More

    ವರ್ಷಕ್ಕೆ 2 ಸಾವಿರಕ್ಕೂ ಹೆಚ್ಚು ಸಿನಿಮಾ ನಿರ್ಮಾಣ, ಡಿಡಿಎಲ್​ಜೆ, ಶೋಲೆ ಸಿನಿಮಾ ಪ್ರಸ್ತಾಪಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್​

    ಅಹಮದಾಬಾದ್​: ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣ ಮೊಟೆರೋ ಸ್ಟೇಡಿಯಂನಲ್ಲಿ ಡೊನಾಲ್ಡ್​ ಟ್ರಂಪ್​ ತಮ್ಮ ಭಾಷಣದಲ್ಲಿ ಮನರಂಜನಾ ಮಾಧ್ಯಮ ಸಿನಿಮಾದ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು.

    ಭಾರತದ ದೇಶದ ಕ್ರಿಯಾಶೀಲತೆಯನ್ನು ಹೊಗಳಿದ ಟ್ರಂಪ್​, ಇಡೀ ವಿಶ್ವದಲ್ಲಿ ಭಾಂಗ್ರಾ, ಸಂಗೀತ, ನೃತ್ಯವನ್ನು ಆಸ್ವಾದಿಸುತ್ತಾರೆ. ಭಾರತದ ಸಿನಿಮಾಗಳಾದ ದಿಲ್​ವಾಲೇ ದುಲ್ಹನಿಯಾ ಲೇಜಾಯೇಂಗೆ ಮತ್ತು ಶೋಲೆ ಬಗ್ಗೆ ಪ್ರಸ್ತಾಪ ಮಾಡಿದರು.

    ಭಾರತವು ಒಂದು ವರ್ಷಕ್ಕೆ 2 ಸಾವಿರಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುತ್ತದೆ. ಇದು ಬಾಲಿವುಡ್​ನ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಇದರಿಂದ ಇಡೀ ವಿಶ್ವದ ಜನ ಸಿನಿಮಾಗಳನ್ನು ನೋಡಿ ಆನಂದಿಸುತ್ತಾರೆ ಎಂದರು.

    ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಹಾಗೂ ಇಂಡಿಯನ್​ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಹೆಸರನ್ನು ಉಲ್ಲೇಖಿಸಿದ ಟ್ರಂಪ್​, ಈ ದೇಶದ ಜನ ಸಚಿನ್​ ತೆಂಡೂಲ್ಕರ್​, ವಿರಾಟ್ ಕೊಹ್ಲಿ ಅವರ ಜತೆಗೆ ಶ್ರೇಷ್ಠ ಕ್ರಿಕೆಟ್​ ಆಟಗಾರರನ್ನೂ ಹುರಿದುಂಬಿಸುತ್ತಾರೆ. ಇದೊಂದು ಒಳ್ಳೆಯ ವಿಚಾರ ಎಂದು ಟ್ರಂಪ್​ ಅಭಿಪ್ರಾಯ ಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts