More

    ಮುಂಬೈಗೆ ಕಠಿಣ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್: ಲ್ಯಾನಿಂಗ್, ಜೆಮೀಮಾ ಅರ್ಧಶತಕ

    ನವದೆಹಲಿ: ಜೆಮೀಮಾ ರೋಡ್ರಿಗಸ್ (69* ರನ್, 33 ಎಸೆತ, 8 ಬೌಂಡರಿ, 3 ಸಿಕ್ಸರ್) ಬಿರುಸಿನ ಅರ್ಧಶತಕ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ (53 ರನ್, 38 ಎಸೆತ, 6 ಬೌಂಡರಿ, 2 ಸಿಕ್ಸರ್) ಸತತ 2ನೇ ಅರ್ಧಶತಕದ ನೆರವಿನಿಂದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) 2ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಕಠಿಣ ಗುರಿ ನೀಡಿದೆ.

    ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ದೆಹಲಿ ಚರಣದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಫೀಲ್ಡಿಂಗ್ ಆಯ್ಕೆಮಾಡಿಕೊಂಡರು.ಮೊದಲು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್‌ಗೆ 192 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ಹರ್ಮಾನ್‌ಪ್ರೀತ್ ಕೌರ್ ತಂಡಕ್ಕೆ ಮರಳಿದರು.

    ಡೆಲ್ಲಿ ಕ್ಯಾಪಿಟಲ್ಸ್: 4 ವಿಕೆಟ್‌ಗೆ 194 (ಮೆಗ್ ಲ್ಯಾನಿಂಗ್ 53, ಶೆಾಲಿ ವರ್ಮ 28, ಆಲಿಸ್ ಕ್ಯಾಪ್ಸಿ 19, ಜೆಮೀಮಾ ರೋಡ್ರಿಗಸ್ 69*, ಮಾರಿಜಾನ್ನೆ ಕಾಪ್ 11, ಜೆಸ್ ಜೋನಾಸೆನ್ 4*, ಹ್ಯಾಲೆ ಮ್ಯಾಥ್ಯೂಸ್ 23ಕ್ಕೆ 1, ಪೂಜಾ ವಸಕರ್ 20ಕ್ಕೆ 1).

    5: ಮೆಗ್ ಲ್ಯಾನಿಂಗ್ (5) ಡಬ್ಲುೃಪಿಎಲ್ ಟೂರ್ನಿಯಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ ಬ್ಯಾಟರ್ ಎನಿಸಿದರು. ಜತೆಗೆ 500 ರನ್‌ಗಳಿಸಿದ ಮೊದಲ ಬ್ಯಾಟುಗಾರ್ತಿ ಆಗಿದ್ದಾರೆ. ಹರ್ಮಾನ್‌ಪ್ರೀತ್ (4), ತಾಲಿಹಾ ಮೆಕ್‌ಗ್ರಾತ್ (4), ಶೆಾಲಿ ನಂತರದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts