More

    ದುಡಿಮೆ ಹಣವನ್ನು ಶೈಕ್ಷಣಿಕ ಪ್ರಗತಿಗೂ ಮೀಸಲಿಡಿ, ಅರೆಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ ಕಿವಿಮಾತು

    ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
    ದುಡಿಮೆಯಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮೀಸಲಿರಿಸಿದ್ದು, ಪ್ರತಿ ವರ್ಷವೂ ವಿಶೇಷವಾಗಿ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ ಎಂದು ಅರೆಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ ಆರ್. ಹೇಳಿದರು.


    ಹೋಬಳಿಯ ಅರೇಬೊಮ್ಮನಹಳ್ಳಿಯ ಎಸ್‌ಎಲ್‌ಎನ್ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರ ಶಿಕ್ಷಣಕ್ಕೆ ಉಳ್ಳವರು ಕೈಲಾದ ಸಹಾಯ ಮಾಡಬೇಕು. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವದಾದ್ಯಂತ ವಿವಿಧ ಹುದ್ದೆ ಅಲಂಕರಿಸಿರುವುದು ಸಂತಸದ ಸಂಗತಿ. ಅಂತಹ ವಿದ್ಯಾರ್ಥಿಗಳು ಈಗಿನ ವಿದ್ಯಾರ್ಥಿಗಳ ಕಲಿಕೆಗೆ ಸ್ಫೂರ್ತಿಯಾಗಬೇಕು ಎಂದರು.


    ಗ್ರಾಮಾಂತರ ಮತ್ತು ಹಳ್ಳಿಗಾಡಿನ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸುವುದು ನಿಜವಾದ ಶಿಕ್ಷಣ ಪ್ರೇಮ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.


    ಆರ್ಥಿಕ ತೊಂದರೆ ಇರುವ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ವಿತರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ.ಇದನ್ನು ಸರಿಯಾದ ರೀತಿ ಸದ್ಬಳಸಿಕೊಳ್ಳಬೇಕು. ನಾನು ಕೂಡ ಮಕ್ಕಳ ಶೈಕ್ಷಣಿಕ ಪ್ರಗತಿ ಸಹಕಾರ ನೀಡುತ್ತಿರುವುದಾಗಿ ತಿಳಿಸಿದರು.


    ನೋಟ್ ಬುಕ್ ವಿತರಣೆ: ಅರೇಬೊಮ್ಮನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 13 ಗ್ರಾಮಗಳ ಪೈಕಿ 16 ಶಾಲೆಯ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ 2000 ನೋಟ್ ಬುಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಇಂದು ಸುಮಾರು 400 ಮಂದಿಗೆ ವಿತರಿಸಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಅಂಜನಮೂರ್ತಿ ಮಾಹಿತಿ ನೀಡಿದರು.


    ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಹೊನ್ನರಾಯನಹಳ್ಳಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಗ್ರಾಪಂ ಸದಸ್ಯರಾದ ರಂಗಸ್ವಾಮಿ, ಸೂಲ್ಕುಂಟೆ ಆಂಜನಮೂರ್ತಿ, ಮೆಳೇಕತ್ತಿಗನೂರು ಶ್ರೀನಿವಾಸ್, ಲೀಲಾ ಮೂರ್ತಿ, ಮುಖಂಡರಾದ ಕೋಡಪ್ಪನಹಳ್ಳಿವೆಂಕಟೇಶ್, ಅಗ್ರಹಾರ ನವೀನ್ ಕುಮಾರ್, ತಾಳೇಕೆರೆ ಚೌಡಪ್ಪ, ರಘು, ತಿಮ್ಮಸಂದ್ರ ರವಿಕುಮಾರ್, ಸೂಲ್ಕುಂಟೆ ಹನುಮಂತರಾಜು, ಮಂಜುನಾಥ್, ಕೆ.ಅಗ್ರಹಾರ ನಾಗೇಶ್, ತಾಳೇಕೆರೆ ಕೃಷ್ಣಮೂರ್ತಿ, ಮುಖ್ಯಶಿಕ್ಷಕರಾದ ಟಿ.ಕೆ.ರವಿಕುಮಾರ್, ಲಕ್ಷ್ಮೀಪತಿ, ಮಾಜಿ ಉಪಾಧ್ಯಕ್ಷ ರಾಮಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts