More

    ಬಿಜೆಪಿ ಸರ್ಕಾರಗಳು ಜನರ ಗಮನ ಬೇರೆಡೆ ಸೆಳೆಯಲು ಪಿತೂರಿ -ಬಿ.ಕೆ.ಹರಿಪ್ರಸಾದ

    ಗೋಕಾಕ: ಸುಶಾಂತ್‌ಸಿಂಗ್ ರಜಪೂತ ಸಾವು ಪ್ರಕರಣ ಹಾಗೂ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿವೆ ಎಂದು ಕಾಂಗ್ರೆಸ್ ಎಂಎಲ್‌ಸಿ, ಮುಖಂಡ ಬಿ.ಕೆ.ಹರಿಪ್ರಸಾದ ಆರೋಪ ಮಾಡಿದ್ದಾರೆ.

    ಸಮೀಪದ ಘಟಪ್ರಭಾಕ್ಕೆ ಭಾನುವಾರ ಭೇಟಿ ನೀಡಿ, ಡಾ.ನಾ.ಸು.ಹರ್ಡೀಕರ ಸ್ಥಾಪಿಸಿದ ರಾಷ್ಟ್ರೀಯ ಸೇವಾದಳದ ನವೀಕರಣಗೊಂಡ ಕಟ್ಟಡ ಪರಿಶೀಲಿಸಿ ಮಾತನಾಡಿ, ಘಟಪ್ರಭಾದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾದಳ ಪುನಶ್ಚೇತನಗೊಂಡು ಕಾರ್ಯಕರ್ತರಿಗೆ ತರಬೇತಿ ಹಾಗೂ ಮಾರ್ಗದರ್ಶನ ದೊರೆಯಲಿದೆ. ಅ. 2ರಿಂದ ಕಾಂಗ್ರೆಸ್ ರಾಷ್ಟೀಯ ಸೇವಾದಳವು ನೂತನ ಕಟ್ಟದಲ್ಲಿ ಅಧಿಕೃತವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.

    ಕೋವಿಡ್-19 ವಿಚಾರದಲ್ಲಿ ಅವ್ಯವಹಾರವಾಗಿದೆ. ಇದನ್ನು ಮುಚ್ಚಿಹಾಕಲು ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ, ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಅಲ್ಪಸಂಖ್ಯಾತರು ಎನ್ನುತ್ತ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಪ್ರಸಾದ ಹರಿಹಾಯ್ದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಮಹಾನ್ ನಾಯಕರ ವಿಚಾರಧಾರೆ, ಸ್ವಾತಂತ್ರೃ ಹೋರಾಟಗಾರರ ತ್ಯಾಗ ಬಲಿದಾನಗಳ ಬಗ್ಗೆ ಕಾರ್ಯಾಗಾರ ನಡೆಸಲಾಗುವುದು. ಕಾರ್ಯಕರ್ತರಿಗೆ ಅಗತ್ಯ ಜಾಗೃತಿ ಮೂಡಿಸಿ ಮಾದರಿ ಕೇಂದ್ರವನ್ನಾಗಿ ಮಾಡಲಾಗುವುದು ಎಂದರು. ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಯಶ್ರೀ ಮಾಳಗಿ, ರಾಹುಲ, ಪ್ರಿಯಾಂಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts