More

    ರಕ್ತದಾನ ಮಾನವೀಯ ನಡೆ

    ಕುಡಚಿ: ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು ಬೇರೆಯವರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಕುಡಚಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎಚ್.ಎನ್.ಸಾಬಡೆ ಹೇಳಿದರು.

    ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಪಂ ರಾಯಬಾಗ ಮತ್ತು ತಾಲೂಕು ಆರೋಗ್ಯ ಮತ್ತು ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಉಗಾರ, ವ್ಯಾಪಾರಸ್ಥರ ಸಂಘ ಕುಡಚಿ ಮತ್ತು ಬಿ. ಶಂಕರಾನಂದ ಮಹಾವಿದ್ಯಾಲಯ ಕುಡಚಿ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಪಿಕೆಪಿಎಸ್ ಅಧ್ಯಕ್ಷ ಅಲ್ಲಾದ್ದೀನ್ ರೋಹಿಲೆ, ಬಿಮ್ಸ್ ವೈದ್ಯಾಧಿಕಾರಿ ಅಜಿತ ಗಾಯಕವಾಡ, ಕುಡಚಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ ಕಲಟ್ಟಿ, ಚಿಕ್ಕ ಮಕ್ಕಳ ತಜ್ಞೆ ಡಾ.ಅಶ್ವಿನಿ ಮೇಕನಮರಡಿ, ಡಾ.ಸಂಜೀವ ಶಿಂಧೆ, ಡಾ.ಬಿ.ಎ.ಪಾಟೀಲ, ಡಾ.ರಿಯಾಜ್ ತಾಜೀನ್, ಡಾ.ಸಚಿನ ಪೋತದಾರ, ದತ್ತಾ ಸಣ್ಣಕ್ಕಿ, ಪ್ರಾಚಾರ್ಯ ಎ.ಎಸ್.ಕಾಂಬಳೆ, ಶೇಖರ ದಳವಾಯಿ, ಮೋಹನ ಲೋಹಾರ, ಶ್ರೀಶೈಲ ದರೂರೆ ಇತರರು ಉಪಸ್ಥಿತರಿದ್ದರು. 65ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts