More

    ಬೆಲೆಯೇರಿಕೆಗೆ ಕಾಂಗ್ರೆಸ್‌ ನೇರ ಹೊಣೆ-ಬಿಜೆಪಿ ಆರೋಪ

    ಕಾರವಾರ: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ, ಬೆಲೆಯೇರಿಕೆಯ ವಿರುದ್ಧ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

    ನಗರದ ನೇತಾಜಿ ಸುಭಾಷ್ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಲೆ ಏರಿಕೆ, ಸಕಾರದ ವಿವಿಧ ನೀತಿಗಳ ವಿರುದ್ಫಧ ಲಕಗಳನ್ನು ಪ್ರದಶಿಸಿದರು.
    ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹಾಗೂ ಚಂದ್ರು ಎಸಳೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೋ ಹತ್ಯೆ ನಿಷೇಧ, ಮತಾಂತರ ನಿಷೇಧದಂಥ ಕಾಯ್ದೆಗಳನ್ನು ರದ್ದು ಮಾಡಲಾಗಿದೆ. ಅದನ್ನು ಖಂಡಿಸಿದ ಬಿಜೆಪಿ ಶಾಸಕರನ್ನು ಸದನದಿಂದಲೇ ಅಮಾನತು ಮಾಡಿ, ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಉಗ್ರರು ಬೇರು ಬಿಡುತ್ತಿದ್ದಾರೆ. ರಾಜ್ಯದಲ್ಲಿ ಸೋಟಕ್ಕೆ ಯೋಜಿಸಿದ್ದ ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
    ಇನ್ನೊಬ್ಬ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಆ ಪಕ್ಷದ ಪೊಳ್ಳು ಭರವಸೆಗಳು ಬಯಲಾಗಿವೆ. ಬೆಲೆ ಏರಿಕೆಗೆ ನೇರವಾಗಿ ಕಾಂಗ್ರೆಸ್ ಕಾರಣವಾಗಿದೆ. ಒಂದೆಡೆ ಉಚಿತ ಭಾಗ್ಯ ಕೊಟ್ಟಂತೆ ಮಾಡಿ ಇನ್ನೊಂದೆಡೆ ಹಾನಿಯ ಬೆಲೆಯನ್ನು, ವಿದ್ಯುತ್ ದರವನ್ನು ಏರಿಸಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ದೂರಿದರು.

    ಇದನ್ನೂ ಓದಿ: ಕಾಂಗ್ರೆಸ್‌ನಿಂದ ನಕಲಿ ಗಾಂಧಿಗಳ ಜಪ: ಬೊಮ್ಮಾಯಿ ತಿರುಗೇಟು
    ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜೇಂದ್ರ ನಾಯ್ಕ ಮಾತನಾಡಿ, ದೇಶದ ಒಬ್ಬ ಸಮರ್ಥ ನಾಯಕನನ್ನು ಎದುರಿಸಲು 26 ವಿರೋಧ ಪಕ್ಷಗಳು ಒಂದಾಗಿ ಬೆಂಗಳೂರಿನಲ್ಲಿ ಸಭೆ ಮಾಡಿವೆ. 106 ಪಕ್ಷಗಳು ಒಟ್ಟಾದರೂ 2024 ರ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಅವರೇ ಗೆಲ್ಲಲಿದ್ದಾರೆ ಎಂದರು.

    ಎಂಎಲ್‌ಸಿ ಗಣಪತಿ ಉಳ್ವೇಕರ್, ಬಿಜೆಪಿ ಮಂಡಲ ಅಧ್ಯಕ್ಷರಾದ ನಾಗೇಶ ಕುರ್ಡೇಕರ್, ಸಂಜು ನಾಯ್ಕ, ಸುಭಾಷ ಗುನಗಿ ಹಾಗೂ ಇತರ ಎಲ್ಲ ಪದಾಧಿಕಾರಿಗಳು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts