More

    ಪುತ್ರನಿಗಾಗಿ ಸಚಿವ ಆನಂದ ಸಿಂಗ್ ಕ್ಷೇತ್ರ ತ್ಯಾಗ

    • ವಿಜಯನಗರಕ್ಕೆ ಸಿದ್ಧಾರ್ಥ ಸಿಂಗ್, ಹಡಗಲಿಗೆ ಕೃಷ್ಣಾ ನಾಯ್ಕ
    • ಕೂಡ್ಲಿಗಿಗೆ ಲೋಕೇಶ ನಾಯಕ ಬಿಜೆಪಿ ಅಭ್ಯರ್ಥಿಗಳು

    ಹೊಸಪೇಟೆ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪೈಕಿ ಇಬ್ಬರು ವಲಸಿಗರು ಮತ್ತು ಒಬ್ಬರು ಹೊಸಬರಿಗೆ ಅವಕಾಶ ನೀಡಿದೆ.
    ವಿಜಯನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್, ಹೂವಿನಹಡಗಿಲಿ(ಎಸ್‌ಸಿ)ಯಲ್ಲಿ ಕೃಷ್ಣ ನಾಯ್ಕ, ಕೂಡ್ಲಿಗಿ(ಎಸ್‌ಟಿ) ಕ್ಷೇತ್ರದಲ್ಲಿ ಲೋಕೇಶ ನಾಯಕ ಅವರನ್ನು ಕಣಕ್ಕಿಳಿಸಿದೆ.
    ಸಚಿವ ಆನಂದ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ಬಿಜೆಪಿ ಉಪಾಧ್ಯಕ್ಷರಾಗಿದ್ದು, ಜತೆಗೆ ಸಮಾಜ ಸೇವೆ ಮೂಲಕ ಕ್ಷೇತ್ರದಲ್ಲಿ ಮನೆ ಮಾತಾಗಿದ್ದಾರೆ.
    ಮಗನಿಗೆ ರಾಜಕೀಯ ಭವಿಷ್ಯ ರೂಪಿಸಲು ಸಚಿವ ಆನಂದ ಸಿಂಗ್ ಚುನವಣಾ ಕಣದಿಂದ ಹಿಂದೆ ಸರಿದಿದ್ದು, ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ.


    ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಲೋಕೇಶ್ ನಾಯ್ಕ, ೨೦೧೮ರಲ್ಲಿ ಟಿಕೇಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ೨೯೫೧೪ ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದ ಅವರು, ಈ ಬಾರಿ ಟಿಕೇಟ್ ದೊರೆಯುವ ವಿಶ್ವಾಸದಲ್ಲಿದ್ದರು. ಆದರೆ, ಇತ್ತೀಚೆಗೆ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಮಗ ಡಾ.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಮುನಿಸಿಗೊಂಡಿದ್ದ ಲೋಕೇಶ್ ನಾಯಕ, ಕೈಬಿಟ್ಟು ಕಮಲ ಹಿಡಿದಿದ್ದರು.

    ಹೂವಿನಹಡಗಲಿಯಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಇತ್ತೀಚೆಗೆ ಬಿಜೆಪಿ ಸೇರಿದ್ದ ಕೃಷ್ಣಾ ನಾಯ್ಕ, ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
    ಆದರೆ, ಉಭಯ ಕ್ಷೇತ್ರಗಳಲ್ಲಿ ಬಿಜೆಪಿಯ ಮಾಜಿ ಶಾಸಕರು, ಮತ್ತಿತರರು ಸ್ಪರ್ಧಾಕಾಂಕ್ಷಿಗಳಾಗಿದ್ದರೂ, ಹೊರಗಿನವರಿಗೆ ವರಿಷ್ಟರು ಮಣೆ ಹಾಕಿದ್ದಾರೆ. ಅಲ್ಲದೇ, ಸ್ಪರ್ಧಾಕಾಂಕ್ಷಿಗಳ ಮಧ್ಯೆ ಭಾರೀ ಪೈಪೋಟಿ ಇರುವ ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸದಿರುವುದು ಕುತೂಹಲ ಕೆರಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts