More

    ಬಿಜೆಪಿ ಸರ್ಕಾರದಿಂದ ಉತ್ತಮ ಆಡಳಿತ

    ಯಲ್ಲಾಪುರ: ಮಂತ್ರಿ ಸ್ಥಾನ ಲಭಿಸಿರುವುದು ಸಂತಸದ ಜತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಜನರಿಗೆ ಒಳ್ಳೆಯ ಆಡಳಿತ ನೀಡಲು ನಿಶ್ಚಯಿಸಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸಲಾಗುವುದು ಎಂದು ನೂತನ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನತೆಯ ಆಶೀರ್ವಾದ, ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಆಶೀರ್ವಾದದಿಂದ ಸಚಿವ ಸ್ಥಾನ ದೊರೆತಿದೆ. ಇದರಿಂದ ಬಡವರ, ಸಂಕಷ್ಟದಲ್ಲಿರುವವರ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಜಿಲ್ಲೆಯಲ್ಲಿ ಪಕ್ಷದ ನೆಲೆಯನ್ನು ಇನ್ನಷ್ಟು ಭದ್ರಗೊಳಿಸುವುದು, ಆಡಳಿತ ವ್ಯವಸ್ಥೆಯಲ್ಲಿ ಚುರುಕು ಮೂಡಿಸುವುದು ಮತ್ತು ಜನರ ಕೆಲಸಗಳು ಕೂಡಲೆ ಆಗುವಂತೆ ನೋಡಿಕೊಳ್ಳುವುದು ನನ್ನ ಆದ್ಯತೆಯಾಗಲಿದೆ ಎಂದರು.

    ಇದೇ ಖಾತೆ ಬೇಕೆಂಬ ನಿರೀಕ್ಷೆ ಇಲ್ಲ. ಯಾವುದೇ ಖಾತೆಯನ್ನು ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಇದ್ದರು.

    ಭವ್ಯ ಸ್ವಾಗತ: ಸಚಿವರಾದ ನಂತರ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಶಿವರಾಮ ಹೆಬ್ಬಾರ ಅವರನ್ನು ಪಟ್ಟಣದ ವೆಂಕಟ್ರಮಣ ಮಠದ ಬಳಿ ಸಾರ್ವಜನಿಕರು, ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬರ ಮಾಡಿಕೊಂಡರು. ನಂತರ ಗಾಂಧಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಹೆಬ್ಬಾರ ಅವರು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಸ್ ನಿಲ್ದಾಣದ ಬಳಿಯ ಚೌಡೇಶ್ವರಿ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿದರು. ಪತ್ನಿ ವನಜಾಕ್ಷಿ ಹೆಬ್ಬಾರ ಇದ್ದರು.

    ಸಿದ್ದು ಮಟ್ಟಕ್ಕೆ ಇಳಿಯುವುದು ಸಂಸ್ಕಾರವಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ತೃಪ್ತಿಪಡಿಸುವ ಅನಿವಾರ್ಯತೆ ನಮಗಿಲ್ಲ. ರಾಜ್ಯದ ಜನತೆಗೆ ಸ್ಪಂದಿಸುವುದಷ್ಟೇ ನಮ್ಮ ಜವಾಬ್ದಾರಿ ಎಂದು ನೂತನ ಸಚಿವ ಶಿವರಾಮ ಹೆಬ್ಬಾರ ಪ್ರತಿಕ್ರಿಯಿಸಿದರು.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರಿಂದ ಗೌರವ ಸ್ವೀಕರಿಸಿದ ನಂತರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಇಂದು ಜನರ ಸಹಕಾರದಿಂದ ನಾವು ಅರ್ಹರಾಗಿದ್ದೇವೆ. ಆದರೆ ನಮ್ಮನ್ನು ಅನರ್ಹ ಮಾಡಲು ಮುಂದಾದವರು ಸ್ವತಃ ಅನರ್ಹರಾಗಿದ್ದಾರೆ. ಸಿದ್ದರಾಮಯ್ಯ ಅವರ ಭಾಷೆಗೆ ಅವರದ್ದೇ ಭಾಷೆಯ ಮೂಲಕ ಉತ್ತರಿಸುವ ಸಾಮರ್ಥ್ಯ ನಮಗಿದೆ. ಆದರೆ, ಅವರ ಮಟ್ಟಕ್ಕೆ ಇಳಿಯುವುದು ಸಂಸ್ಕಾರವಲ್ಲ. ಅವರಿಗೆ ಹೆದರುವ ಅಗತ್ಯವಿಲ್ಲ. ಅವರನ್ನು ಸಮಾಧಾನಪಡಿಸುವ ಅನಿವಾರ್ಯತೆಯೂ ಇಲ್ಲ ಎಂದರು. ಬನವಾಸಿ ಪ್ರತ್ಯೇಕ ತಾಲೂಕು ರಚನೆ ಸಂಬಂಧ ತಜ್ಞರೊಂದಿಗೆ ರ್ಚಚಿಸಿ ಕ್ರಮವಹಿಸಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts