ಹಿಜಾಬ್​ ಧರಿಸಿ ದುಬೈ ಸುತ್ತಿದ್ದ ಅಂಕಿತಾ ಲೋಖಂಡೆ: ಬಾಲಿವುಡ್​ ನಟಿ ನಡೆಗೆ ನೆಟ್ಟಿಗರು ಗರಂ; ಮತಾಂತರ ಆಗಿದ್ದು ನಿಜವೇ ಎಂದು ಕಮೆಂಟ್! Ankita Lokhande

ಹಿಜಾಬ್​ ಧರಿಸಿರುವ ನಟಿ ಅಂಕಿತಾ ಲೋಖಂಡೆ
ಹಿಜಾಬ್​ ಧರಿಸಿರುವ ನಟಿ ಅಂಕಿತಾ ಲೋಖಂಡೆ
Published on
ವೈರಲ್​: ಕಿರುತೆರೆಯ ಪವಿತ್ರ ರಿಷ್ತಾ ಧಾರಾವಾಹಿ ಖ್ಯಾತಿಯ ನಟಿ, ಬಾಲಿವುಡ್ ಬ್ಯೂಟಿ ಅಂಕಿತಾ ಲೋಖಂಡೆ (Ankita Lokhande) ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರ್ತಾರೆ. ಆದರೆ ಈಗ ಅಂಕಿತಾ ಅಬುಧಾಬಿಗೆ ಹೋಗಿ ಬಂದ ಫೋಟೋಗಳು ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ವೇದಿಕೆಯಾಗಿದೆ. ಮಸೀದಿಗೆ ಹೋದಾಗ ಹಿಜಾಬ್ ಧರಿಸಿದ್ದ ಫೋಟೋ ನೋಡಿ ನೆಟ್ಟಿಗರು ಇವರನ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ.
ಅಂಕಿತಾ ಲೋಖಂಡೆ ತಮ್ಮ ಪತಿ ವಿಕ್ಕಿ ಜೈನ್ ಜೊತೆ ಇತ್ತೀಚೆಗೆ ಅಬುಧಾಬಿಗೆ ರಜೆಯ ಮಜಾ ಕಳೆಯಲು ಟ್ರಿಪ್ ಹೋಗಿದ್ದರು. ಅಲ್ಲಿ ತಾವು ಕಳೆದ ಕ್ಷಣಗಳ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ಫೋಟೋಗಳಲ್ಲಿ ಅಂಕಿತಾ ಹಿಜಾಬ್ ಧರಿಸಿರುವುದು ಕೆಲವರ ಕಣ್ಣು ಕೆಂಪಾಗಿಸಿದೆ.

ಹಿಜಾಬ್ ಧರಿಸಿದ್ದೇ ತಪ್ಪಾ? ನೆಟ್ಟಿಗರ ನಡುವೆ ಕಮೆಂಟ್ ವಾರ್!

ಅಬುಧಾಬಿಯ ಪ್ರಸಿದ್ಧ ಮಸೀದಿಗೆ ಭೇಟಿ ನೀಡಿದ್ದಾಗ ಅಂಕಿತಾ ಅಲ್ಲಿನ ನಿಯಮದಂತೆ ಹಿಜಾಬ್ ಧರಿಸಿದ್ದರು. ಆದರೆ ಮಸೀದಿಯಿಂದ ಹೊರಬಂದ ಮೇಲೂ ಅವರು ಅದನ್ನು ಧರಿಸಿಕೊಂಡೇ ಇದ್ದದ್ದು ಕೆಲವರಿಗೆ ಇಷ್ಟವಾಗಿಲ್ಲ. ಫೋಟೋಗಳು ಅಪ್‌ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಕಮೆಂಟ್ ಬಾಕ್ಸ್‌ನಲ್ಲಿ ಧರ್ಮ ಯುದ್ಧವೇ ಶುರುವಾಗಿ ಹೋಗಿದೆ.
ಇವಳು ಹಿಜಾಬ್ ಯಾಕೆ ಧರಿಸಿದ್ದಾಳೆ? ಹಿಂದೂ ಧರ್ಮ ಬಿಟ್ಟು ಮುಸ್ಲಿಂ ಆಗಿಬಿಟ್ಟಿದ್ದಾಳಾ? ಎಂದು ಒಬ್ಬ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ. ಮತಾಂತರ ಆಗಿದ್ದೀರಾ? ಅಂತ ಮತ್ತೊಬ್ಬರು ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

ಟ್ರೋಲರ್ಸ್ ಬಾಯಿ ಮುಚ್ಚಿಸಿದ ಅಂಕಿತಾ ಫ್ಯಾನ್ಸ್!

ಟ್ರೋಲಿಂಗ್ ಮಿತಿಮೀರುತ್ತಿದ್ದಂತೆ ಅಂಕಿತಾ ಲೋಖಂಡೆ ಪರವಾಗಿ ಅವರ ಅಭಿಮಾನಿಗಳು ಅಖಾಡಕ್ಕಿಳಿದಿದ್ದಾರೆ. ಧರ್ಮದ ಹೆಸರಲ್ಲಿ ನೆಗೆಟಿವಿಟಿ ಹರಡುತ್ತಿದ್ದವರಿಗೆ ಫ್ಯಾನ್ಸ್ ಸರಿಯಾಗಿಯೇ ಕ್ಲಾಸ್ ತಗೊಂಡಿದ್ದಾರೆ.
ನಿಮ್ಮ ಸ್ವಂತ ಕೆಲಸ ಏನಿರುತ್ತೋ ಅದನ್ನ ನೋಡಿಕೊಳ್ಳಿ! ಆ ಮಸೀದಿಯ ನಿಯಮಗಳು ಏನು ಅಂತ ಗೊತ್ತಿಲ್ಲಾಂದ್ರೆ ಬಾಯಿ ಮುಚ್ಚಿಕೊಂಡು ಇರಿ. ಎಲ್ಲ ಕಡೆ ಧರ್ಮದ ಹೆಸರಲ್ಲಿ ನೆಗೆಟಿವಿಟಿ ತರೋದನ್ನ ನಿಲ್ಲಿಸಿ ಎಂದು ಒಬ್ಬರು ಟ್ರೋಲರ್ಸ್‌ಗೆ ಧಮ್ಕಿ ಹಾಕಿದ್ದಾರೆ.
ಅವಳು ಯಾವುದೇ ಮುಸ್ಲಿಂ ಸಂಸ್ಕೃತಿಯನ್ನ ಪ್ರಚಾರ ಮಾಡ್ತಿಲ್ಲ. ಒಂದು ಸ್ಮಾರಕವನ್ನ ನೋಡಲು ಹೋಗಿದ್ದಾಳೆ. ಬೇಸಿಗೆಯಲ್ಲಿ ಬಿಸಿಲಿನ ಶಾಖ ತಡೆಯಲು ಎಷ್ಟೋ ಹುಡುಗಿಯರು ಮುಖ, ತಲೆ ಮುಚ್ಚಿಕೊಳ್ಳುತ್ತಾರೆ. ಹಾಗಾದ್ರೆ ಅವರೆಲ್ಲರೂ ಇಸ್ಲಾಂ ಧರ್ಮ ಪ್ರಚಾರ ಮಾಡ್ತಿದ್ದಾರಾ? ಅಂತ ಮತ್ತೊಬ್ಬರು ಲಾಜಿಕಲ್ ಆಗಿ ಪ್ರಶ್ನೆ ಮಾಡಿದ್ದಾರೆ.

ಕಿರುತೆರೆಯಿಂದ ಬಾಲಿವುಡ್‌ವರೆಗೆ ಅಂಕಿತಾ ಜರ್ನಿ!

ಪವಿತ್ರ ರಿಷ್ತಾ ಸೀರಿಯಲ್ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ಅಂಕಿತಾ, ನಂತರ ಬಾಲಿವುಡ್‌ನ ಸಿನಿಮಾಗಳಾದ ಕಂಗನಾ ರಣಾವತ್ ಅವರ ಮಣಿಕರ್ಣಿಕಾ ಮತ್ತು ಬಾಘಿ 3 ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ತಮ್ಮ ಸಹನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ದೀರ್ಘಕಾಲ ಪ್ರೀತಿಯಲ್ಲಿದ್ದ ಅಂಕಿತಾ, ನಂತರ ಬಿಲಾಸ್‌ಪುರದ ಉದ್ಯಮಿ ವಿಕ್ಕಿ ಜೈನ್ ಅವರನ್ನು ಕೈಹಿಡಿದರು.
ಈ ಜೋಡಿ ಬಿಗ್ ಬಾಸ್ ಮತ್ತು ಸ್ಮಾರ್ಟ್ ಜೋಡಿ ರಿಯಾಲಿಟಿ ಶೋಗಳಲ್ಲೂ ಒಟ್ಟಿಗೆ ಕಾಣಿಸಿಕೊಂಡು ಸಖತ್ ಹೈಪ್ ಕ್ರಿಯೇಟ್ ಮಾಡಿದ್ರು. ಸದ್ಯ ಈ ಕ್ಯೂಟ್ ಕಪಲ್ ಲಾಫ್ಟರ್ ಚೆಫ್ಸ್ ಸೀಸನ್ 2 ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಕಿರುತೆರೆಯಲ್ಲಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net