More

    ಮಲಗುಂದ ಗ್ರಾಪಂಗೆ ಅಂಧ ಯುವಕನ ಸ್ಪರ್ಧೆ

    ಅಕ್ಕಿಆಲೂರ (ಹಾನಗಲ್ಲ ತಾ): ಸಮೀಪದ ಮಲಗುಂದ ಗ್ರಾಮ ಪಂಚಾಯಿತಿ ಚುನಾವಣೆ ಕಣಕ್ಕೆ ಅಂಧ ಯುವಕನೊಬ್ಬ ನಾಮಪತ್ರ ಸಲ್ಲಿಸಿದ್ದಾನೆ. ಗ್ರಾಮದ ಮಾರುತಿ ನಗರದ ನಿವಾಸಿ ಕೋಟೇಶ ಮಾರುತಿ ಆನವಟ್ಟಿ (25) ಎಂಬುವವರು 2ನೇ ವಾರ್ಡ್​ಗೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾನೆ. 8ನೇ ತರಗತಿವರೆಗೂ ಓದಿರುವ ಕೋಟೇಶ, ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾನೆ. ‘ಜನರೊಂದಿಗೆ ಬೆರೆತು ನನ್ನ ಏಕಾಂಗಿತನದಿಂದ ಹೊರ ಬರುವ ಜತೆಗೆ ಅಂಧತ್ವವಿದ್ದರೂ ಸಾಧನೆ ಮಾಡಬಲ್ಲೆ ಎಂಬುದನ್ನು ತೋರಿಸಲು ಸ್ಪರ್ಧಿಸಿದ್ದೇನೆ’ ಎನ್ನುತ್ತಾರೆ ಕೋಟೇಶ.

    ಒಂದೇ ವಾರ್ಡ್​ನಲ್ಲಿ ಪತಿ-ಪತ್ನಿ ಸ್ಪರ್ಧೆ

    ಗುತ್ತಲ (ಹಾವೇರಿ ತಾ): ಸಮೀಪದ ಕಂಚಾರಗಟ್ಟಿ ಗ್ರಾಪಂ ವ್ಯಾಪ್ತಿಯ ಹರಳಹಳ್ಳಿ ಗ್ರಾಮದಲ್ಲಿ ಪತಿ-ಪತ್ನಿ ಸ್ಪರ್ಧಿಸಿದ್ದು, ಕುತೂಹಲ ಮೂಡಿಸಿದೆ. ಗ್ರಾಮದ ಎರಡು ಸದಸ್ಯ ಸ್ಥಾನಗಳಲ್ಲಿ ಮಹಿಳಾ ಮೀಸಲು ಕೇತ್ರದಿಂದ ಶೀಲವ್ವ ಸಿದ್ದಪ್ಪ ಕಾನಳ್ಳಿ ಹಾಗೂ ಸಾಮಾನ್ಯ ಕೇತ್ರದಿಂದ ಸಿದ್ದಪ್ಪ ಈರಪ್ಪ ಕಾನಳ್ಳಿ ಸ್ಪರ್ಧಿಸಿದ್ದಾರೆ. ಇಬ್ಬರೂ ಕೃಷಿ ಕಾರ್ವಿುಕರು. ಗ್ರಾಮದ ಜನರಿಗೆ ಕೆಲ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಸಿದ್ದಪ್ಪ ಸಹಕರಿಸುತ್ತಿರುವುದರಿಂದ ಜನರ ಒತ್ತಾಸೆ ಮೇರೆಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬೆಳಗ್ಗೆಯಿಂದ ಸಿದ್ದಪ್ಪ ಒಬ್ಬರೇ ಚುನಾವಣೆ ಪ್ರಚಾರ ನಡೆಸುತ್ತಾರೆ. ಕೂಲಿ ಕೆಲಸ ಮುಗಿಸಿಕೊಂಡು ಬಂದ ನಂತರ ಶೀಲವ್ವ ಸಂಜೆ ವೇಳೆ ಪತಿಯೊಂದಿಗೆ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದಾರೆ.

    ಅದೃಷ್ಟ ಪರೀಕ್ಷೆಗಿಳಿದ ದಂಪತಿ

    ಗುತ್ತಲ: ಕಳೆದ ಚುನಾವಣೆಯಲ್ಲಿ ಸೋತ ಕ್ಷೇತ್ರದಿಂದ ಪತ್ನಿಯನ್ನು ಗೆಲ್ಲಿಸಲೇಬೇಕೆಂದು ಸ್ಪರ್ಧೆ ಮಾಡಿಸಿದ್ದಲ್ಲದೆ, ಗ್ರಾಮದ ಮತ್ತೊಂದು ವಾರ್ಡ್​ನಲ್ಲಿ ಪತಿಯೂ ಕಣಕ್ಕಿಳಿದಿದ್ದಾರೆ. ಸಮೀಪದ ಕೂರಗುಂದ ಗ್ರಾಮದ ವಾರ್ಡ್ ನಂ. 2ರಲ್ಲಿ ಮಂಜಪ್ಪ ಬಸವರಾಜ ಬಣಕಾರ ಕಳೆದ ಬಾರಿಯ ಚುನಾವಣೆಯಲ್ಲಿ

    ಸೋತಿದ್ದರು. ಈ ಬಾರಿ ಆ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಪತ್ನಿ ನಿಂಗವ್ವ ಬಣಕಾರ ಸ್ಪರ್ಧೆಗಿಳಿದಿದ್ದಾರೆ. ಗ್ರಾಮದ 1ನೇ ವಾರ್ಡ್​ನಲ್ಲಿನ ಸಾಮಾನ್ಯ ಕ್ಷೇತ್ರದಿಂದ ಮಂಜಪ್ಪ ಬಣಕಾರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಗ್ರಾಮದ ಮತ್ತೊಂದು ವಿಶೇಷವೆಂದರೆ ಸಂಬಂಧಿಕರೆ ಚುನಾವಣೆ ಎದುರಾಳಿಗಳಾಗಿರುವುದೇ ಹೆಚ್ಚು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts