸ್​ ಪಟ್ಟಿಯಲ್ಲಿ ಮಹತ್ವದ ಬದಲಾವಣೆ; 12 ಕ್ಷೇತ್ರಗಳಲ್ಲಿ ಹೊಸದಾಗಿ ಅಭ್ಯರ್ಥಿಗಳ ಘೋಷಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts