More

    ಬಿಜೆಪಿ ಸೇರ್ಪಡೆ ಪರ್ವ ಆರಂಭ: ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್

    ಶಿವಮೊಗ್ಗ: ಬಿಜೆಪಿಯಲ್ಲಿ ಸೇರ್ಪಡೆ ಪರ್ವ ಆರಂಭವಾಗಿದೆ. ನಮ್ಮ ಸಿದ್ಧಾಂತ, ಅಭಿವೃದ್ಧಿಪರ ಚಿಂತನೆ ಬೆಂಬಲಿಸಿ ಪಕ್ಷ ಸೇರ್ಪಡೆಯಾಗುವ ಅನ್ಯ ಪಕ್ಷಗಳ ಸಜ್ಜನರನ್ನು ಸೇರಿಸಿಕೊಳ್ಳಲು ನಾವು ಹಿಂದೇಟು ಹಾಕುವುದಿಲ್ಲ. ಈಗ ಪಕ್ಷಕ್ಕೆ ಬಂದಿರುವ ರಾಜು ಎಂ.ತಲ್ಲೂರು ಕೇವಲ ಸೊರಬಕ್ಕೆ ಸೀಮಿತವಲ್ಲ. ಅವರು ರಾಜ್ಯ ಮುಖಂಡರು ಎಂದು ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
    ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ರಾಜು ಎಂ.ತಲ್ಲೂರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜು ಎಂ.ತಲ್ಲೂರು ಮಡಿವಾಳ ಸಮುದಾಯದ ಪ್ರಬಲ ನಾಯಕ ಮಾತ್ರವಲ್ಲ ಹಿಂದುಳಿದ ವರ್ಗಗಳ ನಾಯಕ. ಎಲ್ಲ ಸಮುದಾಯದವರೂ ಅವರೊಟ್ಟಿಗಿದ್ದಾರೆ ಎಂದು ತಿಳಿಸಿದರು.
    ಜನರು ಪರಿವರ್ತನೆ ಬಯಸಿದ್ದಾರೆ. ಕರೊನಾ ನಿರ್ವಹಣೆ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಮನ್ನಣೆ ಸಿಕ್ಕಿದೆ. ಹೀಗಾಗಿ ಅನೇಕರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ರಾಜು ಎಂ.ತಲ್ಲೂರು ಪಕ್ಷ ಸೇರ್ಪಡೆಯಿಂದ ನಮ್ಮ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ ಎಂದರು.
    ರಾಜು ಅವರೊಂದಿಗೆ ಅವರ ಅನೇಕ ಬೆಂಬಲಿಗರು ಬಿಜೆಪಿಗೆ ಬಂದಿದ್ದಾರೆ. ಅವರ ಪೈಕಿ ಅನೇಕರು ಮುಂಚೆ ನಮ್ಮ ಜೊತೆಗಿದ್ದವರು. ಕಾಂಗ್ರೆಸ್‌ನಿಂದಲೂ ಅನೇಕರು ಬಂದಿದ್ದಾರೆ. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟಿಸಬೇಕಿದೆ. ರಾಜು ತಲ್ಲೂರು ರಾಜ್ಯಾಧ್ಯಂತ ಪ್ರವಾಸ ಮಾಡಿ ಪಕ್ಷಕ್ಕೆ ಬಲ ತುಂಬಬೇಕು ಎಂದು ಹೇಳಿದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮಾಲತೇಶ್, ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts