More

    ಕುಣಿಗಲ್​ನಲ್ಲಿ ಚುನಾವಣಾ ಕಹಳೆ ಮೊಳಗಿಸಿದ ಬಿಜೆಪಿ: 4ನೇ ಕ್ರಾಂತಿ ಬರ್ತಿದೆ ಎಂದ ಸಿಎಂ! ಡಿಕೆ ಬ್ರದರ್​ ವಿರುದ್ಧ ಎಸ್ಪಿಎಂ ಆಕ್ರೋಶ

    ಕುಣಿಗಲ್​: ಕುಣಿಗಲ್​ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ನಡೆದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಚುನಾವಣಾ ಕಹಳೆ ಮೊಳಗಿಸಿದರು.

    ಕಳೆದ ಮೂರು ಬಾರಿಯೂ ಕುಣಿಗಲ್​ನಲ್ಲಿ ಜನತಾ ಪಕ್ಷದ ಕಮಲ ಅರಳಿಲ್ಲ. ಈ ಬಾರಿ ನಾಲ್ಕನೇ ಕ್ರಾಂತಿ ಬರ್ತಿದೆ. ಕುಣಿಗಲ್​ನಲ್ಲಿ ಬಿಜೆಪಿ ಗೆಲುವು ಪಕ್ಕಾ, ಮೂರು ಬಾರಿಗೆ ಸೋಲು ಮುಕ್ತಾಯವಾಗಲಿದೆ ಎಂದು ಸಿಎಂ ಹೇಳುತ್ತಿದ್ದಂತೆ, ಕೃಷ್ಣಕುಮಾರ್ ಪರ ಅಭಿಮಾನಿಗಳು ಘೋಷಣೆ ಕೂಗಿದರು. ಈ ಬಾರಿ ಕೃಷ್ಣಕುಮಾರ್​ಗೆ ಟಿಕೆಟ್ ಕೊಡಬೇಕು ಎಂದರು. ಘೋಷಣೆ ಕೂಗುತ್ತಿದ್ದವರಿಗೆ ಎಚ್ಚರಿಕೆ ಕೊಟ್ಟ ಸಚಿವ ಮಾಧುಸ್ವಾಮಿ, ನೀವು ಹೀಗೆ ಘೋಷಣೆ ಕೂಗಿದರೆ ನಾವು ಜಾಗ ಖಾಲಿ ಮಾಡ್ತೀವಿ’ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಿಎಂ, ಸುಮ್ಮನಿದ್ರೆ ನಿಮ್ಮ ಆರೋಗ್ಯಕ್ಕೂ ಒಳ್ಳೇದು, ಕೃಷ್ಣಕುಮಾರ್ ಆರೋಗ್ಯಕ್ಕೂ ಒಳ್ಳೇದು ಎಂದರು.

    ಕುಣಿಗಲ್​ನಲ್ಲಿ ಚುನಾವಣಾ ಕಹಳೆ ಮೊಳಗಿಸಿದ ಬಿಜೆಪಿ: 4ನೇ ಕ್ರಾಂತಿ ಬರ್ತಿದೆ ಎಂದ ಸಿಎಂ! ಡಿಕೆ ಬ್ರದರ್​ ವಿರುದ್ಧ ಎಸ್ಪಿಎಂ ಆಕ್ರೋಶ

    ತುಮಕೂರು ಜಿಲ್ಲೆಯಲ್ಲಿ ಈ ಭಾರಿ ಕುಣಿಗಲ್, ತುಮಕೂರು ಗ್ರಾಮಾಂತರ ಹಾಗೂ ಕೊರಟಗೆರೆಯಲ್ಲೂ ಗೆಲುವು ಪಡೆಯುತ್ತೇವೆ. ಕಾಂಗ್ರೆಸ್ ಆಟ ಬಯಲಾಗಿದೆ. ಜಾತಿ- ಮತಗಳಲ್ಲಿ ದ್ವೇಷ ತುಂಬಿ ಜಾತಿ- ಧರ್ಮದ ಆಧಾರದಲ್ಲಿ ಮತ ಕೇಳುವುದು, ಸಾಮಾಜಿಕ ನ್ಯಾಯ ಎಂದು ಭಾಷಣ ಮಾಡುವ ಆಟಗಳೆಲ್ಲ ಬಂದ್ ಆಗಲಿವೆ.‌
    ಮಾರ್ಕೋನಹಳ್ಳಿಯಿಂದ ಮಂಗಳ ಜಲಾಶಯಕ್ಕೆ ನೀರು ಹರಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಲಿದೆ. ಕುಣಿಗಲ್ ತಾಲೂಕಿಗೆ ನೀರು ಕೊಡಲು ಕೆಲವು ರಾಜಕಾರಣಿಗಳಿಗೆ ಇಷ್ಟವಿರಲಿಲ್ಲ, ವೈ.ಕೆ.ರಾಮಯ್ಯ ಅವರ ಹೋರಾಟದ ಫಲ ಈ ಭಾಗಕ್ಕೆ ರಾಮಕೃಷ್ಣ ಹೆಗಡೆ ನೀರು ನೀಡಿದರು. ಕುಣಿಗಲ್ ತಾಲೂಕಿನಲ್ಲಿ ಇನ್ನೂ 45 ಕಿ.ಮೀ. ನಾಲೆ ಮಾಡಬೇಕಿದ್ದು, ಎಸ್​.ಪಿ.ಮುದ್ದಹನುಮೇಗೌಡರು ಮನವಿ ಮಾಡಿದ್ದಾರೆ. ಈ ಎರಡೂ ಬೇಡಿಕೆಗಳನ್ನು ಈಡೇರಿಸಲಾಗುವುದು. ಕುಣಿಗಲ್ ಸ್ಟಡ್ ಫಾರಂ ರಕ್ಷಣೆ ನಮ್ಮ ಹೊಣೆ. ಜಿಲ್ಲೆಯ ಮಕ್ಕಳಿಗೆ ಅನುಕೂಲವಾಗುವಂತೆ ದೊಡ್ಡ ಸಂಸ್ಥೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲು ಈ ಭಾಗದಲ್ಲಿ ಪ್ರಮುಖ ಸಭೆ ನಡೆಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

    ಕುಣಿಗಲ್​ನಲ್ಲಿ ಚುನಾವಣಾ ಕಹಳೆ ಮೊಳಗಿಸಿದ ಬಿಜೆಪಿ: 4ನೇ ಕ್ರಾಂತಿ ಬರ್ತಿದೆ ಎಂದ ಸಿಎಂ! ಡಿಕೆ ಬ್ರದರ್​ ವಿರುದ್ಧ ಎಸ್ಪಿಎಂ ಆಕ್ರೋಶ

    ಭವಿಷ್ಯದಲ್ಲಿ ತುಮಕೂರು ನಂ.1 ಜಿಲ್ಲೆ ಆಗಲಿದೆ. ವಾಣಿಜ್ಯವಾಗಿಯೂ ಬೆಳೆಯಲಿದೆ, ತುಮಕೂರಿಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದರೂ ಆಶ್ಚರ್ಯ ಪಡಬೇಡಿ ಎಂದರು.

    ಮುದ್ದಹನುಮೇಗೌಡ ಮಾತನಾಡಿ, ಇಲ್ಲಿನ ಎಂಎಲ್​ಎಗೆ ಕುಣಿಗಲ್​ ತಾಲೂಕಿನ ಹಳ್ಳಿಗಳು ಗೊತ್ತಿಲ್ಲ. ನನ್ನನ್ನು ಉದ್ದೇಶಿಸಿ ಒಬ್ಬರು ಹೇಳ್ತಾರೆ, ‘ನಾನು ಇರೋವರೆಗೂ ರಂಗನಾಥ್ ಅವರೇ ಅಭ್ಯರ್ಥಿ. ಯಾರ್ಯಾರೋ ಬಂದು ಟಿಕೆಟ್ ಕೇಳ್ತಾರೆ, ನಾನೇಕೆ ಅವರಿಗೆ ಟಿಕೆಟ್ ಕೊಡ್ಲಿ? ರಂಗನಾಥ್ ಅವರೇ ಇರ್ತಾರೆ’ ಅಂತ. ನೆನಪಿರಲಿ ನಿಮ್ಮ ಅಧಿಕಾರದ ಅಮಲಿನಲ್ಲಿ ನನ್ನ ಬೆವರಿನ ವಾಸನೆ ಕೂಡ ಇದೆ ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್ ವಿರುದ್ಧ ಗುಡುಗಿದರು.

    ಕುಣಿಗಲ್​ನಲ್ಲಿ ಚುನಾವಣಾ ಕಹಳೆ ಮೊಳಗಿಸಿದ ಬಿಜೆಪಿ: 4ನೇ ಕ್ರಾಂತಿ ಬರ್ತಿದೆ ಎಂದ ಸಿಎಂ! ಡಿಕೆ ಬ್ರದರ್​ ವಿರುದ್ಧ ಎಸ್ಪಿಎಂ ಆಕ್ರೋಶ

    ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್​, ಕೆ.ಗೋಪಾಲಯ್ಯ, ಶಾಸಕ ಜ್ಯೋತಿ ಗಣೇಶ್, ಬಿಜೆಪಿ ಮುಖಂಡ ರಾಜೇಶ್ ಗೌಡ, ಸಿ.ಪಿ.ಯೋಗೇಶ್ವರ್​ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

    ದೆಹಲಿ ಪಾಲಿಕೆ ಚುನಾವಣೆ: ಎಎಪಿಗೆ ಭರ್ಜರಿ ಗೆಲುವು, 15 ವರ್ಷದ ಬಿಜೆಪಿ ಆಡಳಿತ ಅಂತ್ಯ

    ತುಮಕೂರಲ್ಲಿ ‘ನಾರಾಯಣ ದೇವಾಲಯ’ ಉದ್ಘಾಟನೆ: ಇದು ಕ್ಯಾಷ್​ ಕೌಂಟರ್​ ಇಲ್ಲದ ಮೊದಲ ಆಸ್ಪತ್ರೆ

    ಕಲಬುರಗಿಯಲ್ಲಿ ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್​ ರವಿ ಉಕ್ಕುಂದ, ಪತ್ನಿ ದುರ್ಮರಣ

    ದೆಹಲಿ ಪಾಲಿಕೆ ಚುನಾವಣೆ: ಎಎಪಿಗೆ ಭರ್ಜರಿ ಗೆಲುವು, 15 ವರ್ಷದ ಬಿಜೆಪಿ ಆಡಳಿತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts