More

    ಬಿಜೆಪಿ ಮೊದಲ ಪಟ್ಟಿ 8ರ ನಂತರ

    ಹುಬ್ಬಳ್ಳಿ : ಬಿಜೆಪಿ ಕೋರ್ ಕಮಿಟಿ ಸಭೆ ಮುಗಿದಿದೆ. ಏ. 8ರ ನಂತರ ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಪ್ರತ್ಯೇಕ ಸರ್ವೆ ನಡೆಸಲಾಗಿದೆ. ಸರ್ವೆ ವರದಿಯನ್ನು ಬುಧವಾರದಂದು ಪಕ್ಷದ ಹೈಕಮಾಂಡ್​ಗೆ ಕಳುಹಿಸಿದ್ದು, ವರದಿ ಆಧಾರದ ಮೇಲೆ ಟಿಕೆಟ್ ಹಂಚಿಕೆ ತೀರ್ವನಗೊಳ್ಳಲಿದೆ ಎಂದರು.

    ಹಾಲಿ ಕೆಲ ಶಾಸಕರ ಮೇಲೆ ವಿವಿಧ ಪ್ರಕರಣಗಳು ದಾಖಲಾಗಿವೆ. ಎಫ್​ಐಆರ್ ದಾಖಲಾದ ತಕ್ಷಣ ಯಾರೂ ಅಪರಾಧಿ ಆಗುವುದಿಲ್ಲ. ಹಾವೇರಿ ಶಾಸಕ ನೆಹರು ಒಲೇಕಾರ್​ಗೆ ಕೋರ್ಟ್​ನಲ್ಲಿ ರಿಲೀಫ್ ಸಿಕ್ಕಿದೆ. ಹಾಲಿ ಶಾಸಕರ ಮೇಲಿರುವ ಪ್ರಕರಣಗಳನ್ನು ಗಮನಿಸಿ, ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

    ನಾನು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಎರಡು ಪ್ರತ್ಯೇಕ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಊಹಾಪೋಹ ಎಂದರು.

    ಧಾರವಾಡ ಕ್ಷೇತ್ರದಲ್ಲಿ ವಿನಯ ಕುಲಕರ್ಣಿಗೆ ಟಿಕೆಟ್ ಅಂತಿಮಗೊಳಿಸಿರುವುದು ಕಾಂಗ್ರೆಸ್​ನ ನಿರ್ಧಾರ. ಆದರೆ, ಆ ಕ್ಷೇತ್ರದಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಕ್ಷೇತ್ರದ ಮತದಾರರು ತೀರ್ವನಿಸುತ್ತಾರೆ ಎಂದು ಹೇಳಿದರು.

    ಒಳ ಮೀಸಲಾತಿ ನೀಡಿರುವುದನ್ನು ಸಹಿಸಲು ಕಾಂಗ್ರೆಸ್​ನವರಿಗೆ ಆಗುತ್ತಿಲ್ಲ. ಈ ಹಿಂದೆ ಯಾರೂ ಮಾಡದ್ದನ್ನು ನಮ್ಮ ಸರ್ಕಾರ ಮಾಡಿದೆ ಎಂದ ಸಿಎಂ, ಹಿಂದುಳಿದ ಸಮಾಜಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ಕಾಂಗ್ರೆಸ್​ಗೆ ಮೊದಲಿನಿಂದಲೂ ಇಚ್ಛಾಶಕ್ತಿ ಇರಲಿಲ್ಲ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts