More

    ಕಾಂಗ್ರೆಸ್ ನಡೆ ಖಂಡಿಸಿ ಫೆ.27-28ಕ್ಕೆ ಹೋರಾಟ: ಸಂಸದ ಸಂಗಣ್ಣ ಕರಡಿ ಹೇಳಿಕೆ

    ಕೊಪ್ಪಳ: ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿರುವ ಕಾಂಗ್ರೆಸ್ ವಿರುದ್ಧ ಫೆ.27 ಮತ್ತು 28ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದು, ಜಿಲ್ಲೆಯಲ್ಲೂ ನಡೆಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದ ನಡೆ ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಹಾದಿ ತಪ್ಪುತ್ತಿದೆ. ಅನಗತ್ಯ ಗೊಂದಲ ಸೃಷ್ಟಿಸಿ ಸದನ ನಡೆಯದಂತೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.ಹಿಜಾಬ್ ವಿಚಾರದಲ್ಲೂ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತ ಹರ್ಷ ಹತ್ಯೆಯಾಗಿದ್ದು, ಈ ಬಗ್ಗೆ ಕಿಂಚಿತ್ತು ಮಾತನಾಡುವ ವ್ಯವಧಾನ ತೋರುತ್ತಿಲ್ಲ. ಬದಲಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿ ಕೋಮು ಗಲಭೆ ಉಂಟು ಮಾಡುತ್ತಿದ್ದಾರೆಂದು ಕಟುವಾಗಿ ಟೀಕಿಸಿದರು.

    ದೇಶದಲ್ಲಿ ಕಾಶ್ಮೀರ ಹಾಗೂ ಉಳಿದ ಭಾಗಗಳಿಗೆ ಪ್ರತ್ಯೇಕ ಕಾನೂನು ಮಾಡಿದ್ದು ಕಾಂಗ್ರೆಸ್. ಕಾಶ್ಮೀರದ ಲಾಲ್‌ಚೌಕ್ ಹಾಗೂ ಹುಬ್ಬಳ್ಳಿ ಈದ್ಗಾ ಮೈದಾನದ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದು ಬಿಜೆಪಿಯವರು. ಆದರೆ, ರಾಷ್ಟ್ರಧ್ವಜ ಹಾರಿಸದಂತೆ ಗೋಲಿಬಾರ್ ಮಾಡಿಸಿದ ಕೈ ನಾಯಕರು ಇಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನಡುವಿನ ವೈಮನಸ್ಸಿನಿಂದಾಗಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಅವರ ನಡೆ ಖಂಡಿಸಿ ಫೆ.27, 28ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದೇವೆ. ಜಿಲ್ಲೆಯಲ್ಲೂ ಮುಖಂಡರ ಸಭೆ ನಡೆಸಿ, ಹೋರಾಟ ರೂಪಿಸಲಾಗುವುದು ಎಂದರು. ಜಿಲ್ಲಾ ವಕ್ತಾರ ಸತ್ಯನಾರಾಯಣ ಕುಲಕರ್ಣಿ, ಮಾಧ್ಯಮ ಸಂಚಾಲಕ ಗಿರೀಶಾನಂದ ಜ್ಞಾನಸುಂದರ್, ಸಹ ಸಂಚಾಲಕ ಶ್ರೀನಿವಾಸ ಪೂಜಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts