More

    ರಾಹುಲ್​ ಗಾಂಧಿ ಉತ್ತರ ಕೊಡಿ: ರಾಜು ಕುರಡಗಿ

    ವಿಜಯವಾಣಿ ಸುದ್ದಿಜಾಲ ಗದಗ
    ರಾಜ್ಯದಲ್ಲಿ ಸುಳ್ಳು ಗ್ಯಾರಂಟಿಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಪದ ಆಡಳಿತ ಸಂರ್ಪೂಣ ಕುಸಿದಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ವಿನಿಯೋಗಿಸಲಾಗಿದೆಯೇ ಎಂಬುದರ ಬಗ್ಗೆ ಉತ್ತರ ಕೊಡಿ ಎಂದು ಜಿಲ್ಲಾ ಬಿಜೆಪಿ ಅಧ್ಯ ರಾಜು ಕುರಡಗಿ ರಾಹುಲ್​ ಗಾಂಧಿಯನ್ನು ಪ್ರಶ್ನಿಸಿದರು.
    ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೇಸ್​ ರಚನೆಯಾಗಿ 11 ತಿಂಗಳು ಕಳೆದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿಲ್ಲ. ಆಥಿರ್ಕವಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಇದಕ್ಕೆ ಉತ್ತರ ಕೊಡಿ. ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ನಿವೇಕೆ ಸುಮ್ಮನಾಗಿದ್ದೀರಿ? ಎಂದು ಪ್ರಶ್ನಿಸಿದರು.
    ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ಕಾಳಜಿ ಕಾಂಗ್ರೆಸ್​ ಸರ್ಕಾರಕ್ಕೆ ಇಲ್ಲ. ಈ ಬಗ್ಗೆ ಕಾಂಗ್ರೆಸ್​ ಸರ್ಕಾರಕ್ಕೆ ತರಾಟೆ ತೆಗೆದುಕೊಳ್ಳುತ್ತೀರಾ?, ರಾಜ್ಯದ ರೈತರಿಗೆ ದ್ರೋಹ ಬಗೆದು ತಮಿಳನಾಡಿಗೆ ನೀರು ಬಿಟ್ಟಿದ್ದನ್ನು ಖಂಡಿಸುತ್ತೀರಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಇದಕ್ಕೆ ಹೊಣೆ ಹೊರುತ್ತಿರಾ? ಎಂದು ಎಂ.ಎಂ ಹಿರೇಮಠ ಪ್ರಶ್ನಿಸಿದರು.
    ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ ಮಹಿಳೆಯರ ರಣೆಗೆ ಯಾರು ಹೊಣೆ?, ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್​ ಕೂಗಿದ್ದನ್ನು ಕಾಂಗ್ರೆಸ್​ ಖಂಡಿಸಲಿಲ್ಲ, ಗುತ್ತಿಗೆದಾರ ಕೆಂಪಣ್ಣ ಸರ್ಕಾರದ ಮೇಲೆ ಶೇ.60 ರಷ್ಟು ಕಮಿಷನ್​ ಆರೋಪ ಮಾಡುತ್ತಿದ್ದಾರೆ. ತಪ್ಪಿತಸ್ಥ ಸಚಿವರ ಮೇಲೆ ಕ್ರಮ ಜರುಗಿಸುತ್ತಿಲ್ಲ. ಬರ ಪರಿಹಾರಕ್ಕೆ ರಾಜ್ಯದಿಂದ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ಸೂಚಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ರಾಹುಲ್​ ಗಾಂಧಿ ಅವರನ್ನು ಪ್ರಶ್ನಿಸಿದರು.
    ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ, ವಿದ್ಧತ್​ ದರ ಹೆಚ್ಚಳ, ಸ್ಟಾ$ಂಪ್​ ಡ್ಯೂಟಿ ದರ ಹೆಚ್ಚಳ ಮಾಡಿ ಸಾಮಾನ್ಯ ವರ್ಗದ ಬದುಕನ್ನು ಕಾಂಗ್ರೆಸ್​ ದುಬಾರಿ ಮಾಡಿದೆ ಎಂದು ಸಭೆಯಲ್ಲಿ ಆರೋಪಿಸಲಾಯಿತು.
    ಪಕ್ಕಿರೇಶ ರಟ್ಟಿಹಳ್ಳಿ, ರಾವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ರಾಜು ಹೊಂಗಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts