More

    ರೈತರ ಬಗ್ಗೆ ಬಿಜೆಪಿಗೆ ಕಳಕಳಿ ಇಲ್ಲ

    ಶಿರಸಿ: ರೈತ ವಿರೋಧಿ ಕಾನೂನುಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ನಗರದ ಪಕ್ಷದ ಕಚೇರಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾನಿರತರು ಬಸ್ ನಿಲ್ದಾಣ ಸರ್ಕಲ್​ನಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರ ಅನ್ನ ಕಸಿಯುವ ಕಾರ್ಯ ಆಗುತ್ತಿದೆ. ಇದನ್ನು ಕಾಂಗ್ರೆಸ್ ಸೇರಿ ಹಲವು ಸಂಘಟನೆಗಳು ವಿರೋಧಿಸುತ್ತಿವೆ ಎಂದರು.

    ಶಿರಸಿ ಬ್ಲಾಕ್ ಕಾಂಗ್ರೆಸ್ ಜಗದೀಶ ಗೌಡ, ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ, ಗಾಯತ್ರಿ ನೇತ್ರೇಕರ, ಬಸವರಾಜ ದೊಡ್ಮನಿ, ಅಬ್ಬಾಸ್ ತೋನ್ಸೆ, ದೀಪಕ ದೊಡ್ಡೂರ, ಎಸ್.ಕೆ. ಭಾಗ್ವತ್, ಸತೀಶ ನಾಯ್ಕ ಮಧುರವಳ್ಳಿ, ಯಶವಂತ ಮರಾಠೆ, ಶೈಲೇಶ ಜೋಗಳೇಕರ್, ರಾಜು ಉಗ್ರಾಣಕರ್, ಗೀತಾ ಶೆಟ್ಟಿ, ರುಬೇಕಾ ಫರ್ನಾಡೀಸ್, ಎಚ್.ಯು. ಪಠಾಣ್, ಗಣೇಶ ದಾವಣಗೆರೆ, ಖಾದರ ಆನವಟ್ಟಿ, ನಾಗರಾಜ ಮುರ್ಡೆಶ್ವರ, ಜಬಿಯುಲ್ಲಾ ಖಾನ್, ಶ್ರೀನಿವಾಸ ನಾಯ್ಕ, ಜಗದೀಶ ನಾಯ್ಕ, ಪ್ರಸನ್ನ ಶೆಟ್ಟಿ, ಮಹೇಶ ನಾಯ್ಕ, ರಾಮಣ್ಣ ಭೋವಿ, ಶ್ರೀಧರ ನಾಯ್ಕ, ಶಂಕರ ಗುಡ್ಡದಮನೆ ಇತರರು ಉಪಸ್ಥಿತರಿದ್ದರು.

    ಸಿದ್ದಾಪುರದಲ್ಲಿ ವಾಹನ ಸಂಚಾರ ತಡೆ

    ಸಿದ್ದಾಪುರ: ಭಾರತ್ ಬಂದ್ ಹಿನ್ನೆಲೆಯಲ್ಲಿ ಸಿದ್ದಾಪುರ ಪಟ್ಟಣದಲ್ಲಿ ತಾಲೂಕು ರೈತ ಸಂಘ, ಸಿಐಟಿಯು, ತಾಲೂಕು ಕಾಂಗ್ರೆಸ್ ಸಮಿತಿ, ಕನ್ನಡಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

    ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿ ನಂತರ ಬಸ್ ನಿಲ್ದಾಣದ ಎದುರು ವಾಹನಗಳನ್ನು ಸಂಚಾರ ತಡೆದು ನಂತರ ಮೆರವಣಿಗೆ ಮೂಲಕ ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.

    ಸಿಐಟಿಯುನ ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ರೈತ ಸಂಘದ ತಾಲೂಕಾಧ್ಯಕ್ಷ ವೀರಭದ್ರ ನಾಯ್ಕ, ತಾಪಂ ಸದಸ್ಯ ನಾಸೀರ್ ಖಾನ್, ಕನ್ನೇಶ ನಾಯ್ಕ ಕೋಲಸಿರ್ಸಿ, ತಿಮ್ಮಣ್ಣ ಬಿ. ನಾಯ್ಕ, ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ, ಸಿ.ಆರ್. ನಾಯ್ಕ, ಸುಧಾ ಕೊಂಡ್ಲಿ, ಲಲಿತಾ ಕಟ್ಟೆಮನೆ, ಸುಧಾ ನಾಯ್ಕ, ಡಿ.ಕೆ. ನಾಯ್ಕ, ಪ್ರಶಾಂತ ನಾಯ್ಕ, ಕೆರಿಯಪ್ಪ ನಾಯ್ಕ ಇತರರಿದ್ದರು.

    ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ

    ಮುಂಡಗೋಡ: ಕೃಷಿ ಕೂಲಿಕಾರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮತ್ತು ಕಾರ್ವಿುಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ನೀಡಿ ತಾಲೂಕು ಪ್ರಾಂತ ಕೃಷಿ ಕೂಲಿಕಾರರ ಸಂಘದವರು ಉಪ ತಹಸೀಲ್ದಾರ್ ವಿಜಯಕುಮಾರ ಶೆಟ್ಟೆಪ್ಪನವರ ಮೂಲಕ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಭೀಮಣ್ಣ ಭೋವಿ, ಹನುಮಂತಪ್ಪ ನ್ಯಾಸರ್ಗಿ, ರವಿ ಲಕ್ಕೊಳ್ಳಿ, ಬಸವರಾಜ ಧಾರವಾಡ, ಭೂತೇಶ ಚಿತ್ರಗಾರ, ವಾಣಿ ತೆವರ, ದಸ್ತಗೀರ ಮಳಗಿ, ಕೋಟೇಶ ಕೊಳಗಿ ಇತರರಿದ್ದರು. ಉಪ ತಹಸೀಲ್ದಾರ್ ವಿಜಯಕುಮಾರ ಶೆಟ್ಟೆಪ್ಪನವರ ಮನವಿ ಸ್ವೀಕರಿಸಿದರು.

    ಕೇಂದ್ರ ಸರ್ಕಾರದ ಕೃಷಿ ವಿಧೇಯಕ ವಿರೋಧಿಸಿ ರಸ್ತೆ ತಡೆ

    ಹಳಿಯಾಳ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಮೂಹವು ಕರೆ ನೀಡಿದ ಭಾರತ ಬಂದ್ ಬೆಂಬಲಿಸಿ ಹಳಿಯಾಳ ಪಟ್ಟಣದಲ್ಲೂ ಮಂಗಳವಾರ ವಿವಿಧ ಕಾರ್ವಿುಕ ಹಾಗೂ ರೈತ ಸಂಘಟನೆಗಳು ಮುಷ್ಕರ ನಡೆಸಿದವು.

    ಮಂಗಳವಾರ ಪಟ್ಟಣದ ಶಿವಾಜಿ ವೃತದಲ್ಲಿ ಎರಡು ರಾಜ್ಯ ಹೆದ್ದಾರಿಗಳ ರಸ್ತೆ ತಡೆ ನಡೆಸಿ ಕೇಂದ್ರದ ರೈತ ವಿರೋಧಿ ಧೋರಣೆಗಳನ್ನು ಖಂಡಿಸಿದ ಪ್ರತಿಭಟನಾಕಾರರು ಮಿನಿ ವಿಧಾನ ಸೌಧಕ್ಕೆ ತೆರಳಿ ಪ್ರಧಾನ ಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು.

    ಸಿಐಟಿಯು ಪ್ರಮುಖರಾದ ಹರೀಶ ನಾಯ್ಕ, ಆರ್.ಎಂ. ಮುಲ್ಲಾ, ಠಕ್ಕಪ್ಪ ಗುರಬಣ್ಣನವರ, ಪ್ರಕಾಶ ಚನಾಬತ್ತಿ, ಭುಜಂಗ ಚಿಬುಲಕರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಬ್ರೆಜಿಟಾ ಬೃಗಾಂಜಾ, ಶಶಿಕಲಾ ಹಿರೇಮಠ ಇತರರಿದ್ದರು. ಆಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಸದಸ್ಯರು ಇದ್ದರು.

    ಹಿರಿಯ ಕೃಷಿಕ ಗಜಾನನ ಭಟ್ಟ ಜಡ್ಡಿ ಉಪವಾಸ ಸತ್ಯಾಗ್ರಹ

    ಯಲ್ಲಾಪುರ: ವಿವಿಧ ರೈತಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಭಾರತ ಬಂದ್​ಗೆ ಸಾಂಕೇತಿಕ ಬೆಂಬಲ ವ್ಯಕ್ತಪಡಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಹಿರಿಯ ಕೃಷಿಕ ಗಜಾನನ ಭಟ್ಟ ಜಡ್ಡಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು. ಇವರ ಸತ್ಯಾಗ್ರಹಕ್ಕೆ ಬ್ಲಾಕ್ ಕಾಂಗ್ರೆಸ್ ಮುಖಂಡರು ಬೆಂಬಲ ನೀಡಿದರು. ನಂತರ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಎನ್. ಗಾಂವ್ಕಾರ ಮಾತನಾಡಿ, ತಾಲೂಕಿನಲ್ಲಿ ರೈತರ ಸಮಸ್ಯೆಗಳ ಬಗೆಗೆ ಧ್ವನಿ ಎತ್ತಬೇಕಾದ ರೈತ ಸಂಘ ಬಿಜೆಪಿಯ ಕೈಗೊಂಬೆಯಾಗಿ ಕಣ್ಮುಚ್ಚಿ ಕುಳಿತಿದೆ. ತಾಲೂಕಿನ ರೈತರ ಪರವಾಗಿ ಗಜಾನನ ಭಟ್ಟ ಪ್ರತಿಭಟನೆ ನಡೆಸಿದ್ದು, ಪಕ್ಷ ಬೆಂಬಲ ಸೂಚಿಸಿದೆ ಎಂದರು.

    ಗಜಾನನ ಭಟ್ಟ ಜಡ್ಡಿ ಮಾತನಾಡಿ, ರೈತರ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ ರೈತರ ಬದುಕನ್ನೇ ನಾಶ ಮಾಡಲು ಮುಂದಾಗಿದೆ. ಉಸ್ತುವಾರಿ ಸಚಿವರು ಕಾಂಗ್ರೆಸ್​ನಲ್ಲಿದ್ದಾಗ ಸರ್ಕಾರಗಳ ರೈತ ವಿರೋಧಿ ನಡೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈಗ ಮಂತ್ರಿಯಾಗಿದ್ದೂ ರೈತ ವಿರೋಧಿ ನೀತಿಗಳ ಬಗೆಗೆ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ಪ್ರಮುಖರಾದ ಎನ್. ಕೆ. ಭಟ್ಟ ಮೆಣಸುಪಾಲ್, ಲಾರೆನ್ಸ್ ಸಿದ್ದಿ, ಅಣ್ಣಪ್ಪ ನಾಯ್ಕ, ಸೀತಾ ಸಿದ್ದಿ, ಸರಸ್ವತಿ ಗುನಗಾ, ಪೂಜಾ ನೇತ್ರೇಕರ್ ಇತರರಿದ್ದರು.

    ರೈತಪರ ಸಂಘಟನೆಗಳ ಪ್ರತಿಭಟನೆ

    ದಾಂಡೇಲಿ: ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕಾಯ್ದೆ ಮತ್ತು ವಿದ್ಯುತ್ ಮಸೂದೆ ಹಿಂಪಡೆಯಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಕಳೆದ 12 ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ನಗರದಲ್ಲಿ ಮಂಗಳವಾರ ವಿವಿಧ ರೈತಪರ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಗೋಪಿ ಚವ್ಹಾಣ ಅವರ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್, ಎಸ್​ಎಫ್​ಐನ ಜಂಟಿ ಸಮಿತಿ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದವು. ಸಂಘಟನೆಗಳ ಮುಖಂಡರಾದ ಹರೀಶ ನಾಯ್ಕ, ಸಲೀಂ ಸೈಯದ್, ಇಮ್ರಾನ್ ಖಾನ್, ಉದಯ ನಾಯ್ಕ, ಟಿ.ಎಸ್. ನಾಯ್್ಕ ಡಿ. ಸ್ಯಾಮಸನ್, ರತ್ನ ದೀಪಾ, ರಾಮಾಂಜುನುಯ, ಮಂಜುಳಾ ಜುಟ್ಟಿ, ಮಹಾದೇವ ಡಿ. ರವಳೋಜಿ, ಜಗದೀಶ ನಾಯ್ಕ ಇತರರು ಪಾಲ್ಗೊಂಡಿದ್ದರು.

    ಅಂಕೋಲಾದಲ್ಲಿ ನೀರಸ ಪ್ರತಿಕ್ರಿಯೆ

    ಅಂಕೋಲಾ: ವಿವಿಧ ರೈತ ಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಭಾರತ ಬಂದ್​ಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ವ್ಯಾಪಾರ ವಹಿವಾಟುಗಳು, ಸಾರಿಗೆ ಸಂಚಾರ ಎಂದಿನಂತೆ ಸಹಜವಾಗಿ ಇದ್ದವು. ಕೆಲ ರೈತ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.

    ಕೃಷಿ ಸಂಬಂಧಿತ ಮೂರು ಕಾಯ್ದೆಗಳು ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡೆ 2020 ಅನ್ನು ರದ್ದು ಪಡಿಸುವಂತೆ ಆಗ್ರಹಿಸಿ ಮತ್ತಿತರ ಬೇಡಿಕೆಗಳನ್ನಿಟ್ಟು ದೇಶದಾದ್ಯಂತ ಬಂದ್​ಗೆ ಕರೆ ನೀಡಿದ್ದು, ವಿವಿಧ ರಾಜಕೀಯ ಪಕ್ಷಗಳು ಸಾರಿಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದರೂ, ಅಂಕೋಲಾದಲ್ಲಿ ಮಾತ್ರ ಬೆರಳೆಣಿಕೆಯ ರೈತ ಸಂಘಟನೆಯ ನಾಯಕರು, ಇತರರು ಪಾಲ್ಗೊಂಡಿದ್ದರು.

    ಈ ಸಂದರ್ಭದಲ್ಲಿ ಸಿಐಟಿಯು. ತಾಲೂಕು ಸಂಚಾಲಕ ಎಚ್.ಬಿ. ನಾಯಕ, ಕೆಪಿಆರ್​ಎಸ್ ಕಾರ್ಯದರ್ಶಿ ಸಂತೋಷ ನಾಯ್ಕ, ಪ್ರಮುಖರಾದ ರಾಜು ಗೌಡ, ಗಣೇಶ ಪಟಗಾರ ಇತರರು ಉಪಸ್ಥಿತರಿದ್ದರು. ಶಿರಸ್ತೆದಾರ್ ಅನುಪಮಾ ನಾಯ್ಕ ಮನವಿ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts