More

    ರಕ್ತ ನ್ಯೂನತೆ ನಿವಾರಣಗೆ ಪೌಷ್ಠಿಕ ಆಹಾರ ಸೇವಿಸಿ

    ಹನುಮಸಾಗರ:ಹೆರಿಗೆ ಸಮಯದಲ್ಲಿ ಬಹಳಷ್ಟು ಮಹಿಳೆಯರು ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದು, ಇದನ್ನು ತಡೆಗಟ್ಟಲು ಗರ್ಭಿಣಿಯರು ಹಸಿರು ಸೋಪ್ಪು, ತರಕಾರಿ ಮತ್ತು ಕೊಬ್ಬಿಣಾಂಶದ ಪದಾರ್ಥಗಳನ್ನು ನಿತ್ಯ ಸೇವಿಸಬೇಕು ಎಂದು ಅಂಗನವಾಡಿ ಮೇಲ್ವಿಚಾರಿಕಿ ಮಂಜುಳಾ ಹಕ್ಕಿ ಹೇಳಿದರು.

    ಇದನ್ನೂ ಓದಿ: ದಾನಗಳಲ್ಲಿ ರಕ್ತದಾನ ಎಲ್ಲಕ್ಕಿಂತ ಶ್ರೇಷ್ಠ

    ಪಟ್ಟಣದ 10ನೇ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆದ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪೌಷ್ಠಿಕ ಆಹಾರ, ಆರೋಗ್ಯ ಮತ್ತು ನೈರ್ಮಲ್ಯ, ಅತಿಸಾರ ನಿಯಂತ್ರಣ, ಅನಿಮಿಯ ಮುಕ್ತ ಭಾರತ ಹೀಗೆ ನಾನಾ ರೀತಿಯ ಪಂಚ ಸೂತ್ರಗಳಿವೆ. ಪೌಷ್ಠಿಕಾಂಶ ಮತ್ತು ಕಬ್ಬಿಣಾಂಶ ಕೊರತೆಯಿಂದ ಬಹಳಷ್ಟು ಮಹಿಳೆಯರು ಹೆರಿಗೆ ಸಮಯದಲ್ಲಿ ರಕ್ತ ಹೀನತೆಯಿಂದ ಬಳಲುತ್ತಾರೆ.

    ಇದನ್ನು ನಿಯಂತ್ರಿಸಲು ಮಹಿಳೆಯರು ಹಸಿರು ಸೋಪ್ಪು, ತರಕಾರಿ ಮತ್ತು ಕಬ್ಬಿಣಾಂಶದ ಪದಾರ್ಥಗಳಾದ ಶೇಂಗಾ, ಬೆಲ್ಲವನ್ನು ನಿತ್ಯ ಮಿತ ಪ್ರಮಾಣದಲ್ಲಿ ಸೇವಿಸಬೇಕು. ಅಪೌಷ್ಟಿಕತೆ ನಿವಾರಣೆ ಮಾಡಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.

    ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಹನುಮಸಾಗರ ವಲಯದ ಒಟ್ಟು 33 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts