More

    ಶೀಘ್ರದಲ್ಲೇ ಮಂಡ್ಯಕ್ಕೆ ಮೋದಿ ಆಗಮನ: ಕ್ರೀಡಾ ಸಚಿವ ಕೆಸಿಎನ್ ಮಾಹಿತಿ

    ಮಂಡ್ಯ: ಶೀಘ್ರದಲ್ಲೇ ಮಂಡ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವ ಕಾರ್ಯಕ್ರಮ ಇದೆ. ಯುವಸಮೂಹ ಒಂದು ದೊಡ್ಡ ಶಕ್ತಿ. ರಾಜ್ಯದಲ್ಲಿ ಮೊದಲ ಬಾರಿಗೆ ಮಂಡ್ಯದಲ್ಲಿ ಯುವ ಮೋರ್ಚಾ ಸಮಾವೇಶ ನಡೆದಿರುವುದು ನಮಗೆಲ್ಲ ತುಂಬ ಖುಷಿ ತಂದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಅವರನ್ನು ಮಂಡ್ಯ ಜಿಲ್ಲೆಗೆ ಎಂದು ನೇಮಕ ಮಾಡಿಲ್ಲ. ಆದರೆ ಅವರ ಅವಶ್ಯಕತೆ ಜಿಲ್ಲೆಗೆ ಹೆಚ್ಚು ಇದೆ. ಅವರೇ ಉಸ್ತುವಾರಿ ವಹಿಸಿಕೊಂಡರೆ ಒಳ್ಳೆಯದು. ಜಿಲ್ಲೆಗೆ ಅವರನ್ನ ಪಕ್ಷ ಸೀಮಿತ ಮಾಡಿಲ್ಲ. ಏಳು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಮಂಡ್ಯದಲ್ಲಿ ಬಿಜೆಪಿ ಅಸ್ತಿತ್ವ ಇರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೀಗ ಮಂಡ್ಯದಲ್ಲಿ ಭದ್ರಕೋಟೆ ಒಡೆದಿದೆ, ಏಳು ಕ್ಷೇತ್ರದಲ್ಲಿ ಒಳ್ಳೆಯ ಅಭ್ಯರ್ಥಿ ಸಿಕ್ಕಿದ್ದಾರೆ. ಅಂತೆಯೇ ಹೆಚ್ಚಿನ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಡಿಕೆಶಿ ಸಿಎಂ ಆಸೆ ಆಗುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ರಾಜಕಾರಣ ಮಾಡಲೇ ಬೇಕು. ನಮ್ಮ ಸರ್ಕಾರ ಇದೆ. ಸಿಎಂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಇದ್ದಾರೆ, ಅಮಿತ್ ಷಾ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರು ಬರುವುದು ಚುನಾವಣೆಗೆ ಅನುಕೂಲವಾಗಲಿದೆ. ಮಂಡ್ಯ ಉಸ್ತುವಾರಿ ಈಗಲೂ ಸಚಿವ ಆರ್.ಅಶೋಕ್ ಇದ್ದಾರೆ. ಬೇರೆ ಯಾರನ್ನು ನೇಮಕ ಮಾಡಿಲ್ಲ. ಅವರೇ ಬಂದು ಮುಂದುವರಿಯಬೇಕು. ಅವರು ಭದ್ರಕೋಟೆಯಲ್ಲಿ ಇದ್ದಾರೆ. ಭಯದ ವಾತಾವರಣ ಇಲ್ಲ. ಅಶೋಕ್ ಬಂದು ಮಂಡ್ಯಕ್ಕೆ ಒಂದು ಶಕ್ತಿ ತುಂಬಬೇಕು ಎಂದು ಆಹ್ವಾನ ನೀಡಿದರು.
    ಕೆ.ಆರ್.ಪೇಟೆ ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆ ಇದೆ. ಅದರಿಂದ ನಾನು ಆ ಪಕ್ಷ ಸೇರುತ್ತೇನೆಂದು ಮಾತನಾಡುತ್ತಿದ್ದಾರೆ. ಆದರೆ ನಾವು ಯಾವುದೇ ರೀತಿಯ ಚಿಂತನೆ ಮಾಡಿಲ್ಲ. ಬಿಜೆಪಿ ವೀಕ್ ಆಗಲಿ ಎಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಮೂರು ಬಾರಿ ಸೋತಿದೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ರೇವಣ್ಣ ಬಂದರೆ ಎಂದು ಹೇಳಿದ್ದೆ. ಹೆಸರು ಹೇಳಬಾರದಿತ್ತು ನಾನು. ಯಾರು ಬೇಕಾದರೂ ನಿಲ್ಲಬಹುದು. ಅವರ ಪಕ್ಷ, ನನಗೂ ಅದಕ್ಕೂ ಸಂಬಂಧ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts