More

    ವೈರಲ್ ಆಯ್ತು ರಾಜಸ್ಥಾನದಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತರ ಸಂಭ್ರಮಾಚರಣೆಯ ಅತ್ಯದ್ಭುತ ನೃತ್ಯ

    ರಾಜಸ್ಥಾನ: ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ರಾಜ್ಯಗಳ ಜೊತೆಗೆ ರಾಜಸ್ಥಾನದ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳುತ್ತಿದೆ. ಹಲವು ಸುತ್ತುಗಳ ಎಣಿಕೆ ಕೂಡ ಪೂರ್ಣಗೊಂಡಿದೆ. ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಈವರೆಗಿನ ಫಲಿತಾಂಶ ನೋಡಿದರೆ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಇನ್ನು ಕೆಲವೇ ಸುತ್ತುಗಳಲ್ಲಿ ಮತ ಎಣಿಕೆ ಮುಗಿದ ಬಳಿಕ ವಾತಾವರಣ ತಿಳಿಯಾಗಲಿದೆ. ಆದರೆ, ಬಿಜೆಪಿ ಕಚೇರಿಯ ಹೊರಗೆ ಸಂಭ್ರಮದ ವಾತಾವರಣ ಕಂಡು ಬರುತ್ತಿದೆ. ರಾಜಸ್ಥಾನದ ಬಿಜೆಪಿ ಮಹಿಳಾ ಕಾರ್ಯಕರ್ತರು ಅದ್ಧೂರಿಯಾಗಿ ಸಂಭ್ರಮ ಆಚರಿಸುತ್ತಿದ್ದಾರೆ.

    ಮಹಿಳಾ ಕಾರ್ಯಕರ್ತರಲ್ಲಿ ಉತ್ಸಾಹ
    ಬಿಜೆಪಿ ಮಹಿಳಾ ಕಾರ್ಯಕರ್ತರು ಜೈಪುರದ ಪಕ್ಷದ ಕಚೇರಿಯ ಮುಂದೆ ಸಂಭ್ರಮಿಸಿದರು. ಮಹಿಳಾ ಕಾರ್ಯಕರ್ತರ ಡೋಲುಗಳ ಬಡಿತಕ್ಕೆ ಜೋರಾಗಿ ನೃತ್ಯ ಮಾಡುತ್ತಿರುವುದು ಕಂಡುಬಂದಿತು. ರಾಜ್ಯದಲ್ಲಿ ಬಿಜೆಪಿ ಮುನ್ನಡೆಯಲ್ಲಿ ಮುಂದುವರಿದಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ ಬಿಜೆಪಿ 115 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 67 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯ ಮುನ್ನಡೆ ಸ್ಪಷ್ಟವಾಗಿ ಗೋಚರಿಸುತ್ತಿದೆ.  

    ರಾಜಸ್ಥಾನದ 199 ವಿಧಾನಸಭಾ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಝಲ್ರಾಪಟನ್‌ನಿಂದ ಮುನ್ನಡೆಯಲ್ಲಿದ್ದರೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ದಾರ್‌ಪುರ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ವಸುಂಧರಾ ರಾಜೆ ಅವರು 2003 ರಿಂದ ಪ್ರತಿನಿಧಿಸುತ್ತಿರುವ ಕ್ಷೇತ್ರವಾದ ರಾಜಸ್ಥಾನದ ಝಲಾವರ್‌ನ ಝಲ್ರಾಪಟನ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಸಚಿನ್ ಪೈಲಟ್ ಅವರು ನಾಲ್ಕು ಸುತ್ತುಗಳ ಎಣಿಕೆಯವರೆಗೂ ಮುನ್ನಡೆ ಸಾಧಿಸಿದ್ದಾರೆ.

    ಬಹಿರಂಗವಾಗಲಿದೆ ನಾಲ್ಕು ರಾಜ್ಯಗಳ ನಿರ್ಧಾರ
    ದೇಶದ ನಾಲ್ಕು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭಾನುವಾರ ಅಂದರೆ ಇಂದು ಆರಂಭವಾಗಿದೆ. ಲೋಕಸಭೆ ಚುನಾವಣೆಗೆ ಆರು ತಿಂಗಳಿಗಿಂತ ಕಡಿಮೆ ಸಮಯ ಇರುವುದರಿಂದ ಈ ರಾಜ್ಯಗಳ ವಿಧಾನಸಭೆ ಚುನಾವಣೆ ಸೆಮಿಫೈನಲ್ ಪೈಪೋಟಿ ಎಂದೇ ಬಿಂಬಿತವಾಗುತ್ತಿದೆ. 

    ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಮಧ್ಯಪ್ರದೇಶದ 230, ಛತ್ತೀಸ್‌ಗಢದ 90, ತೆಲಂಗಾಣದ 119 ಮತ್ತು ರಾಜಸ್ಥಾನದ 199 ಸ್ಥಾನಗಳಿಗೆ ಬಿಗಿ ಭದ್ರತೆಯ ನಡುವೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಅಭ್ಯರ್ಥಿಯೊಬ್ಬರ ಸಾವಿನಿಂದಾಗಿ ರಾಜಸ್ಥಾನದ ಒಂದು ವಿಧಾನಸಭಾ ಸ್ಥಾನಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ. ಮತ ಎಣಿಕೆಗೆ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಮಾನ್ಯ ಪಾಸ್ ಹೊಂದಿರುವವರಿಗೆ ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ನೀಡಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

    ‘ಸನಾತನದ ವಿರೋಧ ದೇಶಕ್ಕೆ ಸ್ವೀಕಾರಾರ್ಹವಲ್ಲ’: ಕಾಂಗ್ರೆಸ್ ಸೋಲಿಗೆ ಈ ಎರಡು ಕಾರಣ ನೀಡಿದ ಆಚಾರ್ಯ ಪ್ರಮೋದ್ ಕೃಷ್ಣಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts