More

    ಬಿಜೆಪಿ ಹೈಕಮಾಂಡ್ ನನ್ನ ಸೇವೆ ಗುರುತಿಸಲಿಲ್ಲ; ಜೆಡಿಎಸ್ ಮುಖಂಡ ಎಚ್.ಆರ್.ಚನ್ನಕೇಶವ

    ಗಂಗಾವತಿ: ಬಿಜೆಪಿ ಬಲಪಡಿಸಲು ಹಲವು ವರ್ಷಗಳಿಂದ ಕೆಲಸ ಮಾಡಿದರೂ ಪಕ್ಷದ ಹೈಕಮಾಂಡ್ ನನ್ನನ್ನು ಗುರುತಿಸಲಿಲ್ಲ, ಜನರ ಹಿತಕ್ಕಾಗಿ ಜೆಡಿಎಸ್ ಸೇರಿದ್ದೇನೆ ಎಂದು ಜೆಡಿಎಸ್ ಮುಖಂಡ ಎಚ್.ಆರ್.ಚನ್ನಕೇಶವ ಹೇಳಿದರು.


    ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಜನರ ನೋವು ನನಗೆ ಅರ್ಥವಾಗಿದ್ದು, ಅವರಿಗಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಮನೆಮನೆಗೆ ಭೇಟಿ ನೀಡಿದ್ದೇನೆ. ಬಿಜೆಪಿಯಲ್ಲಿ ದುಡಿಯುವರಿಗೆ ಬೆಲೆಯಿಲ್ಲ, ನನ್ನ ಸಂಘಟನೆ ಸಾಮರ್ಥ್ಯ ಗುರುತಿಸಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಹ್ವಾನಿಸಿದ್ದರಿಂದ ಪಕ್ಷ ಸೇರ್ಪಡೆಯಾಗಿದ್ದು, ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದ್ದು, ಕ್ಷೇತ್ರ ವ್ಯಾಪ್ತಿ ಸಂಚರಿಸುವೆ ಎಂದರು.


    ಕೆಆರ್‌ಡಿಎಲ್ ಮಾಜಿ ನಿರ್ದೇಶಕ ಹಾಗೂ ಜೆಡಿಎಸ್ ಮುಖಂಡ ಪಾಡಗುತ್ತಿ ಅಖ್ತರ್‌ಸಾಬ್ ಮಾತನಾಡಿ, ಪಕ್ಷ ನಿಷ್ಠೆಯಿಂದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. 2023ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಈಗ ಚನ್ನಕೇಶವರಿಗೆ ಸೂಚಿಸಿದ್ದಾರೆಂದು ಗೊತ್ತಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು ಎಂದರು.


    ಜೆಡಿಎಸ್ ಸೇರ್ಪಡೆಯಾದ ಎಚ್.ಆರ್. ಚನ್ನಕೇಶವ ಮತ್ತು ಕಂಪ್ಲಿ ವಿಧಾನಸಭೆ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ರಾಜುನಾಯಕರನ್ನು ಸನ್ಮಾನಿಸಲಾಯಿತು. ತಾಲೂಕಾಧ್ಯಕ್ಷ ಶೇಕ್ ನಬೀಸಾಬ್, ವಿವಿಧ ಘಟಕದ ಪದಾಧಿಕಾರಿಗಳಾದ ದುರ್ಗಾಪ್ರಸಾದ, ಮಹ್ಮದ್ ಯೂಸ್ೂ, ಚಂದ್ರಶೇಖರ್, ಖಾಜಾಪಾಷಾ, ಕೃಷ್ಣಪ್ಪ, ಅಮೀನಾಬೇಗಂ, ಭವಾನಿ, ಸುಮಾ, ಖಾಜಾಬನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts