More

    ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ಭೇಟಿ

    ಮಂಗಳೂರು: ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ಅವರು ನಿನ್ನೆ (ಜೂನ್​​ 23) ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.

    ಈ ಬಗ್ಗೆ ಕೂ ವೇದಿಕೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದೆ. ದೇವರ ದರ್ಶನ ತುಂಬಾ ಚೆನ್ನಾಗಿ ಆಯಿತು ಎಂದು ಬರೆದುಕೊಂಡಿದ್ದಾರೆ.

    ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ಭೇಟಿ

    ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಧುರ್ ಭಂಡಾರ್ಕರ್ ಅವರು, ಇಂದು ಸರ್ಕಾರ (2017), ಕ್ಯಾಲೆಂಡರ್ ಗಲ್ರ್ಸ್ (2015) ಹೀರೋಯಿನ್ (2012), ದಿಲ್ ತೋ ಬಚ್ಚಾ ಹೈ ಜಿ (2011), ಜೈಲ್ (2009), ಫ್ಯಾಶನ್ (2008) ಸೇರಿದಂತೆ ಹಲವು ಉತ್ತಮ ಸಿನಿಮಾಗಳನ್ನು ಬಾಲಿವುಡ್ ಜಗತ್ತಿಗೆ ನೀಡಿದ್ದಾರೆ. ಮಧುರ್ ಭಂಡಾರ್ಕರ್ ಅವರನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ ಸೊಸೈಟಿ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ಇನ್ನು ಇವರ ಸಿನಿ ಸೇವೆಗೆ 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ.

    2007ರಲ್ಲಿ ಟ್ರಾಫಿಕ್ ಸಿಗ್ನಲ್ ಸಿನಿಮಾಗೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ, 2014 ರ ಸಿರಾಕ್ಯೂಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೋಫಿಯಾ ಪ್ರಶಸ್ತಿ, 2013-14 ರ ಕ್ರಿಯೇಟಿವ್ ಸ್ಪಿರಿಟ್ ಮತ್ತು ವಿಷನರಿ ಡೈರೆಕ್ಟರ್ಸ್ ಅವಾರ್ಡ್ – ಹೌಸ್ ಆಫ್ ಕಾಮನ್ಸ್, ಲಂಡನ್, UK ನಲ್ಲಿ ಪ್ರತಿಷ್ಠಿತ ಬ್ರಿಟಿಷ್ ಗೌರವವನ್ನು ನೀಡಲಾಗಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮಹಾರಾಷ್ಟ್ರ ರಾಜ್ಯವು ಭಂಡಾರ್ಕರ್ ಅವರಿಗೆ ರಾಜ್ ಕಪೂರ್ ಸ್ಮೃತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

    ಡಾ. ವಿಜಯ ಸಂಕೇಶ್ವರರ ಸಂದರ್ಶನ ಚಂದನ ವಾಹಿನಿಯಲ್ಲಿ ಇಂದು ಪ್ರಸಾರ

    ಸೂಲಿಬೆಲೆಯಲ್ಲಿ ರಾಜಕಾಲುವೆಗಳ ಅವ್ಯವಸ್ಥೆ; ಮಳೆ ಬಂದರೆ ಮನೆಗೇ ನುಗ್ಗುತ್ತೆ ನೀರು ಒತ್ತುವರಿಯಿಂದ ಸಾರ್ವಜನಿಕರಿಗೆ ಸಂಕಷ್ಟ

    ಕಾಂಗ್ರೆಸ್​ನಿಂದಲೇ ಪಠ್ಯಪ್ರಮಾದ; 200 ಪುಟ ದಾಖಲೆ ಬಿಡುಗಡೆ, ಪರಿಷ್ಕರಣೆ ವಾಪಸಿಲ್ಲ ಎಂದ ಅಶೋಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts