More

    ದೇಶಾದ್ಯಂತ ಲಕ್ಷಾಂತರ ಜನರಿಂದ ರಕ್ತದಾನ: ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿಕೆ

    ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ದೇಶಾದ್ಯಂತ ಲಕ್ಷಾಂತರ ಜನ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿದರು.
    ಇಲ್ಲಿನ ಅರ್ಕೇಶ್ವರನಗರದ ಕುವೆಂಪು ಸರ್ಕಾರಿ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ ಕಳೆದ 15 ದಿನದಿಂದ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂತೆಯೆ ಮಹಾತ್ಮ ಗಾಂಧೀಜಿ ಅವರ ಜನ್ಮದಿನದಂತೆ ಸೇವಾ ಪಾಕ್ಷಿಕ ಕೊನೆಯಾಗಬೇಕು ಎಂಬ ಹಿನ್ನೆಲೆಯಲ್ಲಿ ಶಿಬಿರ ಆಯೋಜಿಸಲಾಗಿದೆ. ಲಾಲ್‌ಬಹದ್ದೂರ್‌ಶಾಸೀ ಅವರ ಜನ್ಮ ದಿನವೂ ಇಂದೇ ಆಗಿದ್ದು, ಅದಕ್ಕೆ ಅರ್ಥ ಬರುವ ನಿಟ್ಟಿನಲ್ಲಿ ತೀರ್ವಾನ ವಾಡಿ ರಕ್ತದಾನ ಶಿಬಿರ ಮಾಡಲಾಗಿದೆ ಎಂದರು.
    ಬಿಜೆಪಿ ಜಿಲ್ಲಾ ಉಸ್ತುವಾರಿ ಜಗದೀಶ್ ಹಿರೇಮನಿ, ಬಿಜೆಪಿ ನಗರಾಧ್ಯಕ್ಷ ವಿವೇಕ್, ಮುಖಂಡರಾದ ಚಂದಗಾಲು ಶಿವಣ್ಣ, ಡಾ.ಸದಾನಂದ, ಹನುಮಂತು, ಚಂದ್ರು, ಶಿವಕುವಾರ್, ತಾಯಮ್ಮ, ಶಿವಕುವಾರ್ ಆರಾಧ್ಯ ಇತರರಿದ್ದರು. ಇದೇ ವೇಳೆ 40ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
    ಕಂಬದಹಳ್ಳಿಯಲ್ಲಿ: ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ಸೇವಾ ಟ್ರಸ್ಟ್, ಕಂಬದಹಳ್ಳಿ ಗ್ರಾಮ ಪಂಚಾಯಿತಿ, ಆದಿಚುಂಚನಗಿರಿ ವೈದ್ಯಕೀಯ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಭಾನುವಾರ ರಕ್ತದಾನ ಮತ್ತು ನೇತ್ರದಾನ ಶಿಬಿರ ನಡೆಯಿತು.
    ಇದೇ ಸಂದರ್ಭದಲ್ಲಿ 28 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಅಂತೆಯೆ 48 ಜನರು ನೇತ್ರದಾನ ನೋಂದಣಿ ವಾಡಿಸಿಕೊಂಡರು. ಅಧ್ಯಕ್ಷ ಕಂಬದಹಳ್ಳಿ ಪುಟ್ಟಸ್ವಾಮಿ, ಬೇಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಶ್ವಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಪ್ರಸನ್ನ ಸೇವಾ ಟ್ರಸ್ಟ್‌ನ ಸಂಟನಾ ಕಾರ್ಯದರ್ಶಿ ಕುವಾರ್‌ಗೌಡ, ತಂಬಾಕು ಜಿಲ್ಲಾ ನಿಯಂತ್ರಣಾಧಿಕಾರಿ ತಿಮ್ಮರಾಜು, ಡಾ.ವಿಜಯ್ ಹೂಗಾರ್, ಡಾ.ಫಿರ್ದೂಸ್, ಗ್ರಾಪಂ ಸದಸ್ಯರಾದ ರಂಜಿತಾ, ತಾಯಮ್ಮ, ಹೇಮಲತಾ, ನಾಗರಾಜು, ನಾಗೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts