More

    ಪ್ರವಾಸ ಮಾಡಿದವರೆಲ್ಲರೂ ಪುಸ್ತಕ ಬರೆಯಲ್ಲ

    ಪ್ರವಾಸ ಮಾಡಿದವರು ಪುಸ್ತಕ ಬರೆಯುವುದಿಲ್ಲ. ಪುಸ್ತಕ ಬರೆದವರು ಜನರ ಮಧ್ಯೆ ಮಾತನಾಡುವುದಿಲ್ಲ ಎಂದು ಮುಕ್ತಕ ಕವಿ ಮುತ್ತುಸ್ವಾಮಿ ಹೇಳಿದರು.

    ಅಭಿರುಚಿ ಬಳಗ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಮೈಸೂರು ವಿಭಾಗ ಸಹಯೋಗದಲ್ಲಿ ನಿಮಿಷಾಂಬ ಬಡಾವಣೆಯ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಎನ್.ವಿ.ರಮೇಶ್ ಅವರ ‘ಮಧುಚಂದ್ರಕ್ಕಾಗಿ ಆಹ್ವಾನಿಸುತ್ತಿವೆ ವಿದೇಶಗಳ ವಿಶೇಷ ಸ್ಥಳಗಳು’ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪುಸ್ತಕ ಬರೆಯುವುದು ಕಡಿಮೆ

    ಎಲ್ಲರೂ ವಿದೇಶ ಪ್ರವಾಸ ಮಾಡಲಾಗುವುದಿಲ್ಲ. ಅದೇ ರೀತಿ ಪ್ರವಾಸ ಮಾಡಿದವರು ಪುಸ್ತಕ ಬರೆಯುವುದು ಕಡಿಮೆ. ಆದರೆ, 34 ದೇಶ ಸುತ್ತಿ ಬಂದಿರುವ ರಮೇಶ್ ಅವರು ಪ್ರವಾಸ ಮಾಡಲು ಇತರರಿಗೆ ಪ್ರೇರೇಪಿಸಲು ಪುಸ್ತಕ, ಅಂಕಣ ಬರೆದಿದ್ದಾರೆ ಎಂದರು.

    ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ ಮಾತನಾಡಿ, ಎನ್.ವಿ.ರಮೇಶ್ ಅವರ ವಿದೇಶಗಳ ಪ್ರವಾಸಕಥನ ಪುಸ್ತಕಗಳು, ಅಂಕಣಗಳು ದೇಶ-ವಿದೇಶಗಳ ಸಂಸ್ಕೃತಿ ಅರಿಯಲು ಹಾಗೂ ಪ್ರವಾಸ ಮಾಡಲು ಉತ್ತೇಜನ ನೀಡುತ್ತವೆ ಎಂದರು.

    ಪ್ರದೇಶಗಳಿಗೆ ಪ್ರವಾಸ ಹೋಗಬೇಕು

    ಪುಸ್ತಕ ಕರ್ತೃ ಎನ್.ವಿ.ರಮೇಶ್ ಮಾತನಾಡಿ, ಪ್ರವಾಸ ಪುಸ್ತಕಗಳನ್ನು ಬರೆಯುವ ಮೊದಲು ಲೇಖಕರು ಆಯಾ ಪ್ರದೇಶಗಳಿಗೆ ಪ್ರವಾಸ ಹೋಗಬೇಕು. ವಿದೇಶ ಪ್ರವಾಸದ ಸಿದ್ಧತೆ, ಪಾಸ್‌ಪೋರ್ಟ್, ವೀಸಾ, ವಿದೇಶಿ ವಿನಿಮಯ, ಪ್ರವಾಸ ಸಂಘಟನೆ ಬಗ್ಗೆ ವಿವರಿಸಿದರು.

    ಕವಿಗೋಷ್ಠಿಯಲ್ಲಿ 14 ಜನ ಕವಿತೆ ಓದಿದರು. ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಅಧ್ಯಕ್ಷ ಮಲೆಯೂರು ಪ್ರಭುಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts