More

    ಬಿಜೆಪಿಯಿಂದ ಪ್ರಣಾಳಿಕೆ ಸಂಕಲ್ಪ ಪತ್ರದ ಮೂಲಕ ಜನಾಭಿಪ್ರಾಯ ಸಂಗ್ರಹ

    ವಿಜಯವಾಣಿ ಸುದ್ದಿಜಾಲ ಗದಗ
    BJP ಗದಗ ಜಿಲ್ಲಾ ವತಿಯಿಂದ ವಿಕಸಿತ ಭಾರತ ಲೋಕಸಭಾ ಚುನಾವಣೆ 2024 ನೇ ಪ್ರಣಾಳಿಕೆ ಸಂಕಲ್ಪ ಪತ್ರ ಜನ ಅಭಿಪ್ರಾಯ ಸಂಗ್ರಹವು ಶುಕ್ರವಾರ ನಗರದ ಪ್ರೊಬೊಸ್​ ಕ್ಲಬ್​ನಲ್ಲಿ ಸಂಗ್ರಹಿಸಲಾಯಿತು.
    ಈ ಸಂದರ್ಭದಲ್ಲಿ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಶಶಿಧರ ದಿಂಡೂರ ಮಾತನಾಡಿ, 2024 ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಗೆ ದೇಶದ ಪ್ರತಿಯೊಬ್ಬ ನಾಗರಿಕ ಅಭಿಪ್ರಾಯ ಸಂಗ್ರಹ ಕಾರ್ಯ ಸಂಕಲ್ಪ ಪತ್ರ ಅಭಿಯಾನದ ಮೂಲಕ ನಡೆಯುತ್ತಿದ್ದು, ತಮ್ಮ ಅಭಿಪ್ರಾಯಗಳನ್ನು ನಮೋ ಆ್ಯಪ್​ ಮೂಲಕ ಕಳುಹಿಸಬಹುದು. 10 ವರ್ಷಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನ ಔಷದ, ಆಯುಷ್ಮಾನ್​ ಭಾರತ, ಹರ್​ಗರ್​ ಸೌರ ವಿದ್ಯುತ್​ ಹೀಗೆ ಅನೇಕ ಯೋಜನೆಗಳನ್ನು ಕೊಟ್ಟು ಭಾರತವನ್ನು ಸುಭದ್ರ ವಹಿಸಿದ್ದಾರೆ ಎಂದರು.
    ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜಕ ರಮೇಶ ಸಜ್ಜಗಾರ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ಪ್ರಜೆಗಳಿಂದ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಲಹೆಗಳನ್ನು ಪಡೆಯುತ್ತಿದ್ದಾರೆ. ಈ ಹಿಂದೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತ ಬಂದಿದ್ದಾರೆ. ಮಹಿಳೆಯರಿಗೆ ಉಚಿತ ಗ್ಯಾಸ್​ ಸಂಪರ್ಕ, ದೇಶಾದ್ಯಂತ ರೈಲ್ವೆ ಮಾರ್ಗ, ಮೇಟ್ರೊ, ಒಂದೇ ಭಾರತ, ರೈಲ್ವೆ ನಿಲ್ದಾಣಗಳ ಉನ್ನತಿಕರ್ಣ, ದೇಶಾದ್ಯಂತ ಇಲೇಕ್ಟ್ರೀಕಲ್​ ರೈಲುಗಳ ಪರಿವರ್ತನೆ, ಆಟಿರ್ಕಲ್​ 370 ರದ್ದತಿ, ವಿಶ್ವದಲ್ಲಿ ಶಕ್ತಿಯು ಆಥಿರ್ಕ ದೇಶವಾಗಿ ಭಾರತ ಮುನ್ನಡೆಯುತ್ತಿದ್ದಾರೆ ಎಂದರು.
    ಈ ಸಂದರ್ಭದಲ್ಲಿ ಶಿವವ್ವ ಕುರುಡಗಿ, ಪ್ರೋಬೊಸ್​ ಕ್ಲಬ್​ ಅಧ್ಯ ತೊಟಗೇರ, ಅಶೋಕ ಕೊಡಗಲಿ, ಬಿ. ಬಿ. ಗೌಡ್ರ, ಬಿ. ಎಂ. ಬಿಳೆಯಲಿ, ಆರ್​. ಡಿ. ಕಪ್ಲಿ, ಸುರೇಕಾ ಪಿಳ್ಳಿ ಹಲವರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts