ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದೇ ಕೈ ನಾಯಕರ ಸಂಸ್ಕೃತಿ

1 Min Read
ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದೇ ಕೈ ನಾಯಕರ ಸಂಸ್ಕೃತಿ

ಮಂಗಳೂರು: ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದು ಇದೇ ಮೊದಲಲ್ಲ. ಅವರ ವ್ಯಕ್ತಿತ್ವದಲ್ಲೇ ಅದು ಇದೆ. ಇತಿಹಾಸ ನೋಡಿದರೆ ಅದು ರೌಡಿಗಳ ಪಕ್ಷ ಎಂದು ತಿಳಿಯುತ್ತದೆ. ಎಲ್ಲ ಕೆಟ್ಟ ಚಾಳಿಗಳಿಗೂ ಆ ಪಕ್ಷವೇ ಪ್ರೇರಣೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.

ಈ ಹಿಂದೆ ತೊಡೆತಟ್ಟಿ ಯುದ್ಧಕ್ಕೆ ತೆರಳಿದಂತೆ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸಿದ್ದರು. ದೇವಸ್ಥಾನದ ಪಾವಿತ್ರೃತೆ ಹೊಂದಿರುವ ವಿಧಾನಸಭೆಗೆ ಅವರು ಅವಮಾನ ಮಾಡಿದವರು. ಅಂಥವರು ಕಾರ್ಯಕರ್ತರಿಗೆ ಗೌರವ ತೋರಿಸಲು ಹೇಗೆ ಸಾಧ್ಯ ಎಂದು ನಳಿನ್ ಮಂಗಳೂರಿನಲ್ಲಿ ಪ್ರಶ್ನಿಸಿದರು.

ರಾಜಕೀಯ ಕ್ಷೇತ್ರದಲ್ಲಿ ಇರುವವರನ್ನು ಜನರು ಗಮನಿಸುತ್ತಿರುತ್ತಾರೆ. ಸಹಜವಾಗಿ ಕಾರ್ಯಕರ್ತರು, ಸಾರ್ವಜನಿಕರು ಮನವಿ, ಬೇಡಿಕೆ ಈಡೇರಿಸಲು ನಮ್ಮ ಬಳಿ ಬರುತ್ತಾರೆ. ಅವರೊಂದಿಗೆ ಗೌರವಯುತವಾಗಿ ನಡೆಸಿಕೊಳ್ಳುವುದು ಸಂಸ್ಕೃತಿ. ಹಾಗಾಗಿ ರಾಜಕೀಯ ಪಕ್ಷಗಳ ಮುಖಂಡರು ಮಿತಿ ಮೀರಿ ವರ್ತನೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

See also  ಬಹುಮತವಿದ್ದರೂ ಅಧಿಕಾರವಿಲ್ಲ!, ಕುತೂಹಲಕ್ಕೆ ಕಾರಣವಾಗಿರುವ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ
Share This Article